Last Updated:
ಸಮುದ್ರವನ್ನು ಕಿನಾರೆಯಲ್ಲಿ ನಿಂತು ನೋಡಿದವರಿಗೆ ಒಮ್ಮೆ ಸಮುದ್ರದ ಮಧ್ಯೆ ಕೊಂಚ ದೂರ ನಡೆದಾಡಬೇಕು ಎಂದು ಅನಿಸದೆ ಇರಲಾರದು. ಹೀಗೆ ಹಾತೊರೆಯುವ ಸಮುದ್ರ ಪ್ರೇಮಿಗಳಿಗಾಗಿಯೇ ಇತ್ತೀಚಿನ ದಿನಗಳಲ್ಲಿ ಕೆಲವು ನಿರ್ದಿಷ್ಟ ಬೀಚ್‌ಗಳಲ್ಲಿ ಸೀವಾಕ್‌ಗಳನ್ನು ನಿರ್ಮಿಸಲಾಗಿದೆ.
ದಕ್ಷಿಣ ಕನ್ನಡ: ಸಮುದ್ರದ ಆರ್ಭಟ(Sea Shout), ಶಾಂತತೆ ನೋಡಿ ಮರುಳಾಗದೇ ಇರೋರು ವಿರಳ. ಮಳೆಗಾಲದ ಸಮಯದಲ್ಲಿ(Rainy Season) ರೌದ್ರನರ್ತನ ತೋರುವ ಸಮುದ್ರದ ಅಲೆಗಳು. ಬೇಸಿಗೆಯಲ್ಲಿ ಶಾಂತವಾಗಿ ಜುಳು ಜುಳು ನಿನಾದದ ಮೂಲಕ ಏಳುವ ಅಲೆಗಳು. ಜೀವನೋಪಾಯಕ್ಕಾಗಿ ಸಮುದ್ರದ ಮಧ್ಯೆ ತೆರಳುವ ಮೀನುಗಾರಿಕೆಯಲ್ಲಿ(Fishing) ತೊಡಗುವ ಜನ. ಇದು ಸಮುದ್ರ ಎಂದ ತಕ್ಷಣ ಕಣ್ಣಿಗೆ ತೋಚುವ ದೃಶ್ಯಗಳು. ಸಮುದ್ರವನ್ನು ಕಿನಾರೆಯಲ್ಲಿ ನಿಂತು ನೋಡಿದವರಿಗೆ ಒಮ್ಮೆ ಸಮುದ್ರದ ಮಧ್ಯೆ ಕೊಂಚ ದೂರ ನಡೆದಾಡಬೇಕು ಎಂದು ಅನಿಸದೆ ಇರಲಾರದು. ಹೀಗೆ ಹಾತೊರೆಯುವ ಸಮುದ್ರ ಪ್ರೇಮಿಗಳಿಗಾಗಿಯೇ ಇತ್ತೀಚಿನ ದಿನಗಳಲ್ಲಿ ಕೆಲವು ನಿರ್ದಿಷ್ಟ ಬೀಚ್‌ಗಳಲ್ಲಿ ಸೀವಾಕ್‌ಗಳನ್ನು ನಿರ್ಮಿಸಲಾಗಿದೆ.
ಸಮುದ್ರ ಕಿನಾರೆಯಿಂದ ಸುಮಾರು 500-1000 ಮೀಟರ್ ತನಕ ಸಮುದ್ರದ ಮಧ್ಯೆ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಇದನ್ನೇ ಸೀ ವಾಕ್ ಎಂದು ಕರೆಯಲಾಗುತ್ತದೆ. ಭಾರೀ ಪ್ರಮಾಣದ ಕಲ್ಲುಗಳನ್ನು ಸಮುದ್ರದ ಆಳದವರೆಗೂ ಹಾಕಿ, ಬಳಿಕ ಅದರ ಮೇಲೆ ಕಾಂಕ್ರೀಟ್ ರಸ್ತೆಯ ರೂಪದಲ್ಲಿ ಈ ಸೀ ವಾಕ್ ಅನ್ನು ನಿರ್ಮಿಸಲಾಗುತ್ತದೆ. ಒಂದು ಕಡೆಯಿಂದ ಒಂದು ವಾಹನ ಸಾಗುವಷ್ಟು ಅಗಲದಲ್ಲಿ ಈ ಸೀವಾಕ್ ನಿರ್ಮಿಸಲಾಗುತ್ತಾದರೂ, ಇದರಲ್ಲಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ. ಕೇವಲ ಕಾಲ್ನಡಿಗೆಯಲ್ಲೇ ಇದರಲ್ಲಿ ಚಲಿಸಿ, ಮೂರೂ ಕಡೆಗಳಲ್ಲಿ ಸಮುದ್ರದ ಮಧ್ಯೆ ಇರುವ ಫೀಲ್ ಈ ಸೀವಾಕ್ ನಿಂದ ಸಿಗುತ್ತೆ.
ಇದನ್ನೂ ಓದಿ: Chikkamagaluru: ಬಯಲುಸೀಮೆಯ ಶಕ್ತಿ ದೇವತೆ ಈ ಸ್ವರ್ಣಾಂಬ ದೇವಿ- ಕುಂಕುಮ ಎರಚುವ ಮೂಲಕ ದೇವಿಯ ಆಶೀರ್ವಾದ ಪಡೆದ ಭಕ್ತರು
ಸೀ ವಾಕ್‌ನಲ್ಲಿ ಸಮುದ್ರದ ಮಧ್ಯೆ ನಡೆಯುವ ಸಂದರ್ಭದಲ್ಲಿ ಸಮುದ್ರ ಕಿನಾರೆಗಿಂತ ಕೆಲವೇ ಮೀಟರ್ ಅಂತರದಲ್ಲಿ ಮೀನು ಹಿಡಿಯುವ ಸಾಂಪ್ರದಾಯಿಕ ನಾಡ ದೋಣಿಗಳು, ಆಳ ಸಮುದ್ರದ ಮೀನುಗಾರಿಕೆ ಮಾಡಿ ಬಂದು ಕಿನಾರೆಯ ಪಕ್ಕ ಲಂಗರು ಹಾಕಿದ ಸಣ್ಣ ಮತ್ತು ದೊಡ್ಡ ಬೋಟ್ ಗಳು, ನೀರಿನಿಂದ ಮೇಲಕ್ಕೆ ಚಿಮ್ಮುವ ಕೆಲವು ಮೀನುಗಳು ಈ ಎಲ್ಲಾ ದೃಶ್ಯಗಳನ್ನು ಹತ್ತಿರದಿಂದ ಕಾಣುವ ಅವಕಾಶ ಈ ಸೀವಾಕ್‌ನಿಂದ ಸಿಗುತ್ತಿದೆ. ಹಡಗು, ಬೋಟ್ ಗಳ ಮೂಲಕ ಸಮುದ್ರದಲ್ಲಿ ಪ್ರಯಾಣಿಸಲು ಅವಕಾಶ ವಂಚಿತರು ಈ ಸೀವಾಕ್ ಬಳಸಿ ಸಮುದ್ರದ ಮಧ್ಯೆ ಇರುವ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಕೇವಲ ಕೆಲವೇ ಕೆಲವು ಬೀಚ್ ಗಳಲ್ಲಿ ಇಂತಹ ಸೀವಾಕ್ ಗಳನ್ನು ನಿರ್ಮಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮೀಪದ ಆಳ್ವೆಕೋಡಿ ಧಕ್ಕೆ ಪಕ್ಕದಲ್ಲಿ ಈ ಸೀವಾಕ್ ನಿರ್ಮಿಸಲಾಗಿದ್ದು, ಬೀಚ್‌ಗೆ ತೆರಳೋ ಜನ ಈ ಸೀವಾಕ್ ನ ವಿಭಿನ್ನ ಅನುಭವವನ್ನು ಆಸ್ವಾದಿಸುವ ಅವಕಾಶವನ್ನೂ ಇಲ್ಲಿ ಕಲ್ಪಿಸಲಾಗಿದೆ.
Dakshina Kannada,Karnataka
April 22, 2025 5:21 PM IST