Last Updated:
ಪುರುಷಮೃಗ ಮನೋ ವೇಗದಲ್ಲಿ ಓಡುವ ಪ್ರಾಣಿಯಾಗಿದ್ದರೆ, ಭೀಮ ವಾಯು ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿರುವವನಾಗಿದ್ದಾನೆ. ಈ ಕಾರಣಕ್ಕೆ ಭೀಮನನ್ನು ಪುರುಷ ಮೃಗವನ್ನು ಕರೆತರಲು ಕಳುಹಿಸಲಾಗುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ(Dakhsina Kannada) ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿರುವ ಸಹಸ್ರಲಿಂಗೇಶ್ವರ ದೇವಸ್ಥಾನವೂ(Sahasralingeshwara Temple) ಒಂದು. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ನದಿ ನಟದಲ್ಲಿ ಈ ಕ್ಷೇತ್ರವಿದೆ. ಪಿಂಡ ಪ್ರಧಾನಕ್ಕೆ ಅತ್ಯಂತ ಹೆಸರುವಾಸಿಯಾಗಿರುವ ಈ ಕ್ಷೇತ್ರದ ಆರಾಧ್ಯಮೂರ್ತಿ ಮಹಾಶಿವ. ದೇವಸ್ಥಾನದ ಆವರಣದಲ್ಲೇ ಮಹಾಕಾಶಿ ದೇವಸ್ಥಾನವೂ ಇದ್ದು, ಶಿವ ಮತ್ತು ದೇವಿಯ ಆರಾಧನಾ ಕ್ಷೇತ್ರವಾಗಿಯೂ ಇದು ಗುರುತಿಸಿಕೊಂಡಿದೆ.
ಸುಮಾರು 2500 ವರ್ಷ ಇತಿಹಾಸ ಹೊಂದಿರುವ ಈ ಕ್ಷೇತ್ರದ ಕಥೆಗಳು ಮಹಾಭಾರತದ ಯುದ್ಧಕ್ಕೆ ಸಂಬಂಧ ಪಡುತ್ತದೆ. ಕುರುಕ್ಷೇತ್ರ ಯುದ್ಧ ನಡೆದ ಬಳಿಕ ಪಾಂಡವರಿಗೆ ತಾವು ಯುದ್ಧದಲ್ಲಿ ಹಲವರನ್ನು ಕೊಂದ ಪಾಪ ಕಾಡುತ್ತದೆ. ಆ ಸಮಯದಲ್ಲಿ ಪಾಂಡವರು ಇದಕ್ಕೆ ಪರಿಹಾರ ಸೂಚಿಸುವಂತೆ ಶ್ರೀ ಕೃಷ್ಣನಲ್ಲಿ ಬೇಡುತ್ತಾರೆ. ಆ ಸಂದರ್ಭದಲ್ಲಿ ಶ್ರೀಕೃಷ್ಣ ರಾಜಸೂಯ ಯಾಗ ಮಾಡುವಂತೆ ಸಲಹೆ ನೀಡುತ್ತಾನೆ. ಈ ಯಾಗ ಪೂರ್ಣಗೊಳ್ಳಬೇಕಾದರೆ ಹಿಮಾಲಯದಲ್ಲಿರುವ ಪುರುಷ ಮೃಗವನ್ನು ಯುಗಕ್ಕೆ ಬಲಿಕೊಡಬೇಕು ಎನ್ನುವ ನಿಯಮವೂ ಇತ್ತು. ಆ ಕಾರಣಕ್ಕಾಗಿ ಪುರುಷ ಮೃಗವನ್ನು ಕರೆತರಲು ಭೀಮನನ್ನು ಪಾಂಡವರು ಸೇರಿ ಕಳುಹಿಸುತ್ತಾರೆ. ಪುರುಷಮೃಗ ಮನೋ ವೇಗದಲ್ಲಿ ಓಡುವ ಪ್ರಾಣಿಯಾಗಿದ್ದರೆ, ಭೀಮ ವಾಯು ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿರುವವನಾಗಿದ್ದಾನೆ. ಈ ಕಾರಣಕ್ಕೆ ಭೀಮನನ್ನು ಪುರುಷ ಮೃಗವನ್ನು ಕರೆತರಲು ಕಳುಹಿಸಲಾಗುತ್ತದೆ.
ಇದನ್ನೂ ಓದಿ: Dharwad: ಅವಳಿ ನಗರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ; ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿರುವ ಹುಬ್ಬಳ್ಳಿ-ಧಾರವಾಡದ ಜನ
ಹೀಗೆ ಹೊರಟ ಭೀಮನಿಗೆ ಮುದಿ ವಯಸ್ಸಿನ ಅಂಜನೇಯ ಕಾಡಿನಲ್ಲಿ ಸಿಗುತ್ತಾನೆ. ಅಂಜನೇಯನ ಬಾಲ ದಾರಿ ಮಧ್ಯೆ ಇದ್ದ ಕಾರಣ ಭೀಮ ಬಾಲವನ್ನು ತೆಗೆಯುವಂತೆ ಸೂಚಿಸುತ್ತಾನೆ. ಮಲಗಿರುವುದು ಆಂಜನೇಯ ಎನ್ನುವ ಅರಿವು ಇಲ್ಲದ ಕಾರಣ, ಭೀಮ ಬಾಲ ತೆಗೆಯುವಂತೆ ಆಜ್ಞೆ ಮಾಡುತ್ತಾನೆ. ಆ ಸಮಯದಲ್ಲಿ ಅಂಜನೇಯ ಬಾಲವನ್ನು ಕೊಂಚ ಆಚೆ ಸರಿಸಿಕೊಳ್ಳುವಂತೆ ಭೀಮನಿಗೆ ಹೇಳುತ್ತಾನೆ. ಆದರೆ ಬಾಲವನ್ನು ಎತ್ತುವುದಾಗಲಿ, ಅಲ್ಲಾಡಿಸಲೂ ಭೀಮನಿಗೆ ಸಾಧ್ಯವಾಗುವುದಿಲ್ಲ. ಮಲಗಿರುವುದು ಆಂಜನೇಯ ಎನ್ನುವುದು ತಿಳಿದ ತಕ್ಷಣ ಆಂಜನೇಯನಿಗೆ ಕೈಮುಗಿದು ಪ್ರಾರ್ಥಿಸುತ್ತಾನೆ. ಭೀಮನ ಪ್ರಯಾಣದ ಉದ್ಧೇಶವನ್ನು ಅರಿತ ಆಂಜನೇಯ ಪುರುಷ ಮೃಗದ ಹಲವು ವಿಶೇಷತೆಗಳನ್ನು ಭೀಮನಿಗೆ ತಿಳಿಸುತ್ತಾನೆ. ಮಾನವ ದೇಹ ಮತ್ತು ಸಿಂಹದ ತಲೆ ಹೊಂದಿರುವ ಈ ಪ್ರಾಣಿ ಶರವೇಗದಲ್ಲಿ ಸಾಗುವ ಕಾರಣ ಭೀಮನಿಗೆ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ತನ್ನ ಮೈಯಿಂದ ಒಂದು ಮುಷ್ಟಿ ರೋಮವನ್ನು ಭೀಮನ ಕೈಗೆ ಕೊಟ್ಡ ಆಂಜನೇಯ ಪುರುಷ ಮೃಗ ನಿನ್ನನ್ನು ಹಿಂಬಾಲಿಸಿಕೊಂಡು ಹತ್ತಿರ ತಲುಪುತ್ತಿದ್ದಂತೆ ಒಂದು ರೋಮವನ್ನು ಭೂಮಿಯ ಮೇಲೆ ಹಾಕಿ ಬಿಡು. ಆ ರೋಮವು ಒಂದು ಶಿವಲಿಂಗವಾಗಿ ರೂಪ ತಾಳುತ್ತದೆ. ಅಪಾರ ಶಿವಭಕ್ತನಾದ ಪುರುಣ ಮೃಗ ಶಿವಲಿಂಗಕ್ಕೆ ಪೂಜೆ ಸಲ್ಲಿಸದೆ, ಯಾವುದೇ ಕಾರಣಕ್ಕೂ ಬೇರೆ ಕೆಲಸ ಮಾಡಲಾರ ಎನ್ನುವ ಮಾತನ್ನು ಭೀಮನಿಗೆ ತಿಳಿಸುತ್ತಾನೆ.
ಅದೇ ರೀತಿ ಭೀಮ ಪುರುಷ ಮೃಗವನ್ನು ಕರೆ ತಂದು, ಉಪ್ಪಿನಂಗಡಿ ಸಮೀಪ ತಲುಪಿದ ಸಮಯದಲ್ಲಿ, ಭೀಮ ಕೈಯಲ್ಲಿ ಉಳಿದಿದ್ದ ಎಲ್ಲಾ ರೋಮವನ್ನು ನೆಲಕ್ಕೆ ಹಾಕುತ್ತಾನೆ. ಹೀಗೆ ಹಾಕಿದ ರೋಮಗಳೆಲ್ಲಾ ಸಹಸ್ತ್ರ ಸಂಖ್ಯೆಯಲ್ಲಿ ಉದ್ಭವವಾದ ಸ್ಥಳವೇ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ. ಸಹಸ್ರ ಲಿಂಗಗಳಿರುವ ಕಾರಣ ಈ ಕ್ಷೇತ್ರಕ್ಕೆ ಸಹಸ್ರಲಿಂಗೇಶ್ವರ ಕ್ಷೇತ್ರ ಎನ್ನುವ ಹೆಸರಾಯಿತು. ನೇತ್ರಾವತಿ ನದಿಯೊಳಗೇ ಇರುವ ಈ ಲಿಂಗಗಳಿಗೆ ಮೂರು ಮಖೆ ಜಾತ್ರೆಯಂದು ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ನಿತ್ಯ ಈ ಕ್ಷೇತ್ರಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ದೇವರ ದರ್ಶನವನ್ನು ಪಡೆದು ಪುನೀತರಾಗುತ್ತಿದ್ದಾರೆ.
Dakshina Kannada,Karnataka
November 28, 2024 12:38 PM IST