Deepavali Special: ವಿಶೇಷ ಚೇತನರ ಕೈಯಲ್ಲರಳಿತು ಬಣ್ಣಬಣ್ಣದ ಹಣತೆ- ದೀಪಾವಳಿಗೆ ಈ ಹಣತೆಯನ್ನೇ ಬೆಳಗಿಸಿ ಪ್ರೋತ್ಸಾಹಿಸಿ | These Special Children paint to diyas for deepavali festival at Mangaluru

Deepavali Special: ವಿಶೇಷ ಚೇತನರ ಕೈಯಲ್ಲರಳಿತು ಬಣ್ಣಬಣ್ಣದ ಹಣತೆ- ದೀಪಾವಳಿಗೆ ಈ ಹಣತೆಯನ್ನೇ ಬೆಳಗಿಸಿ ಪ್ರೋತ್ಸಾಹಿಸಿ | These Special Children paint to diyas for deepavali festival at Mangaluru

Last Updated:

ಅಕ್ಟೋಬರ್ 21ರಿಂದ ನವೆಂಬರ್ 1ರವರೆಗೆ ಇಲ್ಲಿ ಹಣತೆಗಳ ಮಾರಾಟ ನಡೆಯುತ್ತದೆ. ಕಳೆದ ಬಾರಿ ಹಣತೆಯಿಂದ 4ಲಕ್ಷ ರೂ.ನಷ್ಟು ವ್ಯಾಪಾರ ವಹಿವಾಟು ನಡೆದಿತ್ತು.

X

ವಿಡಿಯೋ ಇಲ್ಲಿ ನೋಡಿ

ಹೀಗೆ ಒಂದೊಂದು ಹಣತೆಯನ್ನೇ ಎತ್ತಿಕೊಂಡು ತಾಳ್ಮೆಯಿಂದ ಬಣ್ಣಹಚ್ಚುತ್ತಿರುವ ಇವರನ್ನೊಮ್ಮೆ ನೋಡಿ. ಎಲ್ಲರೂ ಸುತ್ತಲೂ ಕುಳಿತುಕೊಂಡು ಹಣತೆಗಳಿಗೆ ಬಣ್ಣಹಚ್ಚೋದರಲ್ಲಿ ಬ್ಯುಸಿಯಾಗಿದ್ದಾರೆ. ಇವರೆಲ್ಲರೂ ಮಂಗಳೂರಿನ ವಿ.ಟಿ.ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು‌.

ಸಾಧಾರಣ 18ವರ್ಷಕ್ಕಿಂತ ಮೇಲ್ಪಟ್ಟ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಚಟುವಟಿಕೆ ಎಂಬಂತೆ ಹಣತೆಗಳಿಗೆ ವಿಶೇಷ ರೂಪ ಕೊಡಿಸಲಾಗುತ್ತಿದೆ. ಕುಂಬಾರರಿಂದ ಖರೀದಿಸಿರುವ ಮಣ್ಣಿನ ಹಣತೆಗಳಿಗೆ ಇವರು ಶಿಕ್ಷಕಿಯರ ಮಾರ್ಗದರ್ಶನದಂತೆ ಬಣ್ಣಬಣ್ಣದ ರಂಗು ತುಂಬಿ ಚಂದಗಾಣಿಸುತ್ತಾರೆ. ಬಳಿಕ ವಿದ್ಯಾರ್ಥಿಗಳೇ ಬಾಕ್ಸ್‌ಗಳಿಗೆ ತುಂಬಿಸಿ ಪ್ಯಾಕ್ ಮಾಡುತ್ತಾರೆ.

ಇದನ್ನೂ ಓದಿ: Temple Rituals: ಗರ್ಭಗುಡಿಯ ದೇವರ ವಿಗ್ರಹವನ್ನು ದೀಪದ ಬೆಳಕಿನಲ್ಲೇ ನೋಡಬೇಕು- ಯಾಕೆ ಗೊತ್ತಾ?

15-20 ಸಾವಿರ ಹಣತೆ ತಯಾರಿ

ಸುಮಾರು 30ವಿದ್ಯಾರ್ಥಿಗಳು ಹಣತೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಾವಳಿಗಿಂತ 2ತಿಂಗಳ ಮೊದಲೇ ಹಣತೆ ತಯಾರಿ ಕಾರ್ಯ ಇಲ್ಲಿ ಆರಂಭವಾಗುತ್ತದೆ. ಲೆಕ್ಕಾಚಾರದ ಪ್ರಕಾರ, 15,000-18,000 ಹಣತೆಗಳನ್ನು ತಯಾರಿಸಲಾಗುತ್ತದೆ. ಇಲ್ಲಿ 21ವಿವಿಧ ಗಾತ್ರ, ಶೈಲಿಯನ್ನು ಹೊಂದಿರುವ ಹಣತೆಗಳನ್ನು ತಯಾರಿಸಲಾಗುತ್ತಿದ್ದು, 10 ರೂಪಾಯಿಯಿಂದ 60ರೂಪಾಯಿವರೆಗೆ ಹಣತೆಗಳು ಇಲ್ಲಿ ಲಭ್ಯವಿದೆ.

ಅಕ್ಟೋಬರ್ 21ರಿಂದ ನವೆಂಬರ್ 1ರವರೆಗೆ ಇಲ್ಲಿ ಹಣತೆಗಳ ಮಾರಾಟ ನಡೆಯುತ್ತದೆ. ಕಳೆದ ಬಾರಿ ಹಣತೆಯಿಂದ 4ಲಕ್ಷ ರೂ.ನಷ್ಟು ವ್ಯಾಪಾರ ವಹಿವಾಟು ನಡೆದಿತ್ತು. ಈ ಬಾರಿಯೂ ಹಣತೆಗಳಿಗೆ ಉತ್ತಮ ಬೇಡಿಕೆಯಿದ್ದು, ಜಿಲ್ಲೆ, ರಾಜ್ಯವಲ್ಲದೆ ದೇಶದ ಇತರೆಡೆಗಳಿಂದಲೂ ಬೇಡಿಕೆಯಿದೆಯಂತೆ. ಇದರಿಂದ ಶಾಲೆಗೆ ಆದಾಯ ಬರುತ್ತಿದ್ದು, ಎಲ್ಲರೂ ವಿಶೇಷ ಚೇತನರ ಕೆಲಸವನ್ನು ಪ್ರೋತ್ಸಾಹಿಸಲು ಈ ದೀಪಾವಳಿಗೆ ಇಲ್ಲಿಂದಲೇ ಹಣತೆಗಳನ್ನು ಖರೀದಿಸಬೇಕೆಂಬುದು ನಮ್ಮ ಆಶಯ.