Last Updated:
ನಂದಿ ರಥದ ಮೂಲಕ ರಾಜ್ಯದಾದ್ಯಂತ ಸುಮಾರು 25 ಲಕ್ಷ ರೂಪಾಯಿ ಕಿಟ್ ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಗೋವಿನ ಸಂರಕ್ಷತೆಯ ಮಹತ್ವವನ್ನು ಅಷ್ಟೂ ಜನರಿಗೆ ತಲುಪಿಸಲಾಗುತ್ತದೆ.
ಮಂಗಳೂರು: ಗೋ ಆಧಾರಿತ ಕೃಷಿಯ (Cow Based Natural Farming) ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ (Karnataka Goseva Gatividhi), ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ರಾಜ್ಯದಾದ್ಯಂತ ನಂದಿ ರಥಯಾತ್ರೆಯನ್ನು ಆರಂಭಿಸಿದ್ದು, ಈ ರಥ ಇದೀಗ ದಕ್ಷಿಣ ಕನ್ನಡ (Dakshina Kannada News) ಜಿಲ್ಲೆಯನ್ನು ಪ್ರವೇಶಿಸಿದೆ. ಒಟ್ಟು 90 ದಿನಗಳ ಕಾಲ ಈ ನಂದಿ ರಥ (Nandi Ratha Yatre) ರಾಜ್ಯದ ಎಲ್ಲಾ ತಾಲೂಕುಗಳನ್ನು ಸುತ್ತಿ, ಮಂಗಳೂರಿನಲ್ಲಿ (Mangaluru) ಏಪ್ರಿಲ್ 6 ರಂದು ಇದರ ಸಮಾರೋಪ ನಡೆಯಲಿದೆ.
ರಥದಲ್ಲಿ ನಂದಿ ಪೂಜೆ ನೆರವೇರಿಸಲು 150 ನಿಗದಿ
ಬಂಟ್ವಾಳದ ಪೊಳಲಿ ದೇವಸ್ಥಾನದಿಂದ ಡಿಸೆಂಬರ್ 31, 2024 ರಂದು ರಥಯಾತ್ರೆಯನ್ನು ಆರಂಭಿಸಲಾಗಿದ್ದು, ಈ ರಥ ಇದೀಗ ರಾಜ್ಯದ ಬಹುತೇಕ ತಾಲೂಕುಗಳನ್ನು ಕ್ರಮಿಸಿ ಇದೀಗ ಜಿಲ್ಲೆಗೆ ಆಗಮಿಸಿದ್ದು, ಸುಳ್ಯ ಮೂಲಕ ಜಿಲ್ಲೆಗೆ ಆಗಮಿಸಿರುವ ಈ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಈ ರಥದಲ್ಲಿ ಎರಡು ಜೀವಂತ ನಂದಿಗಳಿದ್ದು, ಪ್ರತಿ ತಾಲೂಕಿನಲ್ಲಿ ಈ ನಂದಿಗಳಿಗೆ ಜನರು ಆರತಿ ಬೆಳಗಿ ಪೂಜಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಅಲ್ಲದೆ ಈ ರಥದಲ್ಲಿ ನಂದಿ ಪೂಜೆ ನೆರವೇರಿಸಲು 150 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಸುಮಾರು 25 ಲಕ್ಷ ರೂಪಾಯಿ ಕಿಟ್ ವಿತರಣೆ
ಗೋ ಸೇವೆ ಮಾಡುವವರಿಗೆ ಒಂದು ಕಿಟ್ ಕೂಡಾ ನೀಡಲಾಗುತ್ತಿದ್ದು, ಈ ಕಿಟ್ ನಲ್ಲಿ ಗೋಮಯದಿಂದ ಮಾಡಿದ ಐದು ಹಣತೆಗಳು, ಗೋ ಮೂತ್ರ, ಶುದ್ಧ ಎಳ್ಳೆಣ್ಣೆ ಹಾಗೂ ಇತರ ವಸ್ತುಗಳನ್ನೂ ನೀಡಲಾಗುತ್ತದೆ. ಗೋಮಯದಿಂದ ಮಾಡಿದ ಹಣತೆಯನ್ನು ಏಪ್ರಿಲ್ 5ರ ರಾಮನವಮಿಯಂದು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಹಚ್ಚಬೇಕು ಅನ್ನೋದು ಈ ಹಣತೆಗಳನ್ನು ನೀಡುವ ಹಿಂದಿರುವ ಉದ್ದೇಶವಾಗಿದೆ.
ಇದನ್ನೂ ಓದಿ: Kolar: ವಿಜೃಂಭಣೆಯಿಂದ ನಡೆದ ನಂಬಿಹಳ್ಳಿ ಬ್ರಹ್ಮ ರಥೋತ್ಸವ; RCB ಕಪ್ ಗೆಲ್ಲಲು ಅಭಿಮಾನಿಗಳ ಹರಕೆ
ನಂದಿ ರಥದ ಮೂಲಕ ರಾಜ್ಯದಾದ್ಯಂತ ಸುಮಾರು 25 ಲಕ್ಷ ರೂಪಾಯಿ ಕಿಟ್ ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಗೋವಿನ ಸಂರಕ್ಷತೆಯ ಮಹತ್ವವನ್ನು ಅಷ್ಟೂ ಜನರಿಗೆ ತಲುಪಿಸಲಾಗುತ್ತದೆ. ಈ ಯಾತ್ರೆಯಿಂದ ಒಟ್ಡುಗೂಡಿದ ಹಣವನ್ನು ಗೋಶಾಲೆಗಳ ಅಭಿವೃದ್ಧಿ ಮತ್ತು ಇತರ ವ್ಯವಸ್ಥೆಗಳಿಗಾಗಿ ವಿನಿಯೋಗಿಸಲೂ ಗೋ ಸೇವಾ ಗತಿವಿಧಿ ಕರ್ನಾಟಕ ಸಮಿತಿ ಉದ್ದೇಶಿಸಿದೆ.
Dakshina Kannada,Karnataka
March 16, 2025 6:51 PM IST