Last Updated:
ಕೊರೋನಾದ ಬಳಿಕ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರೂ, ಸುಲಭ ಜೀವನ ಬಯಸದೇ ಗ್ರಾಮೀಣ ಭಾಗದಲ್ಲಿ ಉದ್ಯಮವನ್ನು ಶುರು ಮಾಡಬೇಕೆಂದು ಈಗ ಕೆಫೆಯನ್ನು ಆರಂಭಿಸಿದ್ದಾರೆ. ಉದ್ಯೋಗದ ಜೊತೆಗೆ ಉದ್ಯಮವನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ: ಈ ಕಾಂಪಿಟೇಷನ್ ಯುಗದಲ್ಲಿ ಬ್ಯುಸಿನೆಸ್(Business) ಮಾಡೋದು ಒಂದು ರೀತಿಯಾಗಿ ಹಗ್ಗದ ಮೇಲಿನ ನಡಿಗೆ ಇದ್ದಂತೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ(Rural area) ಬ್ಯುಸಿನೆಸ್ ಮಾಡೋದು ಒಂದು ದೊಡ್ಡ ಸವಾಲು. ಆ ಸವಾಲನ್ನೇ ದಿಟ್ಟವಾಗಿ ಸ್ವೀಕರಿಸಿ ಹೊಸ ಉದ್ಯಮ ಶುರು ಮಾಡಿದ್ದಾರೆ ಐಟಿ ಹುಡುಗಿ(IT Girl). ಹೌದು ಕೈ ತುಂಬಾ ಸಂಬಳ, ಈಸಿ ಲೈಫ್ ಎಲ್ಲವೂ ಇದ್ರೂ ತಾನು ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಆಹಾರ ಉದ್ಯಮಕ್ಕೆ ಯುವತಿಯೋರ್ವರು ಕೈ ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಶ್ರೇಯಾ ಶೆಟ್ಟಿ ಎಂಬ ಯುವತಿ ಹೊಸ ಉದ್ಯಮ ಆರಂಭಿಸಿದ್ದಾರೆ. ಎಂಎಸ್ಸಿ ಪದವೀಧರೆಯಾಗಿ, ಸದ್ಯ ಬೆಂಗಳೂರು ಮೂಲದ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೇಯಾ ಊರಲ್ಲಿ ತಾನೂ ಉದ್ಯಮ ಮಾಡಬೇಕು. ತನ್ನದೂ ಸ್ವಂತ ಅಂತಾ ಏನಾದರೂ ಇರಬೇಕೆಂಬ ಆಸೆಯಿಂದ ಉಜಿರೆಯಲ್ಲಿ ಕೆಫೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: Mandya: ಪಕ್ಷಿಗಳಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡಿದ ಧರ್ಮಸ್ಥಳ ಸಂಘಟನೆಯ ಸದಸ್ಯರು!
ಮೂಲತಃ ಬೆಳ್ತಂಗಡಿಯ ಮಡಂತ್ಯಾರು ಸಮೀಪದ ಬಳ್ಳಮಂಜ ನಿವಾಸಿಯಾಗಿರುವ ಶ್ರೇಯಾ, ಕಾಲೇಜು ವಿದ್ಯಾಭ್ಯಾಸ ಮಾಡಿದ್ದು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಬಯೋಟೆಕ್ನಾಲಜಿ ಪದವಿ ಪಡೆದು ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕೊರೋನಾದ ಬಳಿಕ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರೂ, ಸುಲಭ ಜೀವನ ಬಯಸದೇ ಗ್ರಾಮೀಣ ಭಾಗದಲ್ಲಿ ಉದ್ಯಮವನ್ನು ಶುರು ಮಾಡಬೇಕೆಂದು ಈಗ ಕೆಫೆಯನ್ನು ಆರಂಭಿಸಿದ್ದಾರೆ. ಉದ್ಯೋಗದ ಜೊತೆಗೆ ಉದ್ಯಮವನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅಂದಾಜು ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ‘ಕ್ಲೌಡ್ ಕಾಸ್ಟಲ್ ಕೆಫೆ’ ಎಂಬ ಉದ್ಯಮವನ್ನು ಆರಂಭಿಸಿರುವ ಶ್ರೇಯಾ, ತನ್ನದೇ ಕಲ್ಪನೆಯಲ್ಲಿ ಕೆಫೆಯಲ್ಲಿ ಅದ್ಭುತ ಇಂಟೀರಿಯರ್ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದ್ದಂತೆ ಉಜಿರೆಯಲ್ಲೂ ಬರ್ತ್ ಡೇ ಸೆಲೆಬ್ರೇಷನ್ ಪಾಯಿಂಟ್ ಮಾಡಬೇಕು ಅನ್ನೋದು ಶ್ರೇಯಾ ಅವರಲ್ಲಿದ್ದ ಮೊದಲ ಆಲೋಚನೆ. ಅದರ ಜೊತೆಗೆ ಈಗ ಲಸ್ಸಿ, ತರಹೇವಾರಿ ಜ್ಯೂಸ್, ಹಾಟ್ ಬೇವರೇಜಸ್‌ಗಳನ್ನು ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಕುಟುಂಬದ ಬೆಂಬಲದ ಜೊತೆಗೆ ಏಕಾಂಗಿಯಾಗಿ ಉದ್ಯಮ ಆರಂಭಿಸಿ ಈಗ ಯಶಸ್ಸಿನ ಹಾದಿಯಲ್ಲಿದ್ದಾರೆ.
ಮಹಿಳಾ ಉದ್ಯಮಿಯಾಗಿದ್ದುಕೊಂಡು ಸಾಧಿಸಿ ತೋರಿಸಬೇಕು ಎನ್ನೋದು ಶ್ರೇಯಾ ಅವರ ಆಸೆ. ಮಾಲಕಿಯಾದರೂ ಮಾಲಕತನ ತೋರಿಸದೇ ಪ್ರತೀ ಗ್ರಾಹಕರ ಬಳಿ ಆರ್ಡರ್ ಪಡೆದುಕೊಳ್ಳೋದು, ಗ್ರಾಹಕರನ್ನು ಕೇವಲ ಗ್ರಾಹಕರನ್ನಾಗಿ ನೋಡದೇ ಸ್ನೇಹಿತರನ್ನಾಗಿ ನೋಡಬೇಕು. ನಗುಮೊಗದ ಸೇವೆ ನೀಡಿದರೆ ಅವರಿಗೂ ಹಿತ ಅನುಭವವಾಗುತ್ತದೆ ಅನ್ನೋದು ಶ್ರೇಯಾ ಅವರ ಮಾತು.
Dakshina Kannada,Karnataka
March 23, 2025 1:15 PM IST