Last Updated:
ಡಿಸಿ ಕಚೇರಿಯ ಮುಂಭಾಗವನ್ನು ತುಳುನಾಡಿನ ಪರಂಪರೆಯ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಲಾಂಛನ, ರಾಜ್ಯಕ್ಕೆ ಸಂಬಂಧಿಸಿದ ಲಾಂಛನ ಸೇರಿದಂತೆ ಇಡೀ ರಾಷ್ಟ್ರದಲ್ಲೇ ಮಾದರಿಯೆನಿಸುವ ದೊಡ್ಡಮಟ್ಟದ ಡಿಸಿ ಕಚೇರಿಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ: ಮಂಗಳೂರು ನಗರದಲ್ಲಿ ರಾಜ್ಯದ ಅತೀ ದೊಡ್ಡ ಜಿಲ್ಲಾಧಿಕಾರಿ ಕಚೇರಿ(District Collector Office) ನಿರ್ಮಾಣವಾಗುತ್ತಿದೆ. ಜನವರಿ 17 ರಂದು ಲೋಕಾರ್ಪಣೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದ್ದು ಕಾಮಗಾರಿಗಳು(Constructions) ಭರದಿಂದ ಸಾಗುತ್ತಿದೆ. ಮಂಗಳೂರು ನಗರದ ಪಡೀಲ್ ಬಳಿ ನಿರ್ಮಾಣಗೊಳ್ಳುತ್ತಿರುವ ದ.ಕ.ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ (UT Khader, 23rd Speaker of the Karnataka Legislative Assembly) ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್ ಪ್ರಭ, ಮನಪಾ ಇಂಜಿನಿಯರ್ ಸಲಹೆಗಾರ ಧರ್ಮರಾಜ್ ಅವರಿಂದ ಡಿಸಿ ಕಚೇರಿಯ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ದ.ಕ.ಜಿಲ್ಲಾಧಿಕಾರಿ ಕಚೇರಿಗೆ ಸುಸಜ್ಜಿತ ಕಟ್ಟಡ ಬೇಕೆಂದು 2013ರಲ್ಲಿ ಪಡೀಲ್‌ನಲ್ಲಿ ಜಾಗ ನಿಗದಿಪಡಿಸಲಾಗಿತ್ತು. 75ಕೋಟಿ ರೂ. ವೆಚ್ಚದಲ್ಲಿ ಡಿಸಿ ಕಚೇರಿ ಕಾಮಗಾರಿ ನಡೆಯುತ್ತಿದೆ. ಜನವರಿ17ರಂದು ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆ ಆಗಲಿದೆ. ಈ ಉದ್ಘಾಟನೆಯನ್ನು ಸಿಎಂ ಸಿದ್ಧರಾಮಯ್ಯ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಡಿಸಿ ಕಚೇರಿಯನ್ನು ಲೋಕಾರ್ಪಣೆ ಮಾಡುವ ಯೋಜನೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಆದರೆ ಅದಕ್ಕಿಂತ ಮೊದಲು ಕಾಮಗಾರಿ ಮುಗಿಸಲು ಸವಾಲು ಇದೆ. ಬಹುತೇಕ ಕಾಮಗಾರಿ ಮುಗಿದಲ್ಲಿ ಅದೇ ದಿನ ಲೋಕಾರ್ಪಣೆಗೊಳ್ಳಲಿದೆ.
ಇದನ್ನೂ ಓದಿ: Uttara Kannada: ಈ ದೇವಾಲಯದಲ್ಲಿ ಸತ್ಯಭಾಮ ಮತ್ತು ರುಕ್ಮಿಣಿ ಜೊತೆಗಿದ್ದಾನೆ ಶ್ರೀಕೃಷ್ಣ!
ಡಿಸಿ ಕಚೇರಿಯ ಮುಂಭಾಗವನ್ನು ತುಳುನಾಡಿನ ಪರಂಪರೆಯ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಲಾಂಛನ, ರಾಜ್ಯಕ್ಕೆ ಸಂಬಂಧಿಸಿದ ಲಾಂಛನ ಸೇರಿದಂತೆ ಇಡೀ ರಾಷ್ಟ್ರದಲ್ಲೇ ಮಾದರಿಯೆನಿಸುವ ದೊಡ್ಡಮಟ್ಟದ ಡಿಸಿ ಕಚೇರಿಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ಇಲಾಖೆಯನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗುತ್ತದೆ.
ಸುಮಾರು 5.89 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಡಿಸಿ ಕಚೇರಿ ರಾಜ್ಯದ ಅತೀ ದೊಡ್ಡ ಡಿಸಿ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಟ್ಟು 75 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 2018 ರ ಮಾರ್ಚ್ 17 ರಂದು ಕಾಮಗಾರಿ ಆರಂಭಗೊಂಡಿತ್ತು. ಕುಂಟುತ್ತಾ ಸಾಗಿದ ಕಾಮಗಾರಿ ಈಗ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಒಟ್ಟು 33 ಇಲಾಖೆಗಳು ಈ ಕಟ್ಟಡದೊಳಗೆ ಇರಲಿವೆ. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಆಡಿಟೋರಿಯಂ, ಕ್ಯಾಂಟೀನ್, ನಾಲ್ಕು ಅಂಗಡಿಗಳೂ ಇರಲಿವೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ನೂತನ ಜಿಲ್ಲಾಧಿಕಾರಿಗಳ ಕಚೇರಿ ಒಳಗೊಂಡಿರಲಿದೆ.
Dakshina Kannada,Karnataka
January 10, 2025 2:37 PM IST