Dakshina Kannada: ಹೂವಿನ ರಂಗೋಲಿ ಬಿಡಿಸಿ ದಾಖಲೆ ಬರೆದ ಡಿಗ್ರಿ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ! | Dakshina Kannada: Degree student Shraddha Shetty sets a record by drawing a flower rangoli!

Dakshina Kannada: ಹೂವಿನ ರಂಗೋಲಿ ಬಿಡಿಸಿ ದಾಖಲೆ ಬರೆದ ಡಿಗ್ರಿ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ! | Dakshina Kannada: Degree student Shraddha Shetty sets a record by drawing a flower rangoli!

Last Updated:

ಸೌತಡ್ಕ ಶ್ರೀಬಯಲು ಆಲಯ ಗಣಪನ ಕ್ಷೇತ್ರದಿಂದ ತಂದ ಕೆಂಗುಲಾಬಿ, ಮಲ್ಲಿಗೆ, ಹಳದಿ, ಕೇಸರಿ ಬಣ್ಣದ ಚೆಂಡು ಹೂ, ತುಳಸಿ ದಳಗಳಿಂದ ಈ ರಂಗೋಲಿ ರಚಿಸಲಾಗಿದೆ. ಶ್ರದ್ಧಾ ಶೆಟ್ಟಿ ಜನವರಿಯಿಂದ ಈ ದಾಖಲೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಳು. ಆದರೆ ಮೆಸರ್‌ಮೆಂಟ್ ಮಾಡುವಲ್ಲಿ ಆಗಿರುವ ಎಡವಟ್ಟಿನಿಂದ ದಾಖಲೆ ಮಾಡಲು ಸಾಧ್ಯವಾಗಿರಲಿಲ್ಲ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಹೆಣ್ಣುಮಕ್ಕಳಿಗೆ ರಂಗೋಲಿ (Rangoli) ಬಿಡಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ ಬೆಳ್ತಂಗಡಿಯ ಲಾಯಿಲಾ ಏಣಿಂಜೆಯ ಹುಡುಗಿಯೊಬ್ಬಳು ಬೃಹತ್ ಗಾತ್ರದ ಹೂವಿನ ರಂಗೋಲಿ(Flower Rangoli) ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ(India Book of Record) ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಹೌದು.. ಏಣಿಂಜೆ ನಿವಾಸಿ, ಎಸ್‌ಡಿಎಂ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ ಈ ಸಾಧನೆ ಮಾಡಿದವಳು. ಬಾಲ್ಯದಲ್ಲೇ ರಂಗೋಲಿ, ಕ್ರಾಫ್ಟ್, ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಈಕೆಗೆ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ. ಅದಕ್ಕಾಗಿ ಆಯ್ಕೆ ಮಾಡಿದ್ದು ಹೂವಿನ ರಂಗೋಲಿ. ಮನೆಯಂಗಳದಲ್ಲಿಯೇ 8 ಫೀಟ್ ಅಗಲದ ರಂಗೋಲಿಯನ್ನು 1 ಗಂಟೆ 39 ನಿಮಿಷಗಳಲ್ಲಿ ಬಿಡಿಸಿ ಈಕೆ ದಾಖಲೆ ಮಾಡಿದ್ದಾಳೆ.

ಇದನ್ನೂ ಓದಿ: Dakshina Kannada: ಕನಸಿನಲ್ಲಿ ಬಂದ ಶ್ರೀಮನ್ನಾರಾಯಣನ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ಮುಹೂರ್ತ ಫಿಕ್ಸ್!

ಸೌತಡ್ಕ ಶ್ರೀಬಯಲು ಆಲಯ ಗಣಪನ ಕ್ಷೇತ್ರದಿಂದ ತಂದ ಕೆಂಗುಲಾಬಿ, ಮಲ್ಲಿಗೆ, ಹಳದಿ, ಕೇಸರಿ ಬಣ್ಣದ ಚೆಂಡು ಹೂ, ತುಳಸಿ ದಳಗಳಿಂದ ಈ ರಂಗೋಲಿ ರಚಿಸಲಾಗಿದೆ. ಶ್ರದ್ಧಾ ಶೆಟ್ಟಿ ಜನವರಿಯಿಂದ ಈ ದಾಖಲೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಳು. ಆದರೆ ಮೆಸರ್‌ಮೆಂಟ್ ಮಾಡುವಲ್ಲಿ ಆಗಿರುವ ಎಡವಟ್ಟಿನಿಂದ ದಾಖಲೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಯತ್ನ ಬಿಡದೆ ಮತ್ತೊಮ್ಮೆ ಹೂರಂಗೋಲಿ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಬೃಹತ್ ಹೂವಿನ ರಂಗೋಲಿ ಎಂದು ವೈಯುಕ್ತಿಕ ವಿಭಾಗದಲ್ಲಿ ದಾಖಲೆ ಮಾಡಿದ್ದಾಳೆ. ಫೆಬ್ರವರಿ 3ರಂದು ಈ ಸಾಧನೆ ದಾಖಲಾಗಿದ್ದರೂ ಏಪ್ರಿಲ್‌ನಲ್ಲಿ ಸರ್ಟಿಫಿಕೇಟ್ ಅಧಿಕೃತವಾಗಿ ಕೈ ಸೇರಿದೆ.

ಶ್ರದ್ಧಾ ಶೆಟ್ಟಿಯದ್ದು ಏಕಲವ್ಯ ಸಾಧನೆ. ಚಿತ್ರಕಲೆಯನ್ನು ಈಕೆ ಗುರುಮುಖೇನ ಕಲಿತವಳಲ್ಲ‌. ಶಾಲಾ ಗುರುಗಳ ಪ್ರೋತ್ಸಾಹದಿಂದ ಕೇವಲ ನೋಡಿಯೇ, ಯೂಟ್ಯೂಬ್ ಗಮನಿಸಿ ಸುಂದರವಾದ ಚಿತ್ರ ಬಿಡಿಸಿತ್ತಾಳೆ ಈಕೆ. ಪೋಟ್ರೇಟ್ ಆರ್ಟ್‌ನಲ್ಲಿ ಪಳಗಿದ್ದು, ಸಿನಿಮಾ ತಾರೆಯರಾದ ಸಾಯಿಪಲ್ಲವಿ, ವಿಜಯ್, ಸೀರಿಯಲ್‌ನ ರಾಧೆ-ಕೃಷ್ಣನ ಚಿತ್ರವನ್ನು ಸೊಗಸಾಗಿ ರಚಿಸಿದ್ದಾಳೆ. ಜೊತೆಗೆ ವಾಟರ್ ಕಲರ್ ಪೇಯಿಂಟಿಂಗ್, ಕ್ರಾಫ್ಟ್ ಕೂಡಾ ರಚಿಸಿದ್ದಾಳೆ. ಈಕೆ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ.