Dakshina Kannada: ದಾರಿಹೋಕರ ಗಮನ ಸೆಳೆಯುತ್ತಿದೆ ಹೆದ್ದಾರಿ ಪಕ್ಕದ ಈ ಬೆಟ್ಟ! | Dakshina Kannada: This hill next to the highway is attracting the attention of passers-by!

Dakshina Kannada: ದಾರಿಹೋಕರ ಗಮನ ಸೆಳೆಯುತ್ತಿದೆ ಹೆದ್ದಾರಿ ಪಕ್ಕದ ಈ ಬೆಟ್ಟ! | Dakshina Kannada: This hill next to the highway is attracting the attention of passers-by!

Last Updated:

ರಬ್ಬರ್ ಗಿಡಗಳ ತೋಟಗಳು ಸಾಮಾನ್ಯವಾಗಿ ಡ್ರೈ ಆಗಿ ಇರುತ್ತಿದ್ದು, ಈ ತೇವಾಂಶ ರಹಿತ ಸ್ಥಳವಾಗಿರುತ್ತೆ. ಈ ಸ್ಥಳವನ್ನು ತೇವಾಂಶಯುಕ್ತವನ್ನಾಗಿ ಮಾಡಲು ಕೃಷಿಕರು ಜಪನಿಕಾ ಬಳ್ಳಿಗಳನ್ನು ರಬ್ಬರು ತೋಟಗಳ ಮಧ್ಯೆ ನೆಡುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಂಗಳೂರಿನಿಂದ(Mangaluru) ಬಿಸಿರೋಡ್(BC Road) ಮಾರ್ಗವಾಗಿ ಕಡೂರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಾರ್ಗದಲ್ಲಿ ಜನನಿಬಿಡ ಪ್ರದೇಶದಲ್ಲಿ ಹಸಿರಾದ‌ ಬೆಟ್ಟವೊಂದು(Green Hill) ಗೋಚರಕ್ಕೆ ಬರುತ್ತದೆ. ಎಲ್ಲೋ ಚಾರ್ಮಾಡಿ ಘಾಟ್ ನಲ್ಲೋ(Charmadi Ghat) , ಶಿರಾಡಿಘಾಟ್ ನಲ್ಲೋ(Shiradi Ghat) ಕಾಣಸಿಗುವಂತಹ ಬೆಟ್ಟಗಳ ಸಾಲಿನ ರೂಪದಲ್ಲಿ ಈ ಹಸಿರಿನಿಂದ ತುಂಬಿದ ಬೆಟ್ಟ ಕಾಣಿಸುತ್ತಿದೆ. ಈ ರಸ್ತೆಯ ಮೂಲಕ ಹಾದು ಹೋಗುವವರು ಒಮ್ಮೆ ಇದರ ಸೌಂದರ್ಯವನ್ನು ನೋಡಿ ಇದು‌ ಇಲ್ಲೇಗೆ ಬಂತು ಎಂದು ಕೌತುಕ ವ್ಯಕ್ತಪಡಿಸಿದವರೂ ಇದ್ದಾರೆ.

ಹೌದು ಇದು‌ ಬಿ.ಸಿ.ರೋಡ್ ನಿಂದ ಕಡೂರು ಸಂಪರ್ಕಿಸುವ ಹೆದ್ದಾರಿಯ ಮೂರ್ಜೆ ಎಂಬಲ್ಲಿ ಕಾಣಸಿಗುವ ಚಿಕ್ಕ ಬೆಟ್ಟ. ಇತ್ತೀಚೆಗಷ್ಟೇ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಗೊಂಡು ಅಗಲೀಕರಣವೂ ನಡೆದಿದೆ. ಆದರೆ ಈ ಬೆಟ್ಟದ ಸೌಂದರ್ಯಕ್ಕೇನೋ, ಹೆದ್ದಾರಿ ಇಲಾಖೆಯೂ ಈ ಬೆಟ್ಟಕ್ಕೆ ಯಾವುದೇ ಹಾನಿಯಾಗದಂತೆ ಬೆಟ್ಟದ ಪಕ್ಕದಲ್ಲೇ ರಸ್ತೆ ಹಾದುಹೋಗುವಂತೆ ಮುಂಜಾಗ್ರತೆ ವಹಿಸಿದೆ. ವರ್ಷಪೂರ್ತಿ ಈ ಬೆಟ್ಟ ಹಸಿರಾಗಿಯೇ ಇರೋದು ಇದರ ಇನ್ನೊಂದು ವಿಶೇಷತೆ. ಈ ಬೆಟ್ಟ ಇರುವ ಜಾಗದ ಮಾಲಿಕರು ಇಲ್ಲಿ ರಬ್ಬರ್ ಬೆಳೆಯನ್ನು ಬೆಳೆಸಲು ಸಿದ್ಧತೆ ನಡೆಸಿದ್ದ ಸಂದರ್ಭದಲ್ಲಿ ರಬ್ಬರ್ ಗಿಡಗಳ ಮಧ್ಯೆ ಮುಕಾನಿಯ ಎನ್ನುವ ಬಳ್ಳಿಯನ್ನು ನೆಟ್ಟಿದ್ದಾರೆ. ಜಪನಿಕಾ ಎಂದು ಈ ಬಳ್ಳಿಯನ್ನು ಸ್ಥಳೀಯವಾಗಿ ಕರೆಯುತ್ತಾರೆ.

ಇದನ್ನೂ ಓದಿ: Belagavi: ನಿಪ್ಪಾಣಿ ಕೃಷಿ ಉತ್ಸವ- ಗಮನ ಸೆಳೆದ ವಿಶೇಷ ತಳಿಯ ರಾಸುಗಳ ಪ್ರದರ್ಶನ ಮತ್ತು ಮಾರಾಟ

ರಬ್ಬರ್ ಗಿಡಗಳ ತೋಟಗಳು ಸಾಮಾನ್ಯವಾಗಿ ಡ್ರೈ ಆಗಿ ಇರುತ್ತಿದ್ದು, ಈ ತೇವಾಂಶ ರಹಿತ ಸ್ಥಳವಾಗಿರುತ್ತೆ. ಈ ಸ್ಥಳವನ್ನು ತೇವಾಂಶಯುಕ್ತವನ್ನಾಗಿ ಮಾಡಲು ಕೃಷಿಕರು ಜಪನಿಕಾ ಬಳ್ಳಿಗಳನ್ನು ರಬ್ಬರು ತೋಟಗಳ ಮಧ್ಯೆ ನೆಡುತ್ತಾರೆ. ಈ ಗಿಡಗಳು ಅತೀ ವೇಗವಾಗಿ ಬೆಳೆಯುವ ಬಳ್ಳಿಗಳಾಗಿದ್ದು, ರಬ್ಬರ್ ತೋಟದಲ್ಲಿ ಸುತ್ತಾ ಬೆಳೆಯುತ್ತದೆ. ಇದೇ ಬಳ್ಳಿಗಳನ್ನು ಮೂರ್ಜೆಯಲ್ಲಿ ಕಾಣಸಿಗುವ ಈ ಬೆಟ್ಟದ ಮೇಲೆ ನೆಡಲಾಗಿದ್ದು, ಇದೇ ಕಾರಣಕ್ಕೆ ಈ ಪುಟ್ಟ ಬೆಟ್ಟ ವರ್ಷಪೂರ್ತಿ ಹಸುರಾಗಿಯೇ ಇರುತ್ತದೆ. ಸಾಮಾನ್ಯವಾಗಿ ಬಿರು ಬಿಸಿಲಿನ ವಾತಾವರಣದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಿಡ-ಮರಗಳಿಗೆ ಎಷ್ಟೇ ನೀರು ಹಾಯಿಸಿದರೂ,ಗಿಡ-ಮರಗಳ ಬಣ್ಣ ಕೊಂಚ ಕಂದು ಬಣ್ಣಕ್ಕೆ ತಿರುಗುತ್ತೆ.

ಆದರೆ ಮೂರ್ಜೆಯಲ್ಲಿರುವ ಈ ಬೆಟ್ಟದ ಎಲೆಗಳು ಮಾತ್ರ ಯಾವತ್ತೂ ತನ್ನ ಹಸಿರನ್ನ ಬಿಟ್ಟುಕೊಟ್ಟಿಲ್ಲ. ಪಶ್ಚಿಮ ಘಟ್ಟದ ಸಾಲುಗಳಿಂದ ಒಂದು ಸಾಲನ್ನು ಈ ಹೆದ್ದಾರಿಯ ಪಕ್ಕದಲ್ಲಿ ತಂದು ನಿಲ್ಲಿಸಿದ್ದಾರೋ ಎನ್ನುವ ಆಶ್ಚರ್ಯ ಮಾತ್ರ ಬಹುತೇಕ ಪ್ರಯಾಣಿಕರ ಮನದಲ್ಲಿ ಮೂಡಿದೆ.