Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಪನ್ನಗೊಂಡ ಸ್ವಾಮಿಯ ಬ್ರಹ್ಮರಥೋತ್ಸವ! ಕಣ್ತುಂಬಿಕೊಂಡ ಭಕ್ತರು |  Brahmarathotsava at Kukke Subrahmanya

Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಪನ್ನಗೊಂಡ ಸ್ವಾಮಿಯ ಬ್ರಹ್ಮರಥೋತ್ಸವ! ಕಣ್ತುಂಬಿಕೊಂಡ ಭಕ್ತರು |  Brahmarathotsava at Kukke Subrahmanya

Last Updated:

ಕ್ಷೇತ್ರದ ಆನೆಯಾದ ಯಶಸ್ವಿ ದೇವರ ಮೆರವಣಿಗೆಯ ಮುಂದೆ ಸಾಗಿ, ರಥೋತ್ಸವ ಮುಗಿಯುವ ತನಕ ದೇವರ ಬಳಿಯಲ್ಲೇ ಇರುತ್ತದೆ‌. ಯಶಸ್ವಿ ಆನೆಯು ತನ್ನ ಸೊಂಡಿಲಿನಿಂದ ಮೊದಲಿಗೆ ರಥವನ್ನು ದೂಡುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ(Kukke Subramanya) ಚಂಪಾಷಷ್ಠಿ ಮಹೋತ್ಸವದ (Champashasti Mahotsav) ಹಿನ್ನಲೆ, ಕುಕ್ಕೆ ಪುರಾಧೀಶ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ(Bramha Rathotsava) ಮುಕ್ತಾಯಗೊಂಡಿದೆ. ಡಿಸೆಂಬರ್‌ 7 ರ ಮುಂಜಾನೆ 6.57 ರ ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿದೆ. ಅತ್ಯಂತ ಸಂಪ್ರದಾಯಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ರಥೋತ್ಸವಕ್ಕೆ ಊರ ಮತ್ತು ಪರವೂರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು (Devotees) ಸಾಕ್ಷಿಯಾಗಿದ್ದರು.

ವರ್ಷಂಪ್ರತಿ ಚಂಪಾಷಷ್ಠಿ ಮಹೋತ್ಸವದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಚೌತಿಯಂದು ಸ್ವಾಮಿಗೆ ಹೂವಿನ ರಥೋತ್ಸವ, ಪಂಚಮಿಯಂದು ಪಂಚಮಿ ಮತ್ತು ಷಷ್ಠಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಮುಂಜಾನೆ ನಡೆಯುವ ಈ ರಥೋತ್ಸವಕ್ಕೆ ಮೊದಲು ದೇವಸ್ಥಾನದ ಒಳಾಂಗಣದಲ್ಲಿ ದೇವರ ದರ್ಶನ, ಬಲಿ, ಉತ್ಸಾವಾದಿಗಳು ಜರುಗಿ, ದೇವರನ್ನು ರಥದ ಬಳಿ ಕರೆತರಲಾಗುತ್ತದೆ. ರಥೋತ್ಸವ ಆರಂಭಕ್ಕೆ ಮೊದಲು ಗರುಡವೊಂದು ರಥದ ಮೇಲೆ ಹಾರುತ್ತದೆ ಎನ್ನುವ ನಂಬಿಕೆಯಿದ್ದು, ಈ ನಂಬಿಕೆಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: Karnataka Weather Forecast: ಡಿಸೆಂಬರ್‌ 12 & 13ರಂದು ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ

ಕ್ಷೇತ್ರದ ಆನೆಯಾದ ಯಶಸ್ವಿ ದೇವರ ಮೆರವಣಿಗೆಯ ಮುಂದೆ ಸಾಗಿ, ರಥೋತ್ಸವ ಮುಗಿಯುವ ತನಕ ದೇವರ ಬಳಿಯಲ್ಲೇ ಇರುತ್ತದೆ‌. ಯಶಸ್ವಿ ಆನೆಯು ತನ್ನ ಸೊಂಡಿಲಿನಿಂದ ಮೊದಲಿಗೆ ರಥವನ್ನು ದೂಡುತ್ತದೆ. ಆ ಬಳಿಕ ರಥವನ್ನು ಭಕ್ತರೆಲ್ಲ ಸೇರಿ ಎಳೆಯುತ್ತಾರೆ. ರಥ ಎಳೆದ ಬಳಿಕ ಜಾತ್ರೆಯನ್ನು ಸುಸೂತ್ರವಾಗಿ ನಡೆಸಲು ಕಾರಣಕರ್ತರಾದವರಿಗೆ ದೇವರು ಗೌರವಿಸುವ ಪ್ರಕ್ರಿಯೆಯು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಸಂಪ್ರದಾಯದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ, ದೊಡ್ಡ ಮಟ್ಟದ ಈ ರಥೋತ್ಸವವನ್ನು ನೋಡುವುದೇ ಕಂಗಳಿಗೆ ಹಬ್ಬದಂತೆ.

ಸುಬ್ರಹ್ಮಣ್ಯ ಸ್ವಾಮಿಯ ಈ ರಥೋತ್ಸವದಲ್ಲಿ ಭಾಗಿಯಾಗಲು ಊರ ಹಾಗು ಪರವೂರಿನ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಕುಕ್ಕೆಯಲ್ಲಿ ಸೇರುತ್ತಾರೆ. ಈ ಬಾರಿಯೂ ಎಂದಿನಂತೆ ಕ್ಷೇತ್ರದಲ್ಲಿ ಯಾವುದೇ ಕುಂದುಕೊರತೆಗಳಿಲ್ಲದೆ ನಡೆಸಲಾಗಿದೆ. ವಿಶೇಷವೆಂದರೆ ಈ ರಥವನ್ನು ಬಿದಿರಿನ ಬೆತ್ತದಿಂದಲೇ ಎಳೆಯಲಾಗುತ್ತದೆ. ಕ್ಷೇತ್ರದ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯದವರು ಸ್ವಾಮಿಯ ಈ ಬ್ರಹ್ಮರಥವನ್ನು ನಿರ್ಮಿಸುತ್ತಾರೆ.