Last Updated:
RSB ಸಮಾಜ ಬಾಂಧವರು ಆರಾಧಿಸಿಕೊಂಡು ಬಂದಿರುವ ಈ ದೇಗುಲದಲ್ಲಿ ಹಿಂದೆ ವೈಭವದ ರಥೋತ್ಸವ ನಡೆಯುತ್ತಿತ್ತು. ಆದ್ರೆ ರಥ ಶಿಥಿಲವಾದ ಬಳಿಕ ರಥೋತ್ಸವ ನಿಂತಿತ್ತು. ಇದೀಗ ಮತ್ತೆ ಇತಿಹಾಸ ಮರಳಿದೆ. ರಥಬೀದಿಯಲ್ಲಿ ಫೆಬ್ರವರಿ 6ರಂದು ಅಂದರೆ ಗುರುವಾರ ಲಕ್ಷ್ಮಿ ವೆಂಕಟರಮಣ ರಥೋತ್ಸವ ನಡೆದಿದೆ.
ದಕ್ಷಿಣ ಕನ್ನಡ: 300 ವರ್ಷಗಳ ಇತಿಹಾಸ(History) ಹೊಂದಿರುವ ಆ ದೇವಸ್ಥಾನದಲ್ಲಿ(Temple) ಸುಮಾರು 60 ವರ್ಷಗಳ ಹಿಂದೆ ರಥೋತ್ಸವ(Rathotsava) ನಡೆಯುತ್ತಿತ್ತು. ಲಕ್ಷ್ಮಿ ವೆಂಕಟರಮಣ ದೇವರು ಬ್ರಹ್ಮ ರಥ ಏರಿ, ಭಕ್ತರಿಗೆ ದರ್ಶನ ನೀಡುತ್ತಿದ್ದರು. ಆದ್ರೆ ಬ್ರಹ್ಮರಥ ಶಿಥಿಲವಾದ ಬಳಿಕ ರಥೋತ್ಸವವೇ ನಿಂತಿತ್ತು. ಇದೀಗ ಮತ್ತೆ ಗತ ವೈಭವ ಮರುಕಳಿಸಿದೆ. ಲಕ್ಷ್ಮಿ ವೆಂಕಟರಮಣ ದೇವರು(God Lakshmi Venkataramana) ಮತ್ತೆ ರಥವೇರಿದ್ದಾರೆ. ಭಕ್ತರು ದೇವರನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ. ರಥವೇರಿದ ಲಕ್ಷ್ಮಿ ವೆಂಕಟರಮಣ, ರಥಬೀದಿಯಲ್ಲಿ ರಥೋತ್ಸವದ ಸೊಬಗು, ಸಿಡಿ ಮದ್ದಿನ ಅಬ್ಬರ, ವೆಂಕಟರಮಣ ಗೋವಿಂದ ಎನ್ನುವ ಭಕ್ತರ ಹರ್ಷೋದ್ಘಾರ.. ಇದು ಬರೋಬ್ಬರಿ 60 ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವ… ಸಂಭ್ರಮ ಸಡಗರ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಶೆಕೋಡಿ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಸುಮಾರು 300 ವರ್ಷಗಳ ಇತಿಹಾಸ ಇದೆ. RSB ಸಮಾಜ ಬಾಂಧವರು ಆರಾಧಿಸಿಕೊಂಡು ಬಂದಿರುವ ಈ ದೇಗುಲದಲ್ಲಿ ಹಿಂದೆ ವೈಭವದ ರಥೋತ್ಸವ ನಡೆಯುತ್ತಿತ್ತು. ಆದ್ರೆ ರಥ ಶಿಥಿಲವಾದ ಬಳಿಕ ರಥೋತ್ಸವ ನಿಂತಿತ್ತು. ಇದೀಗ ಮತ್ತೆ ಇತಿಹಾಸ ಮರಳಿದೆ. ರಥಬೀದಿಯಲ್ಲಿ ಫೆಬ್ರವರಿ 6ರಂದು ಅಂದರೆ ಗುರುವಾರ ಲಕ್ಷ್ಮಿ ವೆಂಕಟರಮಣ ರಥೋತ್ಸವ ನಡೆದಿದೆ.
ಇದನ್ನೂ ಓದಿ: Mock Operation: ಸಮುದ್ರದ ಮಧ್ಯೆ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಸಾಹಸ ಕಾರ್ಯಾಚರಣೆ- ಒಂದೊಂದು ಕ್ಷಣವೂ ರೋಮಾಂಚನ!
ದೇವಸ್ಥಾನ ಜಾತ್ರೋತ್ಸವದ ಶುಭ ಸಂಧರ್ಭದಲ್ಲಿ ನೂತನ ಬ್ರಹ್ಮರಥ ಸಮರ್ಪಣೆ ನಡೆಯಿತು. ನೂತನ ರಥಕ್ಕೆ ಭಕ್ತರು ಪುಷ್ಪಾರ್ಚನೆ ಮಾಡಿದರು. ಬಳಿಕ ಲಕ್ಷ್ಮಿ ವೆಂಕಟರಮಣ ರಥಾರೂಢರಾಗಿ ಭಕ್ತರಿಗೆ ದರ್ಶನ ನೀಡಿದರು. ಸಿಡಿಮದ್ದು ಸಿಡಿಸಿ ಭಕ್ತರು ಸಂಭ್ರಮಿಸಿದರು.
ಒಟ್ಟಿನಲ್ಲಿ ಹೊಸ ಬ್ರಹ್ಮರಥದ ರಥೋತ್ಸವ ಕಂಡ ಭಕ್ತರ ಸಂತೋಷ ಅಷ್ಟಿಷ್ಟಲ್ಲ. ರಥೋತ್ಸವ ಕಣ್ತುಂಬಿಕೊಂಡು ಸಾವಿರಾರು ಭಕ್ತರು ಪುನೀತರಾದರು. ಜೊತೆಗೆ ಮೊದಲ ರಥೋತ್ಸವಕ್ಕೆ ಸಾಕ್ಷಿಯಾದರು.
Dakshina Kannada,Karnataka
February 08, 2025 5:04 PM IST