DC vs KKR: ಡುಪ್ಲೆಸಿಸ್​, ಅಕ್ಷರ್ ಆಟ ವ್ಯರ್ಥ! ಕೆಕೆಆರ್​ಗೆ ರೋಚಕ ಗೆಲುವು ತಂದುಕೊಟ್ಟ ಸ್ಪಿನ್ನರ್ಸ್, ಪ್ಲೇ ಆಫ್ ಆಸೆ ಜೀವಂತ​ | ipl 2025 narine venkatesh iyer shine kkr beat delhi capitals by 14 runs

DC vs KKR: ಡುಪ್ಲೆಸಿಸ್​, ಅಕ್ಷರ್ ಆಟ ವ್ಯರ್ಥ! ಕೆಕೆಆರ್​ಗೆ ರೋಚಕ ಗೆಲುವು ತಂದುಕೊಟ್ಟ ಸ್ಪಿನ್ನರ್ಸ್, ಪ್ಲೇ ಆಫ್ ಆಸೆ ಜೀವಂತ​ | ipl 2025 narine venkatesh iyer shine kkr beat delhi capitals by 14 runs

Last Updated:

206ರನ್​ಗಳ ಗುರಿ ಬೆನ್ನಟ್ಟಿದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 190ರನ್​ಗಳಿಸಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು

ಕೆಕೆಆರ್​ಗೆ 14 ರೋಚಕ ಗೆಲುವುಕೆಕೆಆರ್​ಗೆ 14 ರೋಚಕ ಗೆಲುವು
ಕೆಕೆಆರ್​ಗೆ 14 ರೋಚಕ ಗೆಲುವು

ಪ್ಲೇ ಆಫ್​​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ 14 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಅದ್ಭುತ ಕಮ್​​ಬ್ಯಾಕ್ ಮಾಡಿದೆ. 206ರನ್​ಗಳ ಗುರಿ ಬೆನ್ನಟ್ಟಿದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 190ರನ್​ಗಳಿಸಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಫಾಫ್ ಡುಪ್ಲೆಸಿಸ್​ (62), ನಾಯಕ ಅಕ್ಷರ್ ಪಟೇಲ್ (43) ಹಾಗೂ ವಿಪ್ರಜ್ ನಿಗಮ್ (38) ಗೆಲುವಿಗಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು. ಡೆಲ್ಲಿ ಕ್ಯಾಪಿಟಲ್ಸ್​ಗೆ ಇದು 4ನೇ ಸೋಲಾಗಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ರೆಹ್ಮಾನುಲ್ಲಾ ಗುರ್ಬಜ್ ಹಾಗೂ ನರೈನ್ ಮೊದಲ ವಿಕೆಟ್​ ಜೊತೆಯಾಟದಲ್ಲಿ 3 ಓವರ್​ಗಳಲ್ಲೇ 48 ರನ್ ಸೇರಿಸಿದರು. ಗುರ್ಬಜ್ 12 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದರೆ, ನರೈನ್ 16 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 27 ರನ್​ಗಳಿಸಿದರು. ನಾಯಕ ಅಜಿಂಕ್ಯಾ ರಹಾನೆ 14 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದರು.

ಉತ್ತಮ ಆರಂಭ ಪಡೆದಿದ್ದ ಕೆಕೆಆರ್ ಕೆಲವು ರನ್​ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. 23 ಕೋಟಿ ಪಡೆದಿರುವ ವೆಂಕಟೇಶ್ ಅಯ್ಯರ್ 5 ಎಸೆತಗಳಲ್ಲಿ ಕೇವಲ 7 ರನ್​ಗಳಿಸಿ ಔಟ್ ಆದರು.ಆದರೆ ಯುವ ಆಟಗಾರ ಅಂಗ್​ಕ್ರಿಸ್ ರಘುವಂಶಿ 32 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 44 ರನ್​ಗಳಿಸಿದರು. ಇದು ತಂಡದ ಗರಿಷ್ಠ ಸ್ಕೋರ್ ಆಯಿತು. ರಿಂಕು ಸಿಂಗ್ 25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ 36 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆ್ಯಂಡ್ರೆ ರಸೆಲ್ 8 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ ರನ್​ಗಳಿಸಿದರೆ, ಪೊವೆಲ್ ಅಜೇಯ ರನ್​ಗಳಿಸಿದರು.