Last Updated:
ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಂಡಿದ್ದು, ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಶಾಲೆಯ ಶಿಸ್ತು, ನಿಯಮಗಳ ಪರಿಚಯ ಕಾರ್ಯಕ್ರಮವೂ ಆಯೋಜಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆಯಲ್ಲೂ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಕೃತಿ- ಸಂಸ್ಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವ ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಗುರುಕುಲ ಮಾದರಿಯಲ್ಲಿ ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು.
ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಜೊತೆಗೆ ಸಿಹಿಯನ್ನು ನೀಡಿ ಅಭಿನಂದಿಸಲಾಯಿತು. ಕೇವಲ ಮೊದಲ ಬಾರಿಗೆ ಶಾಲೆಗೆ ಬಂದ ಮಕ್ಕಳನ್ನಲ್ಲದೆ, ಈ ಹಿಂದೆ ಕಲಿಯುತ್ತಿದ್ದ ಮಕ್ಕಳನ್ನೂ ಸೇರಿಸಿ ಬರಮಾಡಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿಗಳು, ಶಿಕ್ಷಕ-ಶಿಕ್ಷಕಿಯರು ಮಕ್ಕಳನ್ನು ಬರಮಾಡಿಕೊಂಡರು.
ಶಾಲೆಗೆ ಮರಳಿ ಬಂದ ಮಕ್ಕಳು ಶಾಲೆಯ ಸಂಪ್ರದಾಯದಂತೆ ಶಿಕ್ಷಕ-ಶಿಕ್ಷಕಿಯರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದವನ್ನೂ ಪಡೆದಿದ್ದಾರೆ. ಶಾಲೆಯ ಪ್ರಾರಂಭೋತ್ಸವದ ದಿನವೇ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳಿಗೆ ಶಾಲೆಯ ಶಿಸ್ತು, ಶಾಲೆಯ ನಿಯಮಗಳ ಪರಿಚಯವನ್ನು ಮಾಡುವ ಉದ್ದೇಶವೂ ಈ ಕಾರ್ಯಕ್ರಮ ಆಯೋಜನೆ ಹಿಂದಿರುವ ಪ್ರಮುಖ ಉದ್ದೇಶವೂ ಆಗಿದೆ. ಮೊದಲ ಬಾರಿಗೆ ಶಾಲೆಯ ಮೆಟ್ಟಿಲೇರುವ ಮಕ್ಕಳು ತಮ್ಮ ಪೋಷಕರನ್ನು ಬಿಟ್ಟು ಬರಲು ನಿರಾಕರಿಸಿ ಗೋಳಾಡುವ ಮಕ್ಕಳನ್ನು ತಮ್ಮ ಮಕ್ಕಳಂತೆ ಎತ್ತಿಕೊಂಡು ಹೋಗುವ ಶಿಕ್ಷಕಿಯರ ದೃಶ್ಯಗಳು ಶಾಲೆಯ ಪ್ರಾರಂಭೋತ್ಸವದ ದಿನ ಎಲ್ಲೆಡೆ ಕಂಡುಬಂದಿದೆ.
Puttur,Dakshina Kannada,Karnataka
June 09, 2025 12:17 PM IST