Dakshina Kannada: ಸುಳ್ಯದಲ್ಲಿ 14 ವರ್ಷಗಳ ಬಳಿಕ ಹೂ ಬಿಟ್ಟು ಅಚ್ಚರಿ ಮೂಡಿಸಿದ ಅದೃಷ್ಟದ ಬಿದಿರು ಗಿಡ! | Lucky bamboo plants in Dakshina Kannada surprise with flowers after 14 years

Dakshina Kannada: ಸುಳ್ಯದಲ್ಲಿ 14 ವರ್ಷಗಳ ಬಳಿಕ ಹೂ ಬಿಟ್ಟು ಅಚ್ಚರಿ ಮೂಡಿಸಿದ ಅದೃಷ್ಟದ ಬಿದಿರು ಗಿಡ! | Lucky bamboo plants in Dakshina Kannada surprise with flowers after 14 years

Last Updated:

ಮನೆಯ ಸೌಂದರ್ಯ ಹೆಚ್ಚಿಸುವ ಹಾಗೂ ವಾಸ್ತುಗಿಡ ಎಂದು ಕರೆಸಿಕೊಳ್ಳುವ ಲಕ್ಕಿ ಬಾಂಬೂ ಗಿಡಗಳನ್ನು ಬಹುತೇಕರ ಮನೆಯಲ್ಲಿ ಕಾಣುತ್ತೇವೆ. ಆದ್ರೆ ಆ ಗಿಡಗಳ ಹೂವನ್ನು ನೋಡಿದವರು ಮಾತ್ರ ಬಹಳ ಕಡಿಮೆ ಜನ. ಯಾಕಂದ್ರೆ ಅದೃಷ್ಟದ ಬಿದಿರು ಗಿಡಗಳು ಹೂವು ಬಿಡುವುದೇ ಬಹಳ ಅಪರೂಪ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ವಾಸ್ತುವನ್ನು ನಂಬುವ ಹಾಗೂ ಅನುಸರಿಸುವ ಮತ್ತು ಗಿಡಗಳಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಬಯಸುವವರ ಮನೆಯಲ್ಲಿ ನಾವು ಸಾಮಾನ್ಯವಾಗಿ ಕಾಣುವ ಗಿಡವೆಂದರೆ ಅದು ಲಕ್ಕಿ ಬಾಂಬೂ ಗಿಡಗಳು (Lucky Bamboo Plants). ಈ ಗಿಡಗಳನ್ನು ಮನೆಯ ಒಳಗೆ, ಹೊರಗೆ ಎಲ್ಲಿ ಬೇಕಾದರೂ ಬೆಳೆಸಬಹುದು. ಈ ಗಿಡಗಳನ್ನು ಮನೆಯೊಳಗೆ ಇಟ್ಟುಕೊಳ್ಳಲು ಹೆಚ್ಚಿನ ಜನರು ಬಯಸುತ್ತಾರೆ. ಜೊತೆಗೆ ಮನೆಯೊಳಗೆ ಇಟ್ಟರೆ ಈ ಗಿಡದ ಬೆಳವಣಿಗೆಯೂ ತುಂಬಾ ನಿಧಾನವಾಗಿರುತ್ತದೆ (Dakshina Kannada News).

ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಈ ಗಿಡಗಳು ಹೂವು ಬಿಟ್ಟಿರುವುದನ್ನು ನೋಡಿದವರು ಮಾತ್ರ ಬಹಳ ಕಡಿಮೆ ಜನ. ಮನೆಯೊಳಗೆ ಈ ಗಿಡವನ್ನು ಇಟ್ಟುಕೊಳ್ಳುವವರಂತೂ ಈ ಗಿಡದಲ್ಲಿ ಹೂವು ಬಿಡುವುದನ್ನು ನೋಡಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಈ ಗಿಡಗಳು ಹೂವು ಬಿಡುವುದೇ ಬಹಳ ಅಪರೂಪ. ಭೂಮಿಯಲ್ಲಿ ಗಿಡವನ್ನು ನೆಟ್ಟು ಹತ್ತಾರು ವರ್ಷಗಳ ಬಳಿಕ ಈ ಗಿಡಗಳು ಹೂವು ಬಿಡುತ್ತವೆ.

14 ವರ್ಷಗಳ ಬಳಿಕ ಹೂವು ಬಿಟ್ಟ ಗಿಡ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಚಿಂಗಾಣಿಗುಡ್ಡೆ ನಿವಾಸಿ ಜಿನ್ನಪ್ಪ ಆಳ್ವ ಅವರ ಮನೆಯಲ್ಲಿ 14 ವರ್ಷಗಳ ಬಳಿಕ ಅದೃಷ್ಟದ ಬಿದಿರು ಗಿಡಗಳು ಹೂವನ್ನು ಬಿಟ್ಟು ಅಚ್ಚರಿ ಮೂಡಿಸಿದೆ. ಹೌದು ಜಿನ್ನಪ್ಪ ಅವರು ಈ ಗಿಡವನ್ನು ಮನೆಗೆ ತಂದು 14 ವರ್ಷಗಳಾಗಿವೆ. ಈಗ ಈ ಗಿಡದಲ್ಲಿ ಹೂವುಗಳು ಬಿಟ್ಟಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಿಂದ ತಂದಿದ್ದ ಗಿಡಗಳು

ಜಿನ್ನಪ್ಪ ಆಳ್ವ ಅವರು 14 ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಿಂದ ಈ ಗಿಡಗಳನ್ನು ತಂದಿದ್ದರು. ಇದು ಅದೃಷ್ಟದ ಗಿಡ ಎನ್ನುವ ಕಾರಣದಿಂದ ಈ ಗಿಡವನ್ನು ಮನೆಯೊಳಗಿನ ದೇವರ ಕೋಣೆಯಲ್ಲಿ ಇಟ್ಟಿದ್ದರು. ದಿನಕಳೆದಂತೆ ಗಿಡವು ದೊಡ್ಡದಾಗಿ ಬೆಳೆದ ಹಿನ್ನೆಲೆ ಅದನ್ನು ಮನೆಯ ಹೊರಗೆ ತುಳಸಿ ಗಿಡದ ಪಕ್ಕದಲ್ಲಿ ನೆಟ್ಟು ಪ್ರತಿದಿನ ನೀರು ಹಾಕುತ್ತಿದ್ದುದಾಗಿ ಜಿನ್ನಪ್ಪ ಆಳ್ವ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Sulugayi Game: ಕಾರ್ತಿಕ ಮಾಸದಲ್ಲಿ ಆಡುವ ವಿಶೇಷ ಜಾನಪದ ಆಟ; ಉತ್ತರ ಕನ್ನಡ ಜಿಲ್ಲೆಯ ವಿಶೇಷತೆಗಳಲ್ಲೊಂದು!

ಆಳೆತ್ತರಕ್ಕೆ ಬೆಳೆದಿರುವ ಲಕ್ಕಿ ಬಾಂಬೂ ಗಿಡಗಳು

ಅದೃಷ್ಟದ ಬಾಂಬೂ ಗಿಡ ಈಗ ಆಳೆತ್ತರಕ್ಕೆ ಬೆಳೆದಿದೆ. ಅಲ್ಲದೇ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಗಿಡಗಳಲ್ಲಿ ಹೂವುಗಳು ಅರಳಿವೆ. ಸಾಮಾನ್ಯವಾಗಿ ಈ ಗಿಡಗಳನ್ನು ಜನರು ಬಹಳ ದೊಡ್ಡದಾಗುವವರೆಗೆ ಬೆಳೆಸುವುದಿಲ್ಲ. ಆದ್ರೆ ಜಿನ್ನಪ್ಪ ಅವರು ಈ ಗಿಡವನ್ನು ಅತ್ಯಂತ ಕಾಳಜಿಯಿಂದ ಬೆಳೆಸುತ್ತಿದ್ದಾರೆ. ಹೀಗಾಗಿಯೇ ಅವರು ಈ ಗಿಡದ ಹೂವುಗಳನ್ನು ನೋಡುವುದು ಸಾಧ್ಯವಾಗಿದೆ.

ಒಟ್ಟಿನಲ್ಲಿ, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಲಕ್ಕಿ ಬಾಂಬೂ ಗಿಡಗಳನ್ನು ಮನೆಯೊಳಗಿಟ್ಟು ಬೆಳೆಸುವ ಬದಲು ಮನೆಯ ಹೊರಗೆ ಮಣ್ಣಿನಲ್ಲಿ ನೆಟ್ಟು ಕಾಳಜಿಯಿಂದ ಬೆಳೆಸಿದರೆ ನೀವು ಹೂವು ಅರಳುವುದನ್ನು ನೋಡಿ ಆನಂದಿಸಬಹುದು.