Last Updated:
ಕಾಸರಗೋಡು ಜಿಲ್ಲೆ ಎಣ್ಮಕಜೆ ಪಂಚಾಯ್ತಿ ವ್ಯಾಪ್ತಿಯ ಸ್ವರ್ಗ ಎಲ್ಲರ ಗಮನ ಸೆಳೆಯುತ್ತದೆ. ಪುತ್ತೂರಿನ ಪಾಣಾಜೆ ಪಕ್ಕದ ಊರೇ ಈ ಸ್ವರ್ಗ.
ಪುತ್ತೂರು: ಹಿಂದೂಗಳ ಪ್ರಕಾರ ಮನುಷ್ಯ (Hindu Rituals ) ತನ್ನ ಒಳ್ಳೆತನ, ಕೆಟ್ಟತನದ ಆಧಾರದಲ್ಲಿ ಸ್ವರ್ಗ ಮತ್ತು ನರಕ (Heaven and Hell) ಸೇರುತ್ತಾನೆ ಅನ್ನೋ ಪ್ರತೀತಿ. ಆದರೆ ಪುತ್ತೂರಿನಲ್ಲಿ (Puttur) ಜನರು ಸಾಯದೆ ಇದ್ದರೂ ಸ್ವರ್ಗಕ್ಕೆ ಹೋಗಿ ಬರಬಹುದು. ಪುತ್ತೂರಿನ ಬಸ್ ಸ್ಟ್ಯಾಂಡ್‌ನಲ್ಲಿ (Bus Stop) ನಿಂತವರನ್ನು ಸ್ವರ್ಗಕ್ಕೆ ಬನ್ನಿ, ಸ್ವರ್ಗಕ್ಕೆ ಬನ್ನಿ ಅಂತಾ ಕರೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಿಂದ ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲ ಎನ್ನುವ ಪ್ರದೇಶಕ್ಕೆ ತೆರಳೋ ದಾರಿ ಮಧ್ಯೆ ಸ್ವರ್ಗ ಅನ್ನೋ ಪುಟ್ಟ ಊರು ಸಿಗುತ್ತದೆ. ಕಾಸರಗೋಡು ಜಿಲ್ಲೆ ಎಣ್ಮಕಜೆ ಪಂಚಾಯ್ತಿ ವ್ಯಾಪ್ತಿಯ ಸ್ವರ್ಗ ಎಲ್ಲರ ಗಮನ ಸೆಳೆಯುತ್ತದೆ. ಪುತ್ತೂರಿನ ಪಾಣಾಜೆ ಪಕ್ಕದ ಊರೇ ಈ ಸ್ವರ್ಗ.
ಇಲ್ಲಿ ಇರೋದು ನಾಲ್ಕೈದು ಹಳೆ ಕಟ್ಟಡದಲ್ಲಿ ದಿನಸಿ ಅಂಗಡಿ, ಪೋಸ್ಟ್ ಆಫೀಸ್, ಕೃಷಿ ಸಲಕರಣೆಗಳ ಅಂಗಡಿ, ನಾಲ್ಕೈದು ಆಟೋಗಳು, ಎರಡ್ಮೂರು ಲಾಟರಿ ಅಂಗಡಿಗಳನ್ನು ಬಿಟ್ಟರೆ ಬೇರೇನು ಇಲ್ಲ. ಈ ಊರಿನಲ್ಲಿ ಶಾಂತಿ ಸಮೃದ್ಧಿ ಮನೆ ಮಾಡಿದ್ದು. ಸ್ವರ್ಗ ಎನ್ನುವ ಹೆಸರಿಗೆ ತಕ್ಕಂತೆ ಇದೆ.
ಈ ಬಗ್ಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಸ್ಥಳೀಯ ಉದ್ಯಮಿ ಅಜಿತ್ ಸ್ವರ್ಗ, ಇಲ್ಲಿನ ಪ್ರಕೃತಿ ನೋಡಿದರೆ ನಿಜವಾಗಿಯೂ ಸ್ವರ್ಗದ ಅನುಭವ ಆಗುತ್ತೆ. ಕುಗ್ರಾಮ ಆಗಿರೋದರಿಂದ ನಗರದ ವ್ಯವಸ್ಥೆ ಇಲ್ಲಿ, ಹಳ್ಳಿಯ ಚಿತ್ರವನ್ನು ನೋಡ್ಬೇಕು ಅಂದರೆ ಒಮ್ಮೆ ಭೇಟಿ ಕೊಡಿ. ಹಳ್ಳಿಯ ಅನುಭವ ನಿಮಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಸ್ವರ್ಗಕ್ಕೆ ಹೋಗಬೇಕು ಅನ್ನೋ ಬಯಕೆ ಎಲ್ಲರದ್ದೂ ಆಗಿರುತ್ತದೆ. ನೀವು ಒಮ್ಮೆ ಸ್ವರ್ಗಕ್ಕೆ ಹೋಗಿ ಬನ್ನಿ. ಅಲ್ಲಿನ ಪರಿಸರವನ್ನು ಕಂಡು ಪುಳಕಿತರಾಗಿ. (ವರದಿ: ಅಜಿತ್ ಕುಮಾರ್, ನ್ಯೂಸ್ 18, ಪುತ್ತೂರು)
Puttur,Dakshina Kannada,Karnataka