DC vs KKR: ಕೆಕೆಆರ್ ಇನ್ನಿಂಗ್ಸ್​ ಕೊನೆಯ ಓವರ್‌ನಲ್ಲಿ ಹೈಡ್ರಾಮ! ಐಪಿಎಲ್ ಇತಿಹಾಸದಲ್ಲಿ ಈ ಘಟನೆ ಇದೇ ಮೊದಲು | IPL 2025 Mitchell Starc Hat Trick Dream Shattered Delhi Review Fails

DC vs KKR: ಕೆಕೆಆರ್ ಇನ್ನಿಂಗ್ಸ್​ ಕೊನೆಯ ಓವರ್‌ನಲ್ಲಿ ಹೈಡ್ರಾಮ! ಐಪಿಎಲ್ ಇತಿಹಾಸದಲ್ಲಿ ಈ ಘಟನೆ ಇದೇ ಮೊದಲು | IPL 2025 Mitchell Starc Hat Trick Dream Shattered Delhi Review Fails

ಈ ಪಂದ್ಯದ ವೇಳೆ, ಕೆಕೆಆರ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಐಪಿಎಲ್ ಇತಿಹಾಸದಲ್ಲಿ ಈ ಹಿಂದೆ ಎಂದು ನಡೆಯದ ನಾಟಕೀಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು.  ಹಾಗಾದರೆ ಏನಿದು ಘಟನೆ ಎಂಬುದನ್ನು ಕಂಪ್ಲೀಟ್ ಆಗಿ ತಿಳಿಯೋಣ ಬನ್ನಿ.

ಎರಡು ಎಸೆತ ಎರಡು ವಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಓವರ್ ಬೌಲಿಂಗ್ ಮಾಡಲು ಮಿಚೆಲ್ ಸ್ಟಾರ್ಕ್ ಬಂದರು. ಈ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರು ಹೆಚ್ಚು ರನ್ ಬಿಟ್ಟುಕೊಡದೆ ಒಂದೇ ಓವರ್‌ನ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಪಡದು ಮಿಂಚಿದರು. ಮಾತ್ರವಲ್ಲ, ಒಂದು ರನ್‌ಔಟ್ ಕೂಡ ಬರುತ್ತದೆ. ಆ ಮೂಲಕ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಸಿಗುತ್ತದೆ. ಈ ಓವರ್‌ನ 3 ಮತ್ತು 4ನೇ ಎಸೆತಗಳಲ್ಲಿ ಸ್ಟಾರ್ಕ್ ವಿಕೆಟ್ ಪಡೆದುಕೊಂಡು ಹ್ಯಾಟ್ರಿಕ್ ಕನಸು ಕಾಣುತ್ತಾರೆ.

ಹ್ಯಾಟ್ರಿಕ್ ವಿಕೆಟ್ ಆದ್ರೆ, ಸ್ಟಾರ್ಕ್‌ಗೆ ಅಲ್ಲ!

5ನೇ ಎಸೆತ ಎದುರಿಸಿದ ಹರ್ಷಿತ್ ರಾಣಾ ಈ ಎಸೆತವನ್ನು ಬೀಟ್ ಮಾಡುತ್ತಾರೆ. ಮತ್ತು ಸ್ಟ್ರೈಕ್ ಪಡೆಯಲು ಓಡಿದ ಅಂಡ್ರೆ ರಸೆಲ್ ಅವರು ರನ್ ಔಟ್ ಆಗಿ ವಿಕೆಟ್ ಒಪ್ಪಿಸಿ ಹೊರಹೋಗುತ್ತಾರೆ. ಆದ್ರೆ, ಈ ಹಂತದಲ್ಲಿ ಡು ಪ್ಲೆಸಿಸ್ ಅವರು ವಿಕೆಟ್‌ಗಾಗಿ ಥರ್ಡ್ ಅಂಪೈರ್‌ಗೆ ಮನವಿ ಮಾಡುವಂತೆ ನಾಯಕ ಅಕ್ಸರ್‌ ಪಟೇಲ್ ಅವರಿಗೆ ಸೂಚನೆ ನೀಡುತ್ತಾರೆ. ಅರೆ ವಿಕೆಟ್ ಸಿಕ್ಕಬಳಿಕವೂ ಯಾಕೆ ಥರ್ಡ್ ಅಂಪೈರ್ ಮನವಿ ಎಂದು ಯೋಚಿಸ್ತಾ ಇದ್ದೀರಾ ಇಲ್ಲಿದೆ ನೋಡಿ ಅಸಲಿ ಕಾರಣ.

ಸ್ಟಾರ್ಕ್ ಹ್ಯಾಟ್ರಿಕ್‌ಗಾಗಿ ಥರ್ಡ್ ಅಂಪೈರ್ ಮೊರೆ

ಹೌದು ಮಿಚೆಲ್ ಸ್ಟಾರ್ಕ್ ಅವರು 3 ಹಾಗೂ ನಾಲ್ಕನೇ ಎಸೆತದಲ್ಲಿ ವಿಕೆಟ್ ಪಡೆದು ಆನ್ ಎ ಹ್ಯಾಟ್ರಿಕ್ ಇರುತ್ತಾರೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಳಿ ರಿವ್ಯೂ ಕೂಡ ಇರುತ್ತದೆ. ಹಾಗಾಗಿ ಅಂಪೈರ್ ರನ್ ಔಟ್ ನೀಡಿ ರಸೆಲ್ ಹೊರಗೆ ಹೋದ್ರೂ ಕೂಡ ನಿತಿಶ್ ರಾಣಾ ಅವರ ಬ್ಯಾಟ್‌ಗೆ ಬಾಲ್ ತೀರಾ ಸಮೀಪದಲ್ಲಿ ಪಾಸ್ ಆಗಿರುತ್ತದೆ. ಹಾಗಾಗಿ ಒಂದುವೇಳೆ ಎಡ್ಜ್ ಆಗಿದ್ದರೆ ಸ್ಟಾರ್ಕ್ ಅವರಿಗೆ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಿಗುತ್ತದೆ ಎಂಬ ಉದ್ದೇಶದಿಂದ ರಿವ್ಯೂ ತೆಗೆದುಕೊಳ್ಳುತ್ತಾರೆ. ಹಾಗಾಗಿ ಈ ರೀತಿ ಘಟನೆ ಐಪಿಎಲ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು. ಆದ್ರೆ, ಡೆಲ್ಲಿ ಮನವಿಗೆ ಪುರಸ್ಕಾರ ಸಿಗಲಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI):

ರಹಮಾನುಲ್ಲಾ ಗುರ್ಬಾಜ್ (ವಿಕೀ), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್, ಹರ್ಷಿತ್ ರಾಣಾ, ಅನುಕುಲ್ ರಾಯ್, ವರುಣ್ ಚಕ್ರವರ್ತಿ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್-XI:

ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್ (ವಿಕೀ), ಕರುಣ್ ನಾಯರ್, ಕೆಎಲ್ ರಾಹುಲ್, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್