Dakshina Kannada: ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಶಿವನ ಮೂರ್ತಿ ನಿರ್ಮಾಣ- ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ! | Dakshina Kannada: Construction of the largest Shiva statue in South India – Brahmakalashot soon

Dakshina Kannada: ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಶಿವನ ಮೂರ್ತಿ ನಿರ್ಮಾಣ- ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ! | Dakshina Kannada: Construction of the largest Shiva statue in South India – Brahmakalashot soon

Last Updated:

ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆ, ಧ್ಯಾನ ಮಾಡುವವರಿಗೆ ಧ್ಯಾನ ಕೇಂದ್ರ, ನೃತ್ಯ, ಸಂಗೀತ ಕಛೇರಿಗೆ ಮಂದಿರ ನಿರ್ಮಾಣ, ವಸತಿ ಗೃಹದ ನಿರ್ಮಾಣ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಮದುವೆ ಸಭಾಂಗಣದ ನಿರ್ಮಾಣ ಮಾಡಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸಾಮಾನ್ಯವಾಗಿ ಶಿವನ ಆರಾಧನೆ(Worship of Shiva) ಲಿಂಗರೂಪದಲ್ಲಿ ಇರುತ್ತದೆ‌. ಇದಕ್ಕೆ ಅಪವಾದವೆಂಬಂತೆ ಮುರುಡೇಶ್ವರದಲ್ಲಿ, ಕೊಯಮತ್ತೂರಿನ ಈಶದಲ್ಲಿ ಬೃಹತ್ ಗಾತ್ರದ ಶಿವನ ಮೂರ್ತಿಯನ್ನು ಕಾಣಬಹುದು. ಇದೀಗ ಮಂಗಳೂರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ಮಹಾಕಾಲೇಶ್ವರನ‌ ಮೂರ್ತಿ(Biggest Mahakaleshwara Murti) ನಿರ್ಮಾಣವಾಗಿದೆ.

ಹೌದು… ಮಂಗಳೂರಿನ ಹೊರವಲಯದ ಗುರುಪುರದ ಸುಕ್ಷೇತ್ರದಲ್ಲಿ ಈ ಬೃಹತ್ ಗುರುಮಹಾಕಾಲೇಶ್ವರ ಮೂರ್ತಿಯನ್ನು ಕಾಣಬಹುದು. ಸುಕ್ಷೇತ್ರದ ಆಡಳಿತಾಧಿಕಾರಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರು ಈ ಮೂರ್ತಿ ನಿರ್ಮಾಣದ ರೂವಾರಿ. ಗುರುಪುರ ಹಲವಾರು ಮಠ-ಮಂದಿರವಿರುವ ಸ್ಥಳ. ಅದರಂತೆ ಹಿಂದೆ ಈ ಸ್ಥಳದಲ್ಲಿ ಉತ್ತರದ ಉಜ್ಜಯಿನಿಯ ಆಗಮಿಸಿದ ಅವಧೂತರೊಬ್ಬರು ನೆಲೆಸಿದ್ದರಂತೆ. ಅವರು ಮಣ್ಣಿನಿಂದ ಮಾಡಿದ ಬೃಹತ್ ಮಹಾಕಾಲನ ಲಿಂಗ ನಿರ್ಮಿಸಿ ಆರಾಧನೆ ಮಾಡುತ್ತಿದ್ದರಂತೆ. ಜೊತೆಗೆ ಅಲ್ಲೊಂದು ತೀರ್ಥಕೆರೆ ನಿರ್ಮಿಸಿದ್ದರಂತೆ. ಅವರು ಈ ಸ್ಥಳ ತೊರೆದು ಬೇರೆಡೆಗೆ ಹೋದ ಬಳಿಕ ಈ ಸಾನಿಧ್ಯವೂ ಅಜೀರ್ಣಾವಸ್ಥೆಗೆ ತಲುಪಿತು‌.

ಬಳಿಕ ಈ ಸ್ಥಳದಲ್ಲಿ ಮಹಾನ್ ಸಾನಿಧ್ಯ ಇರುವುದನ್ನು ಬ್ರಹ್ಮಶ್ರೀ ಕೆ.ಎಸ್.ನಿತ್ಯಾನಂದರು ಗುರುತಿಸಿದ್ದಾರೆ. ಅವರ ಸೂಚನೆ ಪ್ರಕಾರ ವರ್ಧಮಾನ ಗುರುಪ್ರಸಾದ ಶೆಟ್ಟಿಯವರು ಮಹಾಕಾಲೇಶ್ವರನ ಮೂರ್ತಿ ಸ್ಥಾಪನೆಗೆ ಮುಂದಡಿ ಇಟ್ಟಿದ್ದಾರೆ. ಇಲ್ಲಿನ ಮಹಾಕಾಲೇಶ್ವರನ ಮೂರ್ತಿ ಏಕಶಿಲಾ ವಿಗ್ರಹದಲ್ಲಿ‌ ನಿರ್ಮಾಣವಾಗಿದೆ. 22 ಅಡಿ ಎತ್ತರದ ಪೀಠದ ಮೇಲೆ 23 ಅಡಿ ಎತ್ತರದ ಮೂರ್ತಿ ನಿರ್ಮಾಣವಾಗಿದೆ. ಕಮಲದ ಮೇಲೆ ದೃಢ ಭಂಗಿಯಲ್ಲಿನ ನಿಂತ ಷಡ್ಭುಜದ ಮೂರ್ತಿ ಇದಾಗಿದೆ. ಬಲ ಕೈಗಳಲ್ಲಿ ಡಮರು, ತ್ರಿಶೂಲ, ಅಭಯ ಮುದ್ರೆಯಿದ್ದರೆ, ಎಡ ಕೈಗಳಲ್ಲಿ ಸಾರಂಗ ಪಾಣಿ, ಅಗ್ನಿ ಹಾಗೂ ವರದಮುದ್ರೆ ಹೊಂದಿದೆ. ಐದು ಅಂತಸ್ತಿನ ಪೀಠದಲ್ಲಿ ಆನೆಗಳು, ಕುದುರೆಗಳು, ನಾಗ, ಕಾಲಚಕ್ರ, ಜನಪದರ ಚಿತ್ರಣವಿದೆ.

ಬೆಳ್ತಂಗಡಿ ಲಾಯಿಲ‌ ಮಂಜುಶ್ರೀ ಶಿಲ್ಪಾ ಕಲಾ ವೆಂಕಟೇಶ್ ಆಚಾರ್ಯ ನೇತೃತ್ವದಲ್ಲಿ ಕುಮಾರ ಶರ್ಮಾ ಎಂಬುವವರು ಮೂರ್ತಿ ನಿರ್ಮಾಣ ಮಾಡಿದ್ದಾರೆ. ಭಕ್ತರಿಗಾಗಿ ಹಲವು ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆ, ಧ್ಯಾನ ಮಾಡುವವರಿಗೆ ಧ್ಯಾನ ಕೇಂದ್ರ, ನೃತ್ಯ, ಸಂಗೀತ ಕಛೇರಿಗೆ ಮಂದಿರ ನಿರ್ಮಾಣ, ವಸತಿ ಗೃಹದ ನಿರ್ಮಾಣ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಮದುವೆ ಸಭಾಂಗಣದ ನಿರ್ಮಾಣ ಮಾಡಲಾಗಿದೆ.

15-17ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಜಾತಿ-ಪಂಥ-ಲಿಂಗ ಭೇದವಿಲ್ಲದೆ ಎಲ್ಲಾ ಆಸ್ತಿಕರಿಗೆ ಮೂರ್ತಿಗೆ ಅಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಅಟ್ಟಳಿಗೆ ನಿರ್ಮಾಣವಾಗುತ್ತಿದೆ. ಬ್ರಹ್ಮಕಲಶದ ಬಳಿಕ ಯಾರು ಬೇಕಾದರೂ ಮಹಾಕಾಲನಿಗೆ ಸ್ವತಃ ಪೂಜೆ ಮಾಡಲು ಅವಕಾಶ ನೀಡಲಾಗುತ್ತದೆ. ಈ ವೇಳೆ ವಸ್ತ್ರಸಂಹಿತೆ ಕಡ್ಡಾಯ. ಒಟ್ಟಿನಲ್ಲಿ ಬ್ರಹ್ಮಕಲಶದ ಬಳಿಕ‌ ಮಹಾಕಾಲೇಶ್ವರನು ಸಾರ್ವಜನಿಕ ದರ್ಶನ, ಪೂಜೆಗೆ ಲಭ್ಯವಾಗಲಿದ್ದಾನೆ.