Last Updated:
ಸಮುದ್ರ ಮಟ್ಟದಿಂದ ಸುಮಾರು ಸಾವಿರ ಅಡಿ ಎತ್ತರವಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಅದೇ ರೀತಿ ಪ್ರತೀ ತಿಂಗಳ ಸಂಕ್ರಾಂತಿಯಂದು ಈ ದೈವಸ್ಥಾನದಲ್ಲಿ ದೀಪ ಬೆಳಗಿಸಿ ಪ್ರಾರ್ಥಿಸುವ ಸಂಪ್ರದಾಯವೂ ಇದೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಕ್ಷೇತ್ರಗಳಲ್ಲಿ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ಕ್ಷೇತ್ರ, ನರಹರಿ ಕ್ಷೇತ್ರ ಅತ್ಯಂತ ಫೇಮಸ್ ಆಗಿದೆ. ಆದರೆ ಇಂತಹುದೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಶ್ರದ್ಧಾಕೇಂದ್ರಗಳಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದ ಮಾಡತ್ತಡ್ಕ ಎಂಬಲ್ಲಿರುವ ಮಲರಾಯ ಮತ್ತು ಮೂವರು ದೈವಂಗಳ ಕ್ಷೇತ್ರವೂ ಒಂದು. ಇಲ್ಲಿ ಮಲರಾಯ ದೈವದ ದೈವಸ್ಥಾನ ಬೆಟ್ಟದಿಂದ ಕೆಳಗಿದ್ದರೆ, ಬೆಟ್ಟದ ಮೇಲೆ ಮೂವರು ದೈವಂಗಳ ಕ್ಷೇತ್ರವಿದೆ. ಸಮುದ್ರ ಮಟ್ಟದಿಂದ ಸುಮಾರು ಸಾವಿರ ಅಡಿ ಎತ್ತರವಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಅದೇ ರೀತಿ ಪ್ರತೀ ತಿಂಗಳ ಸಂಕ್ರಾಂತಿಯಂದು ಈ ದೈವಸ್ಥಾನದಲ್ಲಿ ದೀಪ ಬೆಳಗಿಸಿ ಪ್ರಾರ್ಥಿಸುವ ಸಂಪ್ರದಾಯವೂ ಇದೆ.
ಅತ್ಯಂತ ಎತ್ತರದ ಒಂದೇ ಕಪ್ಪು ಕಲ್ಲಿನ ಮೇಲೆ ನಿರ್ಮಾಣಗೊಂಡಿರುವ ಈ ದೈವಸ್ಥಾನದ ಮೇಲೆ ಪ್ರಕೃತಿಯ ಸೊಬಗನ್ನು ನೋಡೋದೇ ಕಣ್ಣಿಗೆ ಹಬ್ಬ. ಕ್ಷೇತ್ರದ ಪ್ರಧಾನ ದೈವ ಮಲರಾಯನಾಗಿದ್ದು, ಮಲರಾಯ ದೈವದ ಜೊತೆಗಿರುವ ಮೂವರು ದೈವಂಗಳು ಎತ್ತರದ ಬೆಟ್ಟದ ಮೇಲೆ ನೆಲೆಯಾದ ಹಿನ್ನಲೆಯಲ್ಲಿ ಅವುಗಳಿಗಾಗಿ ಬೆಟ್ಟದ ಮೇಲೆಯೇ ಸ್ಥಾನವನ್ನು ಕಟ್ಟಲಾಗಿದೆ. ಮಹಾಭಾರತದ ಕಾಲದಲ್ಲಿ ಪಂಚ ಪಾಂಡವರು ವನವಾಸದಲ್ಲಿದ್ದ ಸಂದರ್ಭದಲ್ಲಿ ಇದೇ ಪರಿಸರದಲ್ಲಿ ಓಡಾಡಿದ್ದರು ಎನ್ನುವ ಕಥೆಗಳೂ ಇಲ್ಲಿದೆ.
ಇದನ್ನೂ ಓದಿ: Miyazaki Mango: ಜಗತ್ತಿನ ಅತೀ ದುಬಾರಿ ಮಾವಿನ ಹಣ್ಣಿನ ಕೃಷಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣ ಸೂಕ್ತವೇ?
ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಈ ಕ್ಷೇತ್ರದಿಂದ ಜಿಲ್ಲೆಯ ಇಡೀ ಸುತ್ತಳತೆಯನ್ನು ನೋಡುವ ಅವಕಾಶವೂ ಇದೆ. ಕಪ್ಪು ಕಲ್ಲುಗಳ ಗಣಿಯಂತಿರುವ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿವೆ. ಈ ಗಣಿಗಾರಿಕೆಯಲ್ಲಿ ಕೆಲವೊಂದು ಸಕ್ರಮ ಹಾಗು ಹಲವು ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆಗಳು ನಡೆಯುತ್ತಿದೆ. ಕ್ಷೇತ್ರದ ಕೆಳಭಾಗದಲ್ಲಿ ಕಪ್ಪು ಕಲ್ಲುಗನ್ನು ಒಡೆಯುವ ಕಾರಣಕ್ಕಾಗಿ ಈ ಭಾಗದಲ್ಲಿ ಭಾರೀ ಪ್ರಮಾಣದ ಸ್ಪೋಟಕಗಳನ್ನೂ ಬಳಸಲಾಗುತ್ತಿದೆ. ಗಣಿಗಾರಿಕೆ ಪ್ರದೇಶದಲ್ಲಿ ಮಾತ್ರವಲ್ಲದೆ ಸ್ಫೋಟಕಗಳನ್ನು ಹಲವರು ಅಕ್ರಮವಾಗಿ ಶೇಖರಿಸಿಟ್ಟಿರುವ ಘಟನೆಗಳೂ ನಡೆದಿವೆ.
ಈ ಕಾರಣಕ್ಕಾಗಿ ಬೆಟ್ಟದ ಮೇಲಿರುವ ಈ ಕ್ಷೇತ್ರಕ್ಕೂ ಸ್ಪೋಟಕಗಳಿಂದ ಹಾನಿಯಾಗುವ ಲಕ್ಷಣಗಳೂ ಹೆಚ್ಚಿವೆ. ಯಾವ ರೀತಿ ಬಂಟ್ವಾಳದ ಅನಂತಾಡಿ ಭಾಗದಲ್ಲಿರುವ ಸುಳ್ಳಮಲೆ ಬೆಟ್ಟದ ಭಾಗದಲ್ಲಿ ಕಪ್ಪು ಕಲ್ಲು ಗಣಿಗಾರಿಕೆಗಾಗಿ ಸ್ಪೋಟಕಗಳನ್ನು ಬಳಸಿರುವುದರ ಪರಿಣಾಮವಾಗಿ ಭೂಗರ್ಭ ಜಲಪಾತದಲ್ಲಿ ನೀರಿನ ಹರಿವಿನ ಪರಿಣಾಮ ಕಡಿಮೆಯಾಗಿದೆಯೋ, ಅದೇ ರೀತಿ ಈ ದೈವಸ್ಥಾನದ ಅಸ್ತಿತ್ವದ ಆತಂಕವೂ ಎದುರಾಗುವ ಸಾಧ್ಯತೆಯೂ ಇದೆ.
Dakshina Kannada,Karnataka
March 25, 2025 1:56 PM IST