Dakshina Kannada: 29 ದಿನಗಳ ಕಾಲ ನಡೆದ ಅದ್ದೂರಿ ಪೊಳಲಿ ಜಾತ್ರೋತ್ಸವಕ್ಕೆ ತೆರೆ! | Dakshina Kannada Polali Jatrotsava ended

Dakshina Kannada: 29 ದಿನಗಳ ಕಾಲ ನಡೆದ ಅದ್ದೂರಿ ಪೊಳಲಿ ಜಾತ್ರೋತ್ಸವಕ್ಕೆ ತೆರೆ! | Dakshina Kannada Polali Jatrotsava ended

Last Updated:

ಜಿಲ್ಲೆಯ ಬಹುತೇಕ ದೊಡ್ಡ ದೇವಸ್ಥಾನಗಳಲ್ಲಿ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ರಥೋತ್ಸವ ನಡೆದರೆ, ಪೊಳಲಿಯಲ್ಲಿ ಮಾತ್ರ ಮಹಾರಥೋತ್ಸವ ದೇವಸ್ಥಾನಕ್ಕೆ ಒಂದು ಸುತ್ತ ಎಳೆದು, ಚೆಂಡಿನ ಗದ್ದೆಯಲ್ಲಿ ಸರ್ವಾಂಕೃತ ರಥ ವಿರಾಜಮಾನವಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: 29 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಪೊಳಲಿ ಜಾತ್ರೋತ್ಸವ(Polali Jatrotsava) ಸಂಪನ್ನಗೊಂಡಿದೆ.​​ ಮಹಾರಥೋತ್ಸವದಲ್ಲಿ ದೇವರು ರಥಾರೂಢರಾದ ಬಳಿಕ ಭಕ್ತರು ರಥವನ್ನು ಎಳೆಯುವ ಮೂಲಕ ಅದ್ಧೂರಿಯಾಗಿ ಜಾತ್ರೋತ್ಸವಕ್ಕೆ(Jatrotsava) ತೆರೆ ಬಿದ್ದಿದೆ. ದಕ್ಷಿಣ ಕನ್ನಡ ‌ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ದೇವರ ರಥೋತ್ಸವದ ಬಳಿಕ ಜಾತ್ರೆ ಸಂಪನ್ನವಾಗಿದೆ. ಕೊನೆಯ ದಿನ ಸಾಗರೋಪಾದಿಯಲ್ಲಿ ಪೊಳಲಿಗೆ ಆಗಮಿಸಿದ ಭಕ್ತರು ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

​​ಐದು ದಿನದ ಚೆಂಡಿನ ಸಂದರ್ಭದಲ್ಲಿ ಐದು ರೀತಿಯ ರಥ ಎಳೆಯಲಾಗುತ್ತದೆ. ನಾಲ್ಕನೇ ಚೆಂಡಿನವರೆಗೆ ದೇವಸ್ಥಾನದೊಳಗಡೆಯೇ ಹೂವಿನ ರಥ, ಬೆಳ್ಳಿ ರಥ ಎಳೆದರೆ, ಐದನೇ ದಿನದಂದು ಮಹಾರಥೋತ್ಸವ ನಡೆಯುತ್ತದೆ. ಜಿಲ್ಲೆಯ ಬಹುತೇಕ ದೊಡ್ಡ ದೇವಸ್ಥಾನಗಳಲ್ಲಿ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ರಥೋತ್ಸವ ನಡೆದರೆ, ಪೊಳಲಿಯಲ್ಲಿ ಮಾತ್ರ ಮಹಾರಥೋತ್ಸವ ದೇವಸ್ಥಾನಕ್ಕೆ ಒಂದು ಸುತ್ತ ಎಳೆದು, ಚೆಂಡಿನ ಗದ್ದೆಯಲ್ಲಿ ಸರ್ವಾಂಕೃತ ರಥ ವಿರಾಜಮಾನವಾಗುತ್ತದೆ.

ಇದನ್ನೂ ಓದಿ: Dakshina Kannada: ಬಡ ಕುಟುಂಬಕ್ಕೆ ಆಸರೆಯಾದ ಯುವಕರು- 12 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ

ಪೊಳಲಿ ರಥೋತ್ಸವದ ಪ್ರಮುಖ ಆಕರ್ಷಣೆ ಅಲ್ಲಿ ಸಿಡಿಸುವ ಸುಡು ಮದ್ದು. ರಥ ಚೆಂಡಿನ‌ ಗದ್ದೆಯಲ್ಲಿ ಬಂದು ನಿಲ್ಲುತ್ತಿದ್ದಂತೆಯೇ ಬಾನಂಗಳಕ್ಕೆ ಪಟಾಕಿ ಬೆಳಕು ಚೆಲ್ಲುತ್ತದೆ. ಸುಮಾರು ಎರಡು ತಾಸು ಪಟಾಕಿ ಸಿಡಿಸಲಾಗುತ್ತದೆ. ಬಳಿಕ ಮಹಾರಥವನ್ನು ದೇವಸ್ಥಾನದ ಎದುರು ಭಾಗಕ್ಕೆ ಎಳೆದು ತಂದು ನಿಲ್ಲಿಸಲಾಗುತ್ತದೆ.

ಜಾತ್ರಾ ದಿನಗಳಲ್ಲಿ ಪೊಳಲಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. 29 ದಿನಗಳ ಕಾಲ ಪೊಳಲಿಯ ದೇವಳದಲ್ಲಿ ಪೂಜಾ ವಿಧಿ-ವಿಧಾನಗಳು ಭಕ್ತರಿಗೆ ದೈವಿಕ ಲೋಕವನ್ನೇ ಸೃಷ್ಟಿಸಿತ್ತು.