Dakshina Kannada: ಲಕ್ಷದ್ವೀಪದಲ್ಲಿ ಗರಿಗೆದರಿದ ಪ್ರವಾಸೋದ್ಯಮ- ಭರದಿಂದ ಸಾಗ್ತಿದೆ ಕಾಮಗಾರಿ! | Tourism is booming in Lakshadweep – work is progressing at full speed!

Dakshina Kannada: ಲಕ್ಷದ್ವೀಪದಲ್ಲಿ ಗರಿಗೆದರಿದ ಪ್ರವಾಸೋದ್ಯಮ- ಭರದಿಂದ ಸಾಗ್ತಿದೆ ಕಾಮಗಾರಿ! | Tourism is booming in Lakshadweep – work is progressing at full speed!

Last Updated:

ಸಾಮಾನ್ಯವಾಗಿ ಲಕ್ಷದ್ವೀಪದ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಈ ಬಾರಿ ನಿರಂತರವಾಗಿ ಸಿಮೆಂಟ್‌, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನೂ ಕಳುಹಿಸಿಕೊಡಲಾಗುತ್ತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಲಕ್ಷದ್ವೀಪದಲ್ಲಿ(Lakshadweep) ಪ್ರವಾಸೋದ್ಯಮ(Tourism) ಪುಟಿದೆದ್ದಿದೆ. ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರ(Tourists) ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಹಲವು ಉದ್ಯಮಿಗಳು ಮುಂದಾಗಿದ್ದು, ಲಕ್ಷದ್ವೀಪದಲ್ಲಿ ಕಟ್ಟಡ ಕೆಲಸಗಳು ಭರದಿಂದ ಸಾಗುತ್ತಿವೆ. ಅಗತ್ಯ ವಸ್ತುಗಳೂ ಸೇರಿದಂತೆ ಬಹುತೇಕ ಎಲ್ಲ ಸಾಮಗ್ರಿಗಳಿಗೆ ಮಂಗಳೂರು ಮತ್ತು ಕೇರಳದ ಬಂದರನ್ನು ಅವಲಂಬಿಸಿರುವ ಕೇಂದ್ರಾಡಳಿತ ಪ್ರದೇಶ(Union Territory) ಲಕ್ಷದ್ವೀಪಕ್ಕೆ ಮಂಗಳೂರಿನ ಹಳೆಯ ಬಂದರಿನ ಮೂಲಕ ನಿರಂತರ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ.

ಹಡಗಿನಲ್ಲಿ ಅಕ್ಕಿ, ತರಕಾರಿ ಸೇರಿದಂತೆ ಆಹಾರ ಸಾಮಗ್ರಿಗಳು ಸೇರಿದಂತೆ ಈ ಬಾರಿ ಕಟ್ಟಡ ನಿರ್ಮಾಣ ಕಾಮಗಾರಿಯ ವಸ್ತುಗಳು ಹೇರಳವಾಗಿ ಸಾಗಾಟವಾಗುತ್ತಿದೆ. ಸಾಮಾನ್ಯವಾಗಿ ಲಕ್ಷದ್ವೀಪದ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಈ ಬಾರಿ ನಿರಂತರವಾಗಿ ಸಿಮೆಂಟ್‌, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನೂ ಕಳುಹಿಸಿಕೊಡಲಾಗುತ್ತಿದೆ.

ಲಕ್ಷದ್ವೀಪದಲ್ಲಿ 36 ದ್ವೀಪ ಸಮೂಹಗಳಿವೆ. ಕೇಂದ್ರಾಡಳಿತಕ್ಕೆ ಸೇರಿದ ಅತ್ಯಂತ ಸಣ್ಣ ಪ್ರದೇಶವಾದ ಇಲ್ಲಿ 6-7 ದ್ವೀಪಗಳು ಮಾತ್ರ ವಾಸಯೋಗ್ಯವಾಗಿವೆ. ಇಲ್ಲಿರುವ ನಿವಾಸಿಗಳು ಜೀವನಕ್ಕಾಗಿ ನೆರೆಯ ಮಂಗಳೂರು ಹಾಗೂ ಕೊಚ್ಚಿಯನ್ನು ಅವಲಂಬಿಸಿದ್ದಾರೆ. ತೆಂಗು ಬಿಟ್ಟರೆ ಬೇರೆ ಯಾವುದೇ ಪ್ರಮುಖ ಕೃಷಿ ದ್ವೀಪದಲ್ಲಿಲ್ಲ. ಮೀನುಗಾರಿಕೆಯೇ ಪ್ರಮುಖ ಉದ್ಯೋಗವಾಗಿದೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರತಿ ವರ್ಷ ಸುಮಾರು 7 ಸಾವಿರ ಟನ್‌ ಆಹಾರ ಧಾನ್ಯಗಳನ್ನು ಕಳುಹಿಸಲಾಗುತ್ತದೆ.

ಇದರ ಜತೆಗೆ ಸಾಂಬಾರು ಪದಾರ್ಥ, ಮೆಣಸು, ಶೃಂಗಾರ ಸಾಧನ, ಮನೆ ಕಟ್ಟುವ ಸಲಕರಣೆಗಳನ್ನು ಕೂಡ ಸಾಗಣೆ ಮಾಡಲಾಗುತ್ತದೆ. ಮುಂಗಾರು ಮಳೆ, ಸಮುದ್ರದ ಆರ್ಭಟಗಳ ಆತಂಕ ಇರುವುದರಿಂದ ಮೂರು ತಿಂಗಳು ಸರಕು ಸಾಗಣೆ ಹಡಗುಗಳ ಸಂಚಾರ ಸ್ಥಗಿತವಾಗುತ್ತದೆ. ಲಕ್ಷದ್ವೀಪ- ಮಂಗಳೂರಿನ ವ್ಯವಹಾರ ಸೆಪ್ಟೆಂಬರ್‌ 15ರ ನಂತರವೇ ಆರಂಭವಾಗಲಿದೆ.