Dakshina Kannada: ನಿವೃತ್ತಿ ಹೊಂದಿದ ಅಧಿಕಾರಿಗೆ ಈ ಗ್ರಾಮದ ಜನ ಮಾಡಿದ್ದೇನು ಗೊತ್ತಾ? | Dakshina Kannada: Do you know what the people of this village did to the retired officer?

Dakshina Kannada: ನಿವೃತ್ತಿ ಹೊಂದಿದ ಅಧಿಕಾರಿಗೆ ಈ ಗ್ರಾಮದ ಜನ ಮಾಡಿದ್ದೇನು ಗೊತ್ತಾ? | Dakshina Kannada: Do you know what the people of this village did to the retired officer?

Last Updated:

ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಪಂಚಾಯತ್ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಎನ್ನುವ ಅಧಿಕಾರಿಗೆ ಗ್ರಾಮದ ಜನ ನೀಡಿದ ಗೌರವದ ಒಂದು ಝಲಕ್. ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿಯವರು ಮಾರ್ಚ್‌ 31, 2025ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಬಹುತೇಕ ಸರಕಾರಿ ಸಿಬ್ಬಂದಿಗಳೆಂದರೆ(Government Staff) ಜನಸಾಮಾನ್ಯನಿಗೆ ಅಷ್ಟಕ್ಕಷ್ಟೇ. ಯಾಕೆಂದರೆ ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಈ ಸಿಬ್ಬಂದಿ ಒಂದಲ್ಲ ಒಂದು ಬಾರಿ ಜನಸಾಮಾನ್ಯನಿಗೆ ತೊಂದರೆಯನ್ನು ಕೊಟ್ಟಿರುತ್ತಾರೆ. ಇದೇ ಕಾರಣಕ್ಕೆ ಕೆಲವು ಸರಕಾರಿ ಸಿಬ್ಬಂದಿಗಳಿಗೆ ಸಮಾಜದಲ್ಲಿ ಗೌರವ ಕೊಂಚ ಕಡಿಮೆಯೇ. ಅದರಲ್ಲೂ ಸೇವೆಯಿಂದ ನಿವೃತ್ತಿ ಹೊಂದಿದ ಅಂತಹ ಸಿಬ್ಬಂದಿಯನ್ನು ಜನಸಾಮಾನ್ಯ ನೋಡುವ ದೃಷ್ಟಿಕೋನವೇ ಬೇರೆ. ಆದರೆ ಇಲ್ಲೊಬ್ಬರು ಸರಕಾರಿ ಅಧಿಕಾರಿ ನಿವೃತ್ತಿ(Retired) ಹೊಂದಿದರೂ, ಆ ಅಧಿಕಾರಿಯ ಮೇಲಿರುವ ಗೌರವ ಮಾತ್ರ ಜನರಿಗೆ ಕಡಿಮೆಯಾಗಿಲ್ಲ. ನಿವೃತ್ತಿ ಹೊಂದಿದ ಆ ಅಧಿಕಾರಿಯನ್ನು ಸುಮಾರು 11 ಕಿಲೋಮೀಟರ್ ದೂರದವರೆಗೆ ಓಪನ್‌ ಜೀಪ್ ಮೆರವಣಿಗೆಯ ಮೂಲಕ ಆ ಅಧಿಕಾರಿಯ ಮನೆಗೆ ಬಿಟ್ಟು ಬಂದಿದ್ದಾರೆ.

ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಪಂಚಾಯತ್ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಎನ್ನುವ ಅಧಿಕಾರಿಗೆ ಗ್ರಾಮದ ಜನ ನೀಡಿದ ಗೌರವದ ಒಂದು ಝಲಕ್. ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿಯವರು ಮಾರ್ಚ್‌ 31, 2025ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಸುದೀರ್ಘ 37 ವರ್ಷಗಳ ಕಾಲ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1998 ರಲ್ಲಿ ಎಣ್ಮೂರು ಮಂಡಲ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಸರಕಾರಿ ಸೇವೆಯನ್ನು ಆರಂಭಿಸಿದ ಜಯಪ್ರಕಾಶ್, ಅಲ್ಲಿ ಸುಮಾರು 11 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಬಳಿಕ ಪುತ್ತೂರು ತಾಲೂಕು ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ ಗ್ರೇಡ್-2 ಕಾರ್ಯದರ್ಶಿ ಸರಕಾರಿ ಸೇವೆಗೆ ಸೇರಿದರು.

ಇದನ್ನೂ ಓದಿ: Mangaluru: ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ ಹಾಲಿವುಡ್ ಶೈಲಿಯ THUMBAY!

ಸುಳ್ಯ ತಾಲೂಕು ಪಂಚಾಯತ್ ಇಲ್ಲಿ ಕೋರ್ಟ್ ಹಾಗೂ ಪಂಚಾಯತ್ ಗಳ ಅಂಕಿ ಅಂಶಗಳ ಕ್ರೋಢೀಕರಣದ ಅನುಭವವನ್ನೂ ಪಡೆದ ಇವರು ಚಿತ್ರಕಲೆ ಸಾಹಿತ್ಯ ಯಕ್ಷಗಾನ ತಾಳಮದ್ದಲೆಯಲ್ಲೂ ಆಸಕ್ತಿ ಹೊಂದಿದ್ದು, ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ರಾಜೀವ ಗಾಂಧಿ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಯೋಜನೆ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ತರಬೇತಿ ದಕ್ಷಿಣ ಕನ್ನಡ ಏಡ್ಸ್ (ರಿ)ಯ ಸಮಿತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿರುತ್ತಾರೆ. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಜಕ್ಕೂರು-ಬೆಂಗಳೂರು ಈ ಸಂಸ್ಥೆಯಲ್ಲಿ ಗ್ರಾಮೀಣ ಉಪಯೋಗಕ್ಕೆ ಪುನರ್ ಉತ್ಪಾದಿಸಲ್ಪಡುವ ಇಂಧನ ತರಬೇತಿಯ ಅನುಭವ ಪಡೆದು ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ದಿನಾಂಕ 19-06-2018ರಂದು ಸುಳ್ಯ ತಾಲೂಕು ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

2024-25ನೇ ಸಾಲಿನಲ್ಲಿ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವನ್ನು ಜನ ಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿಯೂ ಶ್ರಮಿಸಿ ಭಕ್ತಾದಿಗಳಿಂದ ಮೆಚ್ಚುಗೆ ಗಳಿಸಿರುತ್ತಾರೆ. ಸೇವಾ ಅವಧಿ ಪೂರ್ತಿ ಜನಾನುರಾಗಿಯಾಗಿ ಸೇವೆ ಸಲ್ಲಿಸಿದ ಈ ಅಧಿಕಾರಿಯನ್ನು ಗ್ರಾಮದ ಜನ ಅದ್ಧೂರಿಗಾಗಿ ಗೌರವಿಸಿದ್ದು, ಜನಪರ ಅಧಿಕಾರಿಯನ್ನು ಜನ ಸೇವೆಯಲ್ಲಿರಲಿ, ಇಲ್ಲದಿರಲಿ ಎಲ್ಲಾ ಸಮಯದಲ್ಲಿ ನೆನಪಿನಲ್ಲಿಡುತ್ತಾರೆ ಅನ್ನೋದಕ್ಕೆ ಈ ಗೌರವ ಸಾಕ್ಷಿಯಾಗಿದೆ.