Dakshina Kannada: ಪೆಹಲ್ಗಾಮ್‌ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ಸಂಸ್ಥೆ! | Dakshina Kannada: An organization in Puttur has offered free education to the children of Pahalgam victims!

Dakshina Kannada: ಪೆಹಲ್ಗಾಮ್‌ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ಸಂಸ್ಥೆ! | Dakshina Kannada: An organization in Puttur has offered free education to the children of Pahalgam victims!

Last Updated:

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಒಳಗಾದ ಸಂತ್ರಸ್ತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುವ ದಾನಿಗಳಿದ್ದು, ಅವರ ಜೊತೆಗೆ ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಂಸ್ಥೆ ಉತ್ಸುಕವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದೇಶದ ಮುಕುಟಮಣಿಯಂತಿರುವ ಕಾಶ್ಮೀರದಲ್ಲಿ(Kashmir) ಇಂದು‌ ಅಕ್ಷರಶಃ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಭಯೋತ್ಪಾದಕರ‌ ದಾಳಿಗೆ‌(Terror Attack) ಸಿಲುಕಿ ಪ್ರವಾಸಿಗರು(Tourists) ಸಾವನ್ನಪ್ಪಿದ ಘಟನೆ‌ ಬಳಿಕ ಇದೀಗ ಕಾಶ್ಮೀರಿ ಸಂತ್ರಸ್ತರ ಪರವಾಗಿ ನೆರವಿನ ಹಸ್ತಗಳು ಮುಂದಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ(Puttur) ಕಾರ್ಯಾಚರಿಸುತ್ತಿರುವ ಅಂಬಿಕಾ ಮಹಾವಿದ್ಯಾಲಯ ಇದೀಗ ಕಾಶ್ಮೀರದಲ್ಲಿ‌ ಉಗ್ರರ ದಾಳಿಗೆ ಸಿಲುಕಿ ಸಂತ್ರಸ್ತರಾದ, ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣದ ಆಫರ್(Free Education Offer) ನೀಡಿದೆ.

ಕಾಶ್ಮೀರ ಕಣಿವೆಗಳಲ್ಲಿ ಈವರೆಗೆ ಹಲವು ಉಗ್ರ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ ಹಲವು ಮಕ್ಕಳು ಅನಾಥರಾಗಿದ್ದಾರೆ. ಅಂತ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ, ವಸತಿ ವ್ಯವಸ್ಥೆಗಳು ಸಿಗೋದು ಸುಲಭದ ಕಾರ್ಯವಲ್ಲ. ಅಂತ ಮಕ್ಕಳು ಯಾರಾದರೂ ಇದ್ದಲ್ಲಿ ಆ ಮಕ್ಕಳಿಗೆ ಮತ್ತು ಪೆಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯಲ್ಲಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಅಂಬಿಕಾ ಮಹಾವಿದ್ಯಾಲಯ ಮುಂದಾಗಿದೆ.

ಇದನ್ನೂ ಓದಿ: Dakshina Kannada: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಲಭ್ಯತೆ ಹೆಚ್ಚಳ- ಮಂಗಳೂರಿಗರಿಗೆ ಸದ್ಯಕ್ಕಿಲ್ಲ ನೀರಿನ ಕೊರತೆ

ಎಲ್.ಕೆ.ಜಿ ಯಿಂದ ಹಿಡಿದು ಪದವಿತನಕದ ಎಲ್ಲಾ ಖರ್ಚುಗಳನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಂಬಿಕಾ ಮಹಾವಿದ್ಯಾಲಯ ಭರಿಸಲಿದೆ. ಅನಾಥ ಮಕ್ಕಳು ಇರುವ ಬಗ್ಗೆ ಈಗಾಗಲೇ ಅಲ್ಲಿನ ಕೆಲವು ಸ್ಥಳೀಯ ಸಂಘಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರುವ ಆಡಳಿತ ಮಂಡಳಿ ಈ ಬಗ್ಗೆ ಸಾರ್ವಜನಿಕರೂ ಮಾಹಿತಿ ನೀಡಿದಲ್ಲಿ, ಮಕ್ಕಳಿಗೆ ಬೇಕಾದ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿದ್ಯಾಲಯದ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮನವಿಯನ್ನೂ ಮಾಡಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಒಳಗಾದ ಸಂತ್ರಸ್ತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುವ ದಾನಿಗಳಿದ್ದು, ಅವರ ಜೊತೆಗೆ ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಂಸ್ಥೆ ಉತ್ಸುಕವಾಗಿದೆ.

ದೇಶದ ಪರವಾಗಿ ನಿಲ್ಲುವ ಸಂಸ್ಥೆಯಾಗಿ ಅಂಬಿಕಾ ಮಹಾವಿದ್ಯಾಲಯ ಗುರುತಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸಂಸ್ಥೆ ಮುಂದೆಯೂ ಕಾರ್ಯನಿರ್ವಹಿಸಲಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಭಾರತೀಯ ಯೋಧರನ್ನು ಸನ್ಮಾನಿಸುವ, ಕಾಶ್ಮೀರಿ ಪಂಡಿತರ ಮಕ್ಕಳಿಗೆ ಶಿಕ್ಷಣ ನೀಡುವ ಹಲವು ವ್ಯವಸ್ಥೆಗಳನ್ನು ಸಂಸ್ಥೆ ಈಗಾಗಲೇ ನಿರ್ವಹಿಸಿಕೊಂಡು ಬರುತ್ತಿದ್ದು, ಇದರ ಸಾಲಿಗೆ ಇದೀಗ ಉಚಿತ ಶಿಕ್ಷಣ ಆಫರ್ ಕೂಡಾ ಸೇರ್ಪಡೆಗೊಂಡಿದೆ.