Last Updated:
ಕುಕ್ಕೆ ಸುಬ್ರಹ್ಮಣ್ಯದ ಆಕರ್ಷಣೆಗಳಲ್ಲಿ ಒಂದಾಗಿರುವ ದೇವರ ಮೀನುಗಳು, ಈ ಬಾರಿ ಷಷ್ಠಿ ಮಹೋತ್ಸವಕ್ಕೂ ಮೊದಲೇ ಕುಮಾರಧಾರಾ ನದಿಯ ಮೂಲಕ ಸ್ನಾನಘಟ್ಟದ ಬಳಿ ಬಂದಿವೆ.
ದಕ್ಷಿಣ ಕನ್ನಡ: ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಹಲವು ವಿಶೇಷತೆಗಳಿರುವ ಸ್ಥಳ. ಇಂತಹ ವಿಶೇಷತೆಗಳಲ್ಲಿ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟದ ಬಳಿ ಬರುವ ಮೀನುಗಳೂ ಒಂದು. ಕ್ಷೇತ್ರದಲ್ಲಿ ನಡೆಯುವ ಷಷ್ಠಿ ಮಹೋತ್ಸವದ ಮೊದಲು ಕುಮಾರಧಾರಾ ನದಿಯ (Kumaradhara River) ಮೂಲಕ ಸ್ನಾನಘಟ್ಟದ ಬಳಿ ಬರುವ ಈ ಮೀನುಗಳು ತೀರ್ಥಸ್ನಾನಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತದೆ.
ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಹಲವು ವಿಶೇಷತೆಗಳಿರುವ ಸ್ಥಳ. ಇಂತಹ ವಿಶೇಷತೆಗಳಲ್ಲಿ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟದ ಬಳಿ ಬರುವ ಮೀನುಗಳೂ ಒಂದು. ಕ್ಷೇತ್ರದಲ್ಲಿ ನಡೆಯುವ ಷಷ್ಠಿ ಮಹೋತ್ಸವದ ಮೊದಲು ಕುಮಾರಧಾರಾ ನದಿಯ ಮೂಲಕ ಸ್ನಾನಘಟ್ಟದ ಬಳಿ ಬರುವ ಈ ಮೀನುಗಳು ತೀರ್ಥಸ್ನಾನಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತದೆ.
ಅಕ್ಟೋಬರ್ ತಿಂಗಳಿನಲ್ಲೇ ಬಂದ ಮೀನುಗಳು
ದೇವರ ಮೀನುಗಳೆಂದು ಕರೆಯಲ್ಪಡುವ ಈ ಮೀನುಗಳು ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಸ್ನಾನಘಟ್ಟದ ಬಳಿ ಬಂದು ಸೇರುತ್ತವೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ನಾನಘಟ್ಟದ ಬಳಿ ಸೇರುವ ದೇವರ ಮೀನುಗಳು ಈ ಬಾರಿ ಅಕ್ಟೋಬರ್ ತಿಂಗಳಿನಲ್ಲೇ ಕಂಡು ಬಂದಿವೆ.
ಮೀನುಗಳಿಗೆ ಆಹಾರ ನೀಡುವ ಭಕ್ತರು
ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ತೀರ್ಥಸ್ನಾನಕ್ಕಾಗಿ ಕುಮಾರಧಾರಾ ಸ್ನಾನಘಟ್ಡಕ್ಕೆ ಬರುತ್ತಾರೆ. ನದಿಯಲ್ಲಿ ತೀರ್ಥಸ್ನಾನ ಮಾಡುವ ಭಕ್ತಾದಿಗಳನ್ನು ತನ್ನ ಕಚಗುಳಿಯ ಮೂಲಕ ಈ ಮೀನುಗಳು ಸ್ವಾಗತಿಸುತ್ತವೆ. ಇನ್ನು ಇಲ್ಲಿ ಬರುವ ಭಕ್ತಾದಿಗಳು ಮೀನುಗಳಿಗೆ ಅಕ್ಕಿ ಮತ್ತು ಹೊದ್ಲು ಹಾಕಿ ಸಂಭ್ರಮಿಸುತ್ತಾರೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಕಂಡು ಬರುವ ಈ ದೇವರ ಮೀನುಗಳಿಗೆ ಆಹಾರ ಹಾಕಿದಲ್ಲಿ ಚರ್ಮರೋಗ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಇದನ್ನೂ ಓದಿ: Money: ಮದುವೆಯಾದ್ಮೇಲೆ ಈ ಕೆಲಸ ಮಾಡೋದನ್ನು ಮರೆಯಲೇಬೇಡಿ! ಇಲ್ಲದಿದ್ರೆ ನಿಮಗೆ ಸಮಸ್ಯೆ ಹೆಚ್ಚು!
ಮೀನುಗಳನ್ನು ಬೇಟೆಯಾಡುವುದು ನಿಶಿದ್ಧ
ಕುಮಾರಧಾರಾ ನದಿಯಲ್ಲೇ ಹೆಚ್ಚು ಕಂಡುಬರುವ ಈ ಮೀನುಗಳು ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲೇ ಇರುವ ಏನೆಕಲ್ಲು ಶಂಕಪಾಲ ಸುಬ್ರಹ್ಮಣ್ಯ ಕ್ಷೇತ್ರದಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದ ಕಡೆಗೆ ಸಂಚರಿಸುತ್ತವೆ. ಈ ಮೀನುಗಳನ್ನು ಬೇಟೆಯಾಡುವುದಾಗಲಿ, ತಿನ್ನುವುದಾಗಲಿ ನಿಶಿದ್ಧವಾಗಿದೆ.
ಇನ್ನು, ಈ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಕುಮಾರಧಾರಾ ನದಿಯಲ್ಲಿ ಈ ಮೀನುಗಳನ್ನು ಹಿಡಿಯುವುದು ಅಪರಾಧವೂ ಆಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಲವು ಆಕರ್ಷಣೆಗಳಲ್ಲಿ ದೇವರ ಮೀನುಗಳೂ ಒಂದಾಗಿದ್ದು, ಭಕ್ತರ ಮನಸ್ಸನ್ನೂ ಸೂರೆಗೊಳ್ಳುತ್ತಿವೆ.
Dakshina Kannada,Karnataka
October 18, 2024 2:44 PM IST