Last Updated:
ಅದರಲ್ಲೂ ಪ್ರಪಂಚದಲ್ಲಿಯೇ 777 ಮಂದಿಯಲ್ಲಷ್ಟೇ ಇರುವ Porsche Cayman S edition ONE ಕಾರು ಮಂಗಳೂರಿನಲ್ಲಿದೆ. ವಿಶೇಷವೆಂದರೆ ಇಡೀ ಭಾರತದಲ್ಲಿ ಈ ಕಾರು ಮಂಗಳೂರಿನಲ್ಲಿ ಮಾತ್ರ ಇದೆಯಂತೆ.
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕದ್ರಿ ಪಾರ್ಕ್ ಬಳಿ ಕುಡ್ಲದ ಐಷಾರಾಮಿ ಕಾರು, ಬೈಕ್‌ಗಳ ಪ್ರದರ್ಶನ ನಡೆಯಿತು. ಸುಮಾರು 25 ಸೂಪರ್ ಬೈಕ್‌ಗಳು, 12 ಐಷಾರಾಮಿ ಕಾರುಗಳು ಪ್ರದರ್ಶನದಲ್ಲಿದ್ದವು. Aston martin vantage, Porsche Cayman S edition ONE, Lamborghini Huracan, Maserati GT ಮುಂತಾದ ಐಷಾರಾಮಿ ಕಾರುಗಳು, MV Augusta DRAGSTER 800RR, Honda CBR1000RR REPSOL, Harley Davidson, BMW, Yamaha, Kawasaki, Triumph ಮುಂತಾದ ಸೂಪರ್ ಬೈಕ್‌ಗಳು ಪ್ರದರ್ಶನದಲ್ಲಿದ್ದು, ಬೈಕ್, ಕಾರು ಪ್ರಿಯರ ಗಮನ ಸೆಳೆಯಿತು.
ಅದರಲ್ಲೂ ಪ್ರಪಂಚದಲ್ಲಿಯೇ 777 ಮಂದಿಯಲ್ಲಷ್ಟೇ ಇರುವ Porsche Cayman S edition ONE ಕಾರು ಮಂಗಳೂರಿನಲ್ಲಿದೆ. ವಿಶೇಷವೆಂದರೆ ಇಡೀ ಭಾರತದಲ್ಲಿ ಈ ಕಾರು ಮಂಗಳೂರಿನಲ್ಲಿ ಮಾತ್ರ ಇದೆಯಂತೆ. MV Augusta DRAGSTER 800RR ಎಂಬ ಸೂಪರ್ ಬೈಕ್ ಪ್ರಪಂಚದಲ್ಲಿ ಕೇವಲ 200 ಇದ್ದು, ಭಾರತದಲ್ಲಿ ಕೇವಲ 62 ಮಾತ್ರವಿದೆ. ಅದರಲ್ಲಿ ಒಂದು ಬೈಕ್ ಮಂಗಳೂರಿನಲ್ಲಿದೆ. ಇಂತಹ ವಿಶೇಷ ಕಾರು ಬೈಕ್‌ಗಳು ಈ ಪ್ರದರ್ಶನದಲ್ಲಿತ್ತು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷವೆಂದರೆ ಶಾಸಕ ವೇದವ್ಯಾಸ ಕಾಮತ್ ಅವರು ಹಾರ್ಲೇ ಡೇವಿಡ್‌ಸನ್ ಬೈಕ್ ಏರಿ ಒಂದು ರೌಂಡ್ ಹೊಡೆದು ಗಮನಸೆಳೆದರು. ಒಟ್ಟಿನಲ್ಲಿ ಜಿಲ್ಲಾಡಳಿತದಿಂದ ಆಯೋಜನೆಗೊಂಡ ವಿಶೇಷ ಐಷಾರಾಮಿ ಕಾರು, ಬೈಕ್‌ಗಳ ಪ್ರದರ್ಶನ ಯುವಜನತೆಯ ಮೆಚ್ಚುಗೆಗೆ ಕಾರಣವಾಯಿತು. ಯುವಕರು ಕಾರು, ಬೈಕ್‌ಗಳ ಫೋಟೋ ಕ್ಲಿಕ್ಕಿಸಿ, ರೀಲ್ಸ್ ಮಾಡಿ ಖುಷಿಪಟ್ಟರು.
Dakshina Kannada,Karnataka
January 06, 2025 6:07 PM IST