Last Updated:
ಮಂಗಳೂರಿನ ಬೀಚ್‌ಗಳಲ್ಲಿ ಬೆಳ್ಳಕ್ಕಿಗಳ ಕಲರವ ಕಾಣಸಿಗುತ್ತಿದ್ದು, ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ವಿದೇಶದ ಹಕ್ಕಿಗಳ ದಂಡು ಸಮುದ್ರ ತೀರಕ್ಕೆ ವಲಸೆ ಬರುತ್ತದೆ. ಸೀಗಲ್‌ಗಳು ಉಪ್ಪು ನೀರನ್ನೇ ಸೇವಿಸುತ್ತವೆ.
ದಕ್ಷಿಣ ಕನ್ನಡ: ಮಂಗಳೂರಿನ ಬೀಚ್‌ಗಳಲ್ಲಿ (Mangaluru Beach) ಬೆಳ್ಳಕ್ಕಿಗಳ ಕಲರವ ಕಾಣಸಿಗುತ್ತಿವೆ. ಮಂಗಳೂರು, ಸುರತ್ಕಲ್ (Surathkal Beach) ಆಸುಪಾಸು ಸಮುದ್ರ ಕಿನಾರೆಗಳಲ್ಲಿ ವಿದೇಶದ ಹಕ್ಕಿಗಳ ದಂಡು ಕಾಣ ಸಿಗುತ್ತಿವೆ. ಸೀಗಲ್ ಎಂದು ಕರೆಯಲ್ಪಡುವ ಹಕ್ಕಿಗಳು (Birds) ಇವಾಗಿದ್ದು, ಮುಂಜಾನೆ, ಮುಸ್ಸಂಜೆಯ ವೇಳೆಗೆ ವಾಯು ವಿಹಾರಕ್ಕೆ ತೆರಳುವವರಿಗೆ ಈ ಹಕ್ಕಿಗಳ ಹಿಂಡಿನ ದರ್ಶನವಾಗುತ್ತಿದೆ.
ಪ್ರತಿವರ್ಷ ಅಕ್ಟೋಬರ್‌ನಿಂದ ಏಪ್ರಿಲ್ ಮಧ್ಯದವರೆಗಿನ ಅವಧಿಯಲ್ಲಿ ಹಕ್ಕಿಗಳ ದಂಡು ಕರಾವಳಿಯ ಕರ್ನಾಟಕದ ಕಡಲತೀರಕ್ಕೆ ಬರೋದು ಸಾಮಾನ್ಯವಾಗಿದೆ. ವಿದೇಶದಲ್ಲಿ ಚಳಿಯನ್ನು ತಾಳಲಾರದೆ ಹಕ್ಕಿಗಳ ಹಿಂಡು ಸಾವಿರಾರು ಮೈಲು ವಲಸೆ ಬರುತ್ತದೆ. ಇವುಗಳು ಸಮುದ್ರದ ತೀರ ಅಥವಾ ಬೃಹತ್ ನದಿಗಳ ಪಕ್ಕ ಇರುವ ಮಹಾನಗರಗಳಲ್ಲಿ, ಸಿಹಿ ನೀರಿನ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಅತೀ ಹೆಚ್ಚಾಗಿ ಕಾಣ ಸಿಗುತ್ತದೆ.
ಸೀಗಲ್‌ಗಳು ಸಮುದ್ರದಲ್ಲಿ ವಾಸಿಸುವಾಗ ಉಪ್ಪು ನೀರನ್ನೇ ಸೇವಿಸುತ್ತದೆ. ಉಪ್ಪು ನೀರಿನ ತೀವ್ರತೆ ಕಡಿಮೆ ತಡೆದುಕೊಳ್ಳಲು ಇವುಗಳ ಕಣ್ಣಿನ ಮೇಲೆ ವಿಶೇಷ ಗ್ರಂಥಿಗಳು ಇವೆ. ಆದರೆ ಸಂತಾನೋತ್ಪತ್ತಿಗಾಗಿ ತಮ್ಮ ದೇಶಕ್ಕೆ ವಾಪಸ್ ಹೋಗೋದು ಇವುಗಳ ವಿಶೇಷ.
ಇದನ್ನೂ ಓದಿ: Hassan: ಮಲೆನಾಡಿನ ಗಟ್ಟಿಗಿತ್ತಿ: ಛಲದಿಂದ ಕ್ಯಾಮೆರಾ ಕೈಯಲ್ಲಿ ಹಿಡಿದು ಸಾಧನೆಗೈದ ಛಾಯಾಗ್ರಾಹಕಿಯ ಕಥೆ
ಈ ಹಕ್ಕಿಗಳು ಪ್ರತಿವರ್ಷ ಮಂಗಳೂರಿನ ಕಡಲತೀರ, ಸುರತ್ಕಲ್ ತೀರ, ಸಸಿ ಹಿತ್ಲು ಸೇರಿದಂತೆ ಕಡಲ ಕಿನಾರೆಯಲ್ಲಿ ಆಶ್ರಯ ಪಡೆಯುತ್ತದೆ. ಈ ಹಕ್ಕಿಗಳಲ್ಲಿ ಮೂರು ಪ್ರಬೇಧಗಳಿದ್ದು, ಪೂರ್ವ ಸಮುದ್ರ ಪ್ರದೇಶಗಳಿಂದ ವಲಸೆ ಬರುತ್ತವೆ.
Dakshina Kannada,Karnataka
April 17, 2025 1:19 PM IST