Dakshina Kannada: ಬಹು ಉಪಕಾರಿ ಈ ನಾಗಸಂಪಿಗೆ ಮರ- ನಾನಾ ರೋಗಗಳಿಗೆ ರಾಮಬಾಣ! | This Unique tree identify as snake tree in Western Ghats

Dakshina Kannada: ಬಹು ಉಪಕಾರಿ ಈ ನಾಗಸಂಪಿಗೆ ಮರ- ನಾನಾ ರೋಗಗಳಿಗೆ ರಾಮಬಾಣ! | This Unique tree identify as snake tree in Western Ghats

Last Updated:

ಇದು ಶ್ರೀಲಂಕಾದ ರಾಷ್ಟ್ರೀಯ ಮರವಾಗಿದೆ. ಈ ಮರ ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ದಕ್ಷಿಣ ನೇಪಾಳ, ಬರ್ಮಾ, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಕಂಡುಬರುತ್ತದೆ. ನಾಗಸಂಪಿಗೆ ಮರವು ಕಟ್ಟಡ ನಿರ್ಮಾಣ, ರೈಲ್ವೇ ಸ್ಲೀಪರ್ ಮತ್ತು ಸೇತುವೆ ನಿರ್ಮಾಣಗಳಲ್ಲಿ ಬಳಕೆಯಲ್ಲಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ನಾಗಸಂಪಿಗೆ ಮರವು ಕರ್ನಾಟಕದ ಪಶ್ಚಿಮ ಘಟ್ಟಗಳ(Western Ghats) ನಿತ್ಯಹರಿದ್ವರ್ಣ ಅರಣ್ಯಗಳಲ್ಲಿ(Evergreen Forests) ಕಂಡು ಬರುವ ಸಾಮಾನ್ಯ ಮರವಾಗಿದೆ. ಈ ಮರದ ಹೂವು ನಾಗನ ಹೆಡೆಯಂತೆ ಕಂಡು ಬರುವುದಿಂದ ನಾಗಸಂಪಿಗೆ ಮರ(Nagasampige Tree) ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ಸರ್ಪಗಳು ವಿಶೇಷವಾಗಿ ಈ ಹೂವಿನ ಪರಿಮಳಕ್ಕೆ ಆಕರ್ಷಿತವಾಗುತ್ತವೆ ಎನ್ನುವ ನಂಬಿಕೆಯೂ ಇದೆ.

ಇನ್ನು ಈ ಮರಗಳು 200 ರಿಂದ 500 ಸೆಂ.ಮೀ. ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಮರವು ಸಾಮಾನ್ಯವಾಗಿ 50ರಿಂದ 60 ಅಡಿ ಎತ್ತರ ಬೆಳೆಯುತ್ತದೆ. ಹಣ್ಣು ಒಂದರಿಂದ ಎರಡು ಬೀಜಗಳೊಂದಿಗೆ ಗೋಳಾಕಾರದಲ್ಲಿರುತ್ತವೆ. ಮರದ ತೊಗಟೆಯು ತೆಳುವಾಗಿದ್ದು ಕೆಂಪು ಅಥವಾ ಕಂದು ಬಣ್ಣದಲ್ಲಿರುತ್ತದೆ. ಕಾಂಡದ ಮೇಲೆ ಉದ್ದವಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಈ ಮರವು ಬಿಳಿಯ ದಟ್ಟವಾದ, ಶಂಕುವಿನಾಕೃತಿಯ ಕಿರೀಟವನ್ನು ಹೊಂದಿರುವ ನಿಧಾನವಾಗಿ ಬೆಳೆಯುವ ನಿತ್ಯಹರಿದ್ವರ್ಣ ಮರವಾಗಿದೆ.

ಇದನ್ನೂ ಓದಿ: Belagavi: ಟ್ರಾಫಿಕ್ ಪೊಲೀಸ್ ಆದ ಹೌದೋ ಹುಲಿಯಾ!

ಭಾರತದ ಅಸ್ಸಾಂನ ಪೂರ್ವ ರಾಜ್ಯದಲ್ಲಿ ಬ್ರಿಟನ್ನಿನ ಸೀಮೆಎಣ್ಣೆಯನ್ನು ಪರಿಚಯಿಸುವ ಮುಂಚೆ ಇದರ ಬೀಜಗಳನ್ನು ಬೆಳಗುವ ಎಣ್ಣೆಯನ್ನು ತಯಾರಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದು ಶ್ರೀಲಂಕಾದ ರಾಷ್ಟ್ರೀಯ ಮರವಾಗಿದೆ. ಈ ಮರ ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ದಕ್ಷಿಣ ನೇಪಾಳ, ಬರ್ಮಾ, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಕಂಡುಬರುತ್ತದೆ. ನಾಗಸಂಪಿಗೆ ಮರವು ಕಟ್ಟಡ ನಿರ್ಮಾಣ, ರೈಲ್ವೇ ಸ್ಲೀಪರ್ ಮತ್ತು ಸೇತುವೆ ನಿರ್ಮಾಣಗಳಲ್ಲಿ ಬಳಕೆಯಲ್ಲಿದೆ.

ಈ ಮರದ ಬೀಜದಿಂದ ಸಿಗುವ ಎಣ್ಣೆ ಚರ್ಮರೋಗಗಳಿಗೆ ರಾಮಬಾಣವಾಗಿದೆ ಎನ್ನಲಾಗುತ್ತದೆ. ಅಲ್ಲದೇ ಇದರ ಎಲೆಯಿಂದ ಶೀತ ಗುಣಪಡಿಸುವ ಔಷಧ ತಯಾರಿಸಲಾಗುತ್ತದೆ. ಬೇರಿನಿಂದ ಹಾವಿನ ಕಡಿತಕ್ಕೆ ಪ್ರತಿವಿಷ ತಯಾರಿಸುತ್ತಾರೆ. ಬೀಜದ ಎಣ್ಣೆಯು ಹುಣ್ಣುಗಳಿಗೂ, ವಾತದ ನೋವಿಗೂ ಉಪಯೋಗವಾಗುತ್ತದೆ ಎನ್ನುತ್ತಾರೆ. ಎಲೆಗಳ ಕಷಾಯವು ಕಫವನ್ನು ಕಡಿಮೆ ಮಾಡುವುದರ ಜೊತೆಗೆ ಕೆಮ್ಮನ್ನು ನಿಯಂತ್ರಿಸುತ್ತದೆ. ಬೇರನ್ನು ಅರೆದು ಹಚ್ಚಿದರೆ ವಿಷವನ್ನು ಹೀರುವ ಗುಣವೂ ಇದಕ್ಕಿದೆ. ಅತಿಯಾಗಿ ನೆಗಡಿಯಾದಾಗ ಎಲೆಗಳನ್ನು ಅರೆದು ಹಣೆಯ ಮೇಲೆ ಪಟ್ಟಿ ಹಾಕಿದರೆ ನೆಗಡಿ ಕಡಿಮೆಯಾಗುತ್ತದೆ ಎನ್ನುವುದು ಆಯುರ್ವೇದ ಪದ್ಧತಿಯಿಂದ ತಿಳಿದುಬರುತ್ತದೆ.

Disclaimer

ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.