Last Updated:
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ತ್ರ ಅವರು ಬೆಳಗಿನ ಜಾವ ಶ್ರೀ ದೇವರಿಗೆ ಕಲಶಾಭಿಷೇಕ ನಡೆಸಿ ಅರಿಕೊಟ್ಟಿಗೆಗೆ ಪ್ರವೇಶಿಸಿ ದ್ವಿಜರಿಗೆ ಮುಹೂರ್ತ ದಾನ ದಕ್ಷಿಣೆ ಕೊಟ್ಟು ಸರ್ವಾಪ್ಪಣೆ ಪಡೆದು ಅಪ್ಪ ತಯಾರಿಗೆ ಸೂಚನೆ ನೀಡಿದ ಬಳಿಕ ಅಪ್ಪ ತಯಾರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
ದಕ್ಷಿಣ ಕನ್ನಡ: ದಕ್ಷಿಣ ಭಾರತದ ಹೆಸರಾಂತ ಗಣಪತಿ ಕ್ಷೇತ್ರವಾದ ಕಾಸರಗೋಡು ಜಿಲ್ಲೆಯ(Kasaragoud District) ಮಧೂರು ಮದನಂತೇಶ್ವರ ಮಹಾಗಣಪತಿ ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಮೂಡಪ್ಪ ಸೇವೆ (Mudappa Seva) ನಡೆಯಿತು. 1992ರ ಬಳಿಕ ಕ್ಷೇತ್ರದಲ್ಲಿ ಈ ಸೇವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಮೂಡಪ್ಪ ಸೇವೆಯ ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ಗಣಪತಿಗೆ ಅತ್ಯಂತ ಇಷ್ಟದ ಸೇವೆಯಾದ ಮೂಡಪ್ಪ ಸೇವೆಗೆ ಮಧೂರು ಕ್ಷೇತ್ರ ಹೆಸರುವಾಸಿಯಾಗಿದ್ದು, ಈ ಕ್ಷೇತ್ರದಲ್ಲಿ ನಡೆದ ಮೂಡಪ್ಪ ಸೇವೆಗೆ ಕರ್ನಾಟಕ ಮತ್ತು ಕೇರಳ ರಾಜ್ಯದ ಭಕ್ತರ(Devotees) ಸಾಲು ಗಮನ ಸೆಳೆಯಿತು.
ಮಹಾಗಣಪತಿ ಕ್ಷೇತ್ರದಲ್ಲಿ ಮೂಡಪ್ಪ ಸೇವೆ
ಏಪ್ರಿಲ್ 5 ರ ಶನಿವಾರ ರಾತ್ರಿ ಗಣಪತಿ ದೇವರ ವಿಗ್ರಹವನ್ನು ಅಪ್ಪದಿಂದ ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿತ್ತು. ಶನಿವಾರ ರಾತ್ರಿ ಪೂರ್ತಿ ಈ ಅಪ್ಪಗಳು ದೇವರ ವಿಗ್ರಹವಿರುವ ಗರ್ಭಗುಡಿಯಲ್ಲೇ ಇಡುವುದಕ್ಕೆ ಮೂಡಪ್ಪ ಸೇವೆ ಎಂದು ಕರೆಯುತ್ತಾರೆ. ಕ್ಷೇತ್ರದಲ್ಲಿ ನಡೆದ ಮೂಡಪ್ಪ ಸೇವೆಗಾಗಿ 144 ಸೇರು ಅಕ್ಕಿಯಿಂದ ತಯಾರಿಸಿದ ಅಪ್ಪ, 111 ಸೇರು ಅಕ್ಕಿಯಿಂದ ತಯಾರಿಸಿದ ಪಚ್ಚಪ್ಪವನ್ನು ತಯಾರಿಸಲಾಗಿದೆ.
ಶನಿವಾರ ಮುಂಜಾನೆ ದೀಪದ ಬಲಿ, ಶತರುದ್ರಾಭಿಷೇಕ ನಡೆದ ಬಳಿಕ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ತ್ರ ಅವರು ಬೆಳಗಿನ ಜಾವ ಶ್ರೀ ದೇವರಿಗೆ ಕಲಶಾಭಿಷೇಕ ನಡೆಸಿ ಅರಿಕೊಟ್ಟಿಗೆಗೆ ಪ್ರವೇಶಿಸಿ ದ್ವಿಜರಿಗೆ ಮುಹೂರ್ತ ದಾನ ದಕ್ಷಿಣೆ ಕೊಟ್ಟು ಸರ್ವಾಪ್ಪಣೆ ಪಡೆದು ಅಪ್ಪ ತಯಾರಿಗೆ ಸೂಚನೆ ನೀಡಿದ ಬಳಿಕ ಅಪ್ಪ ತಯಾರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
ಇದನ್ನೂ ಓದಿ:Dakshina Kannada: ದೇಶದಲ್ಲೇ ಪ್ರಥಮ ಪ್ರಯೋಗ- ಗೇರು ಹಣ್ಣಿನಿಂದ ಬೀಜ ಬಿಡಿಸುವ ಯಂತ್ರ ಸಿದ್ದ!
ಗಣಪತಿ ವಿಗ್ರಹದ ಸುತ್ತ ಕಬ್ಬಿನ ಬೇಲಿಯನ್ನು ರಚಿಸಿ ಅದರೊಳಗೆ ಅಷ್ಟದ್ರವ್ಯಗಳ ಸಹಿತ ಅಪ್ಪ ಮತ್ತು ಪಚ್ಚಪ್ಪವನ್ನು ಮಹಾಗಣಪತಿಯ ಬಾಯಿಯವರೆಗೆ ತುಂಬಲಾಗುತ್ತದೆ. ಬಳಿಕ ಮಹಾಗಣಪತಿಯ ಶಯನ ಕಲ್ಪನೆಯಲ್ಲಿ ಕವಾಟ ಬಂಧನ ಇದೇ ಸಂದರ್ಭ ಶ್ರೀ ಮದನಂತೇಶ್ವರ ದೇವರಿಗೆ ಮೂರು ಮುಡಿ ಅಕ್ಕಿಯಿಂದ ತಯಾರಿಸಿದ ಅಪ್ಪ ಹಾಗೂ ಒಂದು ಮುಡಿ ಅಕ್ಕಿಯ ನೈವೇದ್ಯ ಸಮರ್ಪಣೆ ಮಾಡಲಾಯಿತು.
33 ವರ್ಷಗಳ ಬಳಿಕ ಮಧೂರು ಕ್ಷೇತ್ರದಲ್ಲಿ ದೇವರಿಗೆ ನಡೆದ ಮೂಡಪ್ಪ ಸೇವೆಯನ್ನು ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ವೀಕ್ಷಿಸಿದರು. ಮೂಡಪ್ಪ ಸೇವೆ ನೆರವೇರಿದ ಬಳಿಕ ಅಪ್ಪವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.
Dakshina Kannada,Karnataka
April 08, 2025 2:12 PM IST