Dakshina Kannada: ಸೇನೆಗೆ ಅಗತ್ಯವಾದ ಡ್ರೋನ್ ತಯಾರಿಸಿದ ಪುತ್ತೂರಿನ ಸಾಧಕ! ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ | A Puttur-based entrepreneur has developed a drone essential for the army

Dakshina Kannada: ಸೇನೆಗೆ ಅಗತ್ಯವಾದ ಡ್ರೋನ್ ತಯಾರಿಸಿದ ಪುತ್ತೂರಿನ ಸಾಧಕ! ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ | A Puttur-based entrepreneur has developed a drone essential for the army

Last Updated:

ಪ್ರಸ್ತುತ ಡ್ರೋನ್ ಮೂಲಕ ಶಸ್ತ್ರ ಸಾಗಾಟ ನಡೆಸಲಾಗುತ್ತದೆ. ರುದ್ರಮ್ ಅಭಿವೃದ್ಧಿಪಡಿಸಿರುವ ಡ್ರೋನ್ ಅತ್ಯಧಿಕ ಸಾಮರ್ಥ್ಯದ 9 ಎಂಎಂ `ಅಸ್ಮಿ’ ಮೆಷಿನ್ ಗನ್ ಅಳವಡಿಸಬಹುದಾಗಿದ್ದು, ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆಯನ್ನು ಹೊಂದಿದೆ.

ವಿಡಿಯೋ ಇಲ್ಲಿ ನೋಡಿವಿಡಿಯೋ ಇಲ್ಲಿ ನೋಡಿ
ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಐಐಟಿ-ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್‌ನ(IIT- Madras Pravartak Technologies Foundation) ಸ್ಟಾರ್ಟ್-ಅಪ್ ಉದ್ಯಮದಲ್ಲಿ(Start-up Business) ತೊಡಗಿಸಿಕೊಂಡಿರುವ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ (Rudram Dainomics Private Limited)(ರುದ್ರಮ್), ರಕ್ಷಣಾ ಸಂಸ್ಥೆಗಳಿಗೆ ಅತ್ಯಾಧುನಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ, ಫ್ಯೂಚರಿಸ್ಟಿಕ್ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಘಟಕಗಳ ತಯಾರಿಕೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ 9 ಎಂಎಂ ಎಎಸ್‌ಎಂಐ(ಅಸ್ಮಿ) ಗನ್ ಅಳವಡಿಸಬಹುದಾದ ಏಕವ್ಯಕ್ತಿ ಸಾಗಾಟ ಮಾಡಬಲ್ಲಂತಹ (ಒನ್ ಮ್ಯಾನ್ ಪೋರ್ಟೆಬಲ್) ಶಸ್ತ್ರಸಜ್ಜಿತ ಡ್ರೋನ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ವಿಶೇಷವೆಂದರೆ ಈ ವಿಶಿಷ್ಟ, ಅತ್ಯಾಧುನಿಕ ಡ್ರೋನ್ ತಯಾರಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ತಿಂಗಳಾಡಿಯ ಕೊನಾರ್ಕ್ ರೈ.

ರಾಷ್ಟ್ರೀಯ ಭದ್ರತೆಗೆ ಬಲ

ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಶಸ್ತ್ರಸಜ್ಜಿತ ಡ್ರೋನ್ ಭಯೋತ್ಪಾದನೆ ನಿಗ್ರಹ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಈ ತಂತ್ರಜ್ಞಾನವನ್ನು `ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಡ್ರೋನ್ ಮೂಲಕ ಶಸ್ತ್ರ ಸಾಗಾಟ ನಡೆಸಲಾಗುತ್ತದೆ. ರುದ್ರಮ್ ಅಭಿವೃದ್ಧಿಪಡಿಸಿರುವ ಡ್ರೋನ್ ಅತ್ಯಧಿಕ ಸಾಮರ್ಥ್ಯದ 9 ಎಂಎಂ `ಅಸ್ಮಿ’ ಮೆಷಿನ್ ಗನ್ ಅಳವಡಿಸಬಹುದಾಗಿದ್ದು, ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆಯನ್ನು ಹೊಂದಿದೆ.

ಇದನ್ನೂ ಓದಿ: Daali Dhananjaya Marriage: ಡಾಲಿ ಮದುವೆ ಸಂಭ್ರಮ ಜೋರು- ಸಂಪ್ರದಾಯದಂತೆ ಮನೆದೇವರ ಕೊಂಡ ತುಳಿದ ನಟ!

ಅಧಿಕ ಸ್ಥಿರತೆಯ ಡ್ರೋನ್

ರುದ್ರಮ್ ಸುಧಾರಿತ ಡ್ರೋನ್ ಪ್ಲಾಟ್‌ಫಾರ್ಮ್ ಮತ್ತು ವಾಯುಗಾಮಿ ಫೈರಿಂಗ್ ಸಮಯದಲ್ಲಿ ಗರಿಷ್ಠ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಹಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 2024 ರ ಜ.26 ಮತ್ತು 27 ರಂದು ನಡೆದ ಪರೀಕ್ಷಾರ್ಥ ಪ್ರದರ್ಶನದಲ್ಲಿ ಡ್ರೋನ್ ಪ್ಲಾಟ್‌ ಫಾರ್ಮ್ ನಲ್ಲಿ ಅಸ್ಮಿ ಮೆಷಿನ್ ಗನ್‌ನ ತಡೆರಹಿತ ಸ್ಥಿರತೆಯೊಂದಿಗೆ ಗುಂಡು ಹಾರಾಟ ಪ್ರದರ್ಶಿಸಿತು. ಡ್ರೋನ್ ಹಾರಾಟದಲ್ಲಿರುವಾಗ ನಿಖರವಾದ ಗುರಿ ನಿಶ್ಚಿತತೆಯನ್ನು ಸಾಧಿಸಿತು. ಡ್ರೋನ್ ಗಾಳಿಯಲ್ಲಿ ನೇರವಾದ ಗುರಿಯನ್ನು ತಲುಪಿ ಯಶಸ್ವಿ ಪ್ರದರ್ಶನ ನೀಡಿತು. ಜತೆಗೆ ನೆಲದ ಮೇಲೆ ಮತ್ತು ಗಾಳಿಯ ಮಧ್ಯದಲ್ಲಿ ಸ್ಥಿರವಾದ ಹಾರಾಟದ ಉದ್ದಕ್ಕೂ ಹೆಚ್ಚಿನ ಮಟ್ಟದ ಸ್ಥಿರತೆ ಮತ್ತು ನಿಖರತೆಯನ್ನು ನಿರ್ವಹಿಸಿತು. 25 ರಿಂದ 60 ನಿಮಿಷಗಳ ಕಾಲ 15ರಿಂದ 30 ಕಿ.ಮೀ. ದೂರದವರೆಗಿನ ಹಾರಾಟ ನಡೆಸುವ ಮೂಲಕ ಈ ವಿಶಿಷ್ಟ ಸಾಮರ್ಥ್ಯದ ಡ್ರೋನ್ ತನ್ನ ಕಾರ್ಯಕ್ಷಮತೆಯನ್ನು ದೃಢಪಡಿಸಿದೆ.

ಈ ಡ್ರೋನ್‌ನ ವಿಶೇಷತೆ ಏನು?

ರುದ್ರಮ್ ಶಸ್ತ್ರಸಜ್ಜಿತ ಡ್ರೋನ್ ವಿವಿಧ ಯುದ್ಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಎಕೆ-203, ಎಸ್‌ಐಜಿ 716 ಮುಂತಾದ ಇತರ ದೀರ್ಘ ಮತ್ತು ಅತ್ಯಧಿಕ ಶ್ರೇಣಿಯ ಶಸ್ತಾಸ್ತ್ರಗಳನ್ನು ಅಳವಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ರುದ್ರಮ್‌ನ ಒನ್ ಮ್ಯಾನ್ ಪೋರ್ಟಬಲ್ ಶಸ್ತ್ರಸಜ್ಜಿತ ಡ್ರೋನ್ ಶಸ್ತ್ರಸಜ್ಜಿತ ಡ್ರೋನ್‌ಗಳ ವಿಭಾಗದಲ್ಲಿ ನಾವೀನ್ಯತೆಯು ಮುಂಚೂಣಿಯಲ್ಲಿದೆ. ವಿಶಿಷ್ಟ ಅಭಿವೃದ್ಧಿಯೊಂದಿಗೆ ದೇಶೀಯ ರಕ್ಷಣಾ ತಂತ್ರಜ್ಞಾನದ ಗಡಿಗಳನ್ನು ದಾಟಿ `ಆತ್ಮ ರಕ್ಷಿತ್’ ಆಗಲು ಭಾರತದ ಬದ್ಧತೆಯನ್ನು ಬಲಪಡಿಸಲು ಇದು ಬಹಳಷ್ಟು ಸಹಕಾರಿಯಾಗಲಿದೆ. ಸುಮಾರು 10 ಕೆ.ಜಿ. ಭಾರವಿರುವ ಈ ಡ್ರೋನ್‌ನ್ನು ಸೈನಿಕರು ಹಿಡಿದುಕೊಂಡು ಕಡಿದಾದ ಬೆಟ್ಟ ಗುಡ್ಡ, ಪರ್ವತ ಶ್ರೇಣಿಗಳಲ್ಲಿ ಸಾಗಲು ಸುಲಭ ಸಾಧ್ಯವಾಗಲಿದೆ. ರುದ್ರಮ್ ಕಂಪೆನಿ ಈ ವಿಶಿಷ್ಟ ಡ್ರೋನ್ ತಯಾರಿಸಿ ಸೇನೆಗೆ ಪೂರೈಸಲಿದೆ.

ಕೊನಾರ್ಕ್‌ ರೈ ವಿದ್ಯಾಭ್ಯಾಸ ಏನು?

ಸೇನೆಗೆ ಅತೀ ಅಗತ್ಯವಾಗಿ ಬೇಕಾಗಿರುವ ಈ ಡ್ರೋನ್‌ನ್ನು ಮೂಲತಃ ಪುತ್ತೂರಿನ ತಿಂಗಳಾಡಿಯ ನಿವಾಸಿ ಮತ್ತು ಸದ್ಯ ಗುಜರಾತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊನಾರ್ಕ್ ರೈ ತಯಾರಿಸಿದ್ದಾರೆ ಅನ್ನೋದು ರಾಜ್ಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಬೆಂಗಳೂರಿನ ಬಿಷಪ್ ಕಾಟನ್ಸ್ ಬಾಲಕರ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿ ನಂತರ ವಿಟ್ಲದ ಅಳಿಕೆಯ ಶ್ರೀ ಸತ್ಯಸಾಯಿ ಲೋಕ ಸೇವಾ ಶಾಲೆ, ಬೆಂಗಳೂರಿನ ಸೈಂಟ್ ವಿಕ್ಟರ್ ಶಾಲೆಯಲ್ಲಿ ಶಿಕ್ಷಣ ಪಡೆದು ಗುಜರಾತ್ ರಾಷ್ಟ್ರೀಯ ಕಾನೂನು ವಿ.ವಿ.ಯಿಂದ ಪದವಿ ಪಡೆದರು.

ಬಳಿಕ 5 ವರ್ಷಗಳ ಕಾಲ ವಿಶ್ವ ಸಂಸ್ಥೆಯಲ್ಲಿ ರಾಜಕೀಯ ಮತ್ತು ನೀತಿ ವಿಶ್ಲೇಷಕರಾಗಿ ಕೆಲಸ ಮಾಡಿದರು. ತುಳುನಾಡಿನ ಪ್ರತಿಷ್ಠಿತ ಕಂಪನಿ `ಕ್ಯಾಂಪ್ಕೋ’ದ ಆಡಳಿತ ನಿರ್ದೇಶಕರಾಗಿದ್ದ ಕೆ. ಪ್ರಮೋದ್ ಕುಮಾರ್ ರೈ ಮತ್ತು ಶೋಭಾ ರೈ ದಂಪತಿಯ ಪುತ್ರ ಕೊನಾರ್ಕ್ ರೈ. ಅವರು ಸ್ಥಾಪಿಸಿರುವ ಕಂಪೆನಿಯೇ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್.