Dakshina Kannada: ದೇಶದಲ್ಲೇ ಪ್ರಥಮ ಪ್ರಯೋಗ- ಗೇರು ಹಣ್ಣಿನಿಂದ ಬೀಜ ಬಿಡಿಸುವ ಯಂತ್ರ ಸಿದ್ದ! | A machine for removing seeds from cashew nuts is ready in Dakshina Kannada

Dakshina Kannada: ದೇಶದಲ್ಲೇ ಪ್ರಥಮ ಪ್ರಯೋಗ- ಗೇರು ಹಣ್ಣಿನಿಂದ ಬೀಜ ಬಿಡಿಸುವ ಯಂತ್ರ ಸಿದ್ದ! | A machine for removing seeds from cashew nuts is ready in Dakshina Kannada

Last Updated:

ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಮತ್ತು ಭೋಪಾಲದ ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆಯ ವಲಯ ಸಂಶೋಧನ ಕೇಂದ್ರ ಕೊಯಮತ್ತೂರು ಜಂಟಿಯಾಗಿ ಈ ಯಂತ್ರಗಳನ್ನು ನಿರ್ಮಿಸಿವೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದೇಶದಲ್ಲೇ(Country) ಪ್ರಥಮ ಬಾರಿಗೆ ಎಂಬಂತೆ ಗೇರು ಹಣ್ಣಿನಿಂದ(Cashew fruit) ಬೀಜ ಬಿಡಿಸುವ ಮೂರು ಯಂತ್ರಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ(Dakshina Kannada District Puttur) ಕಾರ್ಯಾಚರಿಸುತ್ತಿರುವ ಗೇರು ಸಂಶೋಧನಾ ನಿರ್ದೇಶನಾಲಯ(Directorate of Geru Research) ಸಿದ್ಧಪಡಿಸಿದೆ. ಈ ಯಂತ್ರ ಇನ್ನು ಕೆಲವು ದಿನಗಳಲ್ಲಿ ಗೇರು ಬೆಳೆಗಾರರ ಕೈ ಸೇರಲಿದೆ.

ಸಂಪೂರ್ಣ ಸ್ವಯಂ ಚಾಲಿತ ಯಂತ್ರ, ಅರೆ-ಸ್ವಯಂಚಾಲಿತ ಯಂತ್ರ ಮತ್ತು ಪೆಡಲ್ ಮೂಲಕ ಬೇರ್ಪಡಿಸುವ ರೂಪದಲ್ಲಿವೆ ಈ ಯಂತ್ರಗಳು. ಕೈಗಳನ್ನು ಬಳಸಿ ಗೇರು ಹಣ್ಣಿನಿಂದ ಬೀಜ ಬಿಡಿಸುವುದಕ್ಕೆ ಹೆಚ್ಚು ಮಾನವ ಶ್ರಮ ಹಾಗೂ ಸಮಯ ಅಗತ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಈ ಯಂತ್ರದಿಂದ ಈ ಎಲ್ಲಾ ಸಮಸ್ಯೆಗಳ ನಿವಾರಣೆಯಾಗಲಿದೆ. ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಮತ್ತು ಭೋಪಾಲದ ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆಯ ವಲಯ ಸಂಶೋಧನ ಕೇಂದ್ರ ಕೊಯಮತ್ತೂರು ಜಂಟಿಯಾಗಿ ಈ ಯಂತ್ರಗಳನ್ನು ನಿರ್ಮಿಸಿವೆ.

ಇದನ್ನೂ ಓದಿ: Dakshina Kannada: ಸಾವಿರಾರು ವರ್ಷಗಳ ಇತಿಹಾಸವಿದೆ ಪೊಳಲಿ ರಾಜರಾಜೇಶ್ವರಿ ದೇವಿ ದೇಗುಲಕ್ಕೆ!

ಸಂಪೂರ್ಣ ಸ್ವಯಂಚಾಲಿತ ಯಂತ್ರ:

ಸಂಪೂರ್ಣ ಸ್ವಯಂಚಾಲಿತ ಯಂತ್ರವನ್ನು ಸ್ಟೈನ್‌ ಲೆಸ್ ಸ್ಟೀಲ್‌ ನಿಂದ ನಿರ್ಮಿಸಲಾಗಿದೆ. ಈ ಯಂತ್ರದಲ್ಲಿ ಗೇರು ಬೀಜ, ಪಲ್ಸ್ ಮತ್ತು ರಸ ಪ್ರತ್ಯೇಕವಾಗಿ ಹೊರಬರುತ್ತವೆ. ಪ್ರತಿ ಗಂಟೆಗೆ 300 ಕೆಜಿ ಬೀಜಗಳನ್ನು ಬಿಡಿಸುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಇದರ ಕಾರ್ಯನಿರ್ವಹಣೆಗೆ ಗಂಟೆಗೆ ಮುಕ್ಕಾಲು ಲೀಟರ್ ಪೆಟ್ರೋಲ್ ಬೇಕು. ವಿದ್ಯುತ್ ಶಕ್ತಿಯಿಂದಲೂ ಚಲಾಯಿಸಬಹುದು. ಯಂತ್ರದ ಅಂದಾಜು ಬೆಲೆ 1.95 ಲಕ್ಷ ರೂ. ಈ ಯಂತ್ರವನ್ನು ನಿರ್ದೇಶನಾಲಯ ವಾಣಿಜ್ಯೀಕರಣಗೊಳಿಸಿದ್ದು, ರಾಮನಗರದ ಫಿಶನ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಉತ್ಪಾದನ ಹಕ್ಕು ಪಡೆದುಕೊಂಡು ಗ್ರಾಹಕರಿಗೆ ವಿತರಿಸಲಿದೆ.

ಅರೆ ಸ್ವಯಂಚಾಲಿತ ಯಂತ್ರ:

ಅರೆ ಸ್ವಯಂಚಾಲಿತ ಯಂತ್ರದಲ್ಲಿ ಮೇಲ್ಗಡೆ ನಾಲ್ಕು ರಂಧ್ರಗಳಿರುತ್ತವೆ. ಅದರಲ್ಲಿ ತಿರುಗಣೆಗಳು ತಿರುಗುತ್ತಿರುತ್ತವೆ. ಇದಕ್ಕೆ ಕರೆಂಟ್ ಅಥವಾ ಬ್ಯಾಟರಿ ಬೇಕು. ಬೀಜಸಹಿತ ಹಣ್ಣನ್ನು ಇದರಲ್ಲಿ ತೂರಿಸಿದಾಗ ಬೀಜವನ್ನು ತಿರುವುದರ ಮೂಲಕ ಬೇರ್ಪಡಿಸುತ್ತದೆ. ಅನಂತರ ಹಾನಿಯಾಗದ ಬೀಜ ಯಂತ್ರದ ಒಂದೆಡೆ ಹೊರಬರುತ್ತದೆ. ಎಲ್ಲ ಗಾತ್ರದ ಬೀಜಗಳನ್ನು ಇದರಲ್ಲಿ ಬೇರ್ಪಡಿಸಬಹುದು. ಇದರಲ್ಲಿ ಎದುರು ಬದುರಾಗಿ ಎರಡು ಜನರು ಕುಳಿತು ಕೆಲಸ ಮಾಡಬಹುದಾಗಿದೆ. ಗಂಟೆಗೆ 35 ಕೆಜಿ ಬೀಜ ಬಿಡಿಸಬಹುದು. ಇದರ ಬೆಲೆ 35 ಸಾವಿರ ರೂಪಾಯಿ ಅಂದಾಜಿಸಲಾಗಿದೆ.

ಪೆಡಲ್ ಚಾಲಿತ ಯಂತ್ರ:

ಪೆಡಲ್ ಚಾಲಿತ ಯಂತ್ರದಲ್ಲಿ ಹರಿತವಾದ ಬ್ಲೇಡ್ ರೀತಿಯ ರಚನೆಯಿದ್ದು, ಅದರ ಮೇಲೆ ಬೀಜವು ಹಣ್ಣಿಗೆ ಅಂಟಿರುವ ಭಾಗವನ್ನು ಇಟ್ಟು ಪೆಡಲ್ ತುಳಿದರೆ ಆ ಭಾಗ ಕತ್ತರಿಸಿ ಬೀಜ ಬೇರ್ಪಟ್ಟು ಪ್ರತ್ಯೇಕವಾಗುತ್ತದೆ. ಈ‌ ಯಂತ್ರದ‌ ಮೂಲಕ ಗಂಟೆಗೆ 15 ಕೆಜಿ ಬೀಜಗಳನ್ನು ಬೇರ್ಪಡಿಸಬಹುದು. ಬೆಲೆ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಎಲ್ಲಾ ಕೃಷಿ ವ್ಯವಸ್ಥೆಯಲ್ಲಿ ಕಾರ್ಮಿಕರ ಕೊರತೆ‌ ಹೆಚ್ಚಾಗಿದ್ದು, ಗೇರು ಕೃಷಿಯೂ ಇದರಿಂದ ಹೊರತಾಗಿಲ್ಲ. ಈ ಕಾರಣಕ್ಕೆ ಎಲ್ಲಾ ಕೃಷಿಯಲ್ಲೂ ಇಂದು ಯಂತ್ರಗಳನ್ನು ಬಳಸಲಾಗುತ್ತಿದ್ದು, ಗೇರು ಕೃಷಿಗೂ ಇದೀಗ ಯಂತ್ರದ ಪಾದಾರ್ಪಣೆಯಾಗಿದೆ.