Dakshina Kannada: ಸೋಮೇಶ್ವರ ಕಡಲ ಕಿನಾರೆಯಲ್ಲಿ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Watching the sunset at Someshwara beach is a feast for the eyes!

Dakshina Kannada: ಸೋಮೇಶ್ವರ ಕಡಲ ಕಿನಾರೆಯಲ್ಲಿ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Watching the sunset at Someshwara beach is a feast for the eyes!

Last Updated:

ಸದ್ಯಕ್ಕೆ ಇಲ್ಲಿ ಎಲ್ಲವೂ ಪ್ರಕ್ರಿಯೆಯಿಂದಲೇ ನಿರ್ಮಾಣಗೊಂಡ ವ್ಯವಸ್ಥೆಗಳು ಮಾತ್ರ ಇರೋದು. ಕಡಲ ಕಿನಾರೆಗೆ ಬಂದವರಿಗೆ ಇಲ್ಲಿ ಆಸನದ ವ್ಯವಸ್ಥೆಯಿಲ್ಲ. ಕಡಲ ತಡಿಯ ಮರಳಿನಲ್ಲೇ ಕುಳಿತು ಸೂರ್ಯಾಸ್ತ ನೋಡಬಹುದಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಪ್ರಕೃತಿಯ ಸೊಬಗನ್ನು(Nature Beauty) ಸವಿಯಲೆಂದೇ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸುಂದರ ತಾಣಗಳತ್ತ ಪ್ರವಾಸ(Tour) ತೆರಳುತ್ತಾರೆ. ಅದರಲ್ಲೂ ಪ್ರಕೃತಿಯ ಸಹಜ ಪ್ರಕ್ರಿಯೆಯಾದ ಸೂರ್ಯೋದಯ(Sunrise) ಮತ್ತು ಸೂರ್ಯಾಸ್ತವನ್ನು(Sunset) ನೋಡೋದು ಕಣ್ಣಿಗೊಂದು ರೀತಿಯ ಮುದ ನೀಡುತ್ತದೆ. ಕರಾವಳಿ ಭಾಗದ ಜನರಿಗೆ ಕಡಲು ಮತ್ತು ಅಲ್ಲಿ ಕಾಣುವ ಸೂರ್ಯಾಸ್ತವನ್ನು ನೋಡೋದು ಸಾಮಾನ್ಯವಾಗಿದ್ದರೂ, ದೂರದ ಬಯಲು ಸೀಮೆ ಅಥವಾ ಘಟ್ಟ ಪ್ರದೇಶಗಳಿಂದ ಬರುವ ಜನ ಸೂರ್ಯಾಸ್ತವನ್ನು ಹತ್ತಿರದಿಂದ ನೋಡಿದವರಲ್ಲ‌‌.

ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಬಣ್ಣದಲ್ಲಾಗುವ ಬದಲಾವಣೆ, ಸೂರ್ಯನ ಬಣ್ಣದಂತೆ ಬಣ್ಣ ಬದಲಾಯಿಸುವ ಕಡಲು. ಹೌದು, ಇಂತಹ ಒಂದು ಸುಂದರ ದೃಶ್ಯ ಕಾವ್ಯ ನೋಡಲು ಕಡಲ ತೀರಕ್ಕೊಮ್ಮೆ ಭೇಟಿ ನೀಡಬೇಕು. ಅದರಲ್ಲೂ ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ಕಿನಾರೆ ಪ್ರವಾಸಿಗರ ಅತ್ಯಂತ ನೆಚ್ಚಿನ ಬೀಚ್‌ಗಳಲ್ಲಿ ಒಂದು. ಇಲ್ಲಿ ಪ್ರವಾಸಿಗರಿಗಾಗಿ ವಿಶೇಷ ವ್ಯವಸ್ಥೆಗಳಿಲ್ಲ.

ಸದ್ಯಕ್ಕೆ ಇಲ್ಲಿ ಎಲ್ಲವೂ ಪ್ರಕ್ರಿಯಿಂದಲೇ ನಿರ್ಮಾಣಗೊಂಡ ವ್ಯವಸ್ಥೆಗಳು ಮಾತ್ರ ಇರೋದು. ಕಡಲ ಕಿನಾರೆಗೆ ಬಂದವರಿಗೆ ಇಲ್ಲಿ ಆಸನದ ವ್ಯವಸ್ಥೆಯಿಲ್ಲ. ಕಡಲ ತಡಿಯ ಮರಳಿನಲ್ಲೇ ಕುಳಿತು ಸೂರ್ಯಾಸ್ತ ನೋಡಬಹುದಾಗಿದೆ.

ಸೂರ್ಯಾಸ್ತದ ಕೆಲವು ನಿಮಿಷಗಳ ಮೊದಲು ಪ್ರಕೃತಿಯ ಸುಂದರ ಚಿತ್ತಾರವನ್ನು ನೋಡಬಹುದಾಗಿದೆ. ಸೂರ್ಯನ ಬಣ್ಣಕ್ಕೆ ತಕ್ಕಂತೆ ಬದಲಾಗುವ ಆಗಸದ ಬಣ್ಣ, ಶಾಂತವಾಗಿ ಹರಿಯಲು ಪ್ರಾರಂಭಿಸುವ ಕಡಲು. ಸೂರ್ಯಾಸ್ತ ಸಮಯದಲ್ಲಿ ಕಡಿಮೆಯಾಗುವ ಕಡಲಿನ ಅಬ್ಬರ, ಅಲೆಗಳೆಲ್ಲಾ ಅತ್ಯಂತ ಶಾಂತ ರೀತಿಯಿಂದ ಸೂರ್ಯನನ್ನು ಧರೆಯೊಳಗೆ ಕಳುಹಿಸಿ ಕೊಡುತ್ತಿದೆಯೋ ಎನ್ನುವ ಅನುಭವ. ಸೂರ್ಯನ ಕೆಂಪಗಿನ ಬಣ್ಣಕ್ಕೆ ತಕ್ಕಂತೆ ಬದಲಾಗುವ ಕಡಲ ನೀರು ಹೀಗೆ ಎಲ್ಲವೂ ಇಲ್ಲಿ ವರ್ಣನೆಗೆ ಪೂರಕ ದೃಶ್ಯಗಳೇ ತುಂಬಿರುತ್ತದೆ.

ಕಿನಾರೆಗೆ ಬಂದ ಕೆಲವರು ಸಮುದ್ರದ ನೀರಲ್ಲಿ ಆಟವಾಡಿದರೆ, ಇನ್ನು ಕೆಲವರು ಮರಳಲ್ಲಿ ಕುಳಿತು ಸೂರ್ಯನನ್ನು ನೋಡೋದನ್ನೇ ಇಲ್ಲಿ ಇಷ್ಟಪಡುತ್ತಾರೆ.