Last Updated:
90 ವರ್ಷದ ಈ ಪ್ರಾಯದಲ್ಲಿ ಯುವಕರನ್ನು ನಾಚಿಸುವ ರೀತಿಯಲ್ಲಿ ಉಲ್ಲಾಸದಿಂದ ದುಡಿಯುತ್ತಿರುವ ಜಯರಾಮ್, ದುಡಿದು ಬದುಕಿದರೆ ಜೀವನಕ್ಕೊಂದು ಅರ್ಥ ಬರುತ್ತದೆ ಎನ್ನುತ್ತಾರೆ.
ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ದುಡಿಯೋದು ಅಂದ್ರೆ ಜನರಿಗೆ(People) ಕೊಂಚ ಅಲರ್ಜಿ. ಎಲ್ಲವೂ ದುಡಿಯದೇ ಸಿಕ್ಕರೆ ಉತ್ತಮ ಅನ್ನೋ ಯೋಚನೆ ಇರೋ ಜನರ ಸಂಖ್ಯೆನೂ ಹೆಚ್ಚೇನೆ ಇದೆ. ಆದರೆ ಇಲ್ಲೊಬ್ಬರು 90 ವರ್ಷದ ವೃದ್ಧ ಇಂದಿಗೂ ದುಡಿಯುತ್ತಿದ್ದಾರೆ. ಇವರಿಗೆ ವಯಸ್ಸು(Age) ಕೇವಲ ನಂಬರ್ ಆಗಿದ್ದು, ಇವರ ದುಡಿತದ ಸೆಳೆತವನ್ನು ಎಂದೂ ಬಾಧಿಸಿಲ್ಲ. ದುಡಿಯಲು ಉದಾಸೀನ ತೋರುವ ಯುವಕರಿಗೆ ರೋಲ್ ಮಾಡಲ್(Role Model) ಈ ವೃದ್ಧ ಎಂದರೆ ತಪ್ಪಾಗಲಾರದು.
ಚರ್ಮ ಸುಕ್ಕುಗಟ್ಟಿದ ಕೈಗಳು, ಕಣ್ಣುಗಳಲ್ಲಿ ಕನ್ನಡಕವಿದ್ದರೂ, ಇನ್ನೂ ನೋಡುವ ತವಕ. ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಕೊಂಚಾಡಿ ನಿವಾಸಿ ಜಯರಾಮ್ ಅವರ ಸದ್ಯದ ಬಾಡಿ ಸ್ಟ್ರಕ್ಚರ್. ಇವರ ಸದ್ಯದ ವಯಸ್ಸು ಕೇವಲ 90 ವರ್ಷ. ಇವರ ಬದುಕಿನ ಸುಮಾರು 50 ವರ್ಷ ಚಾಲಕರಾಗಿಯೇ ದುಡಿದವರು. ಸುಮಾರು 30 ವರ್ಷ ಲಾರಿ ಚಾಲಕನಾಗಿ,ಉಳಿದ ವರ್ಷಗಳಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದಾರೆ. 90 ವರ್ಷದ ಈ ಪ್ರಾಯದಲ್ಲಿ ಯುವಕರನ್ನು ನಾಚಿಸುವ ರೀತಿಯಲ್ಲಿ ಉಲ್ಲಾಸದಿಂದ ದುಡಿಯುತ್ತಿರುವ ಜಯರಾಮ್, ದುಡಿದು ಬದುಕಿದರೆ ಜೀವನಕ್ಕೊಂದು ಅರ್ಥ ಬರುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: Uttara Kannada: ಕೋಟೆಮನೆಯ ಅಗ್ರಹಾರದಲ್ಲಿವೆ 11 ಮನೆಗಳು- ಇದು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಪರೂಪದ ಮನೆ!
ಕಳೆದ ಇಪತ್ತು ವರ್ಷಗಳಿಂದ ಆಟೋ ಚಾಲಕನಾಗಿ ದುಡಿಯುತ್ತಿರುವ ಜಯರಾಮ್, ಕೊಂಚಾಡಿ ಕಟ್ಟೆ ಆಟೋ ಪಾರ್ಕ್‌ನ ಆಕ್ಟೀವ್ ಚಾಲಕ. ಯಾವುದೇ ಸಮಯದಲ್ಲಿ ಯಾರೇ ಕರೆದರೂ ಪ್ರಾಮಾಣಿಕವಾಗಿ, ಸುರಕ್ಷಿತವಾಗಿ ಪ್ರಯಾಣಿಕರನ್ನು ಕರೆದೊಯ್ಯವ ಜಯರಾಮ್ ಎಲ್ಲರಿಗೂ ಅಚ್ಚುಮೆಚ್ಷಿನ ಜಯರಾಮಣ್ಣ. ಈ ಇಳಿವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಿದ್ದ ಇವರು, ಇಂದಿಗೂ ತನ್ನ ಬದುಕಿನ ಬಂಡಿಯನ್ನು ದುಡಿದೇ ಸಾಗಿಸುತ್ತಿದ್ದಾರೆ.
ಬದುಕಿನ ಕೊನೆಯ ಉಸಿರಿರುವವರೆಗೂ ದುಡಿದೇ ತಿನ್ನುತ್ತೇನೆ ಎನ್ನುವ ಛಲವಾದಿ ಈ ಜಯರಾಮ್. ಆಟೋ ಚಾಲಕನಾಗಿ ಕಳೆದ ಇಪ್ಪತ್ತು ವರ್ಷಗಳಿಂದ ದುಡಿಯುತ್ತಿರುವ ಜಯರಾಮ್ ಒಮ್ಮೆಯೂ ಅಫಘಾತ ಮಾಡದ ನುರಿತ ಚಾಲಕ. ಈ ಕಾರಣಕ್ಕಾಗಿ ಮಹಿಳೆಯರು, ಹೆಣ್ಣುಮಕ್ಕಳು ಸುರಕ್ಷತೆಯ ದೃಷ್ಟಿಯಿಂದ ಇವರ ಆಟೋವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.
Dakshina Kannada,Karnataka
January 19, 2025 1:04 PM IST