Last Updated:
ದೇಶದ ನಾನಾ ಭಾಗದ ಜನರು ನಟ ಅಪ್ಪು ಅವರನ್ನು ಜನ್ಮ ದಿನದಂದು ನೆನಪಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ದಿವಂಗತ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ
ಇಂದು (ಮಾರ್ಚ್ 17) ನಟ ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ದಿನವನ್ನು ನಟ ಅಪ್ಪು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ, ದಾನ ಧರ್ಮ ಮಾಡುವ ಮೂಲಕ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ದೇಶದ ನಾನಾ ಭಾಗದ ಜನರು ಅವರ ಜನ್ಮ ದಿನದಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ದಿವಂಗತ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಆರ್‌ಸಿಬಿಗಾಗಿ ಆಡುವಾಗ ಅವರ ಬಗ್ಗೆ ನನಗೆ ಗೊತ್ತಾಯ್ತು
ನಟ ಪುನೀತ್ ರಾಜಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಆರ್‌ಸಿಬಿ ತಂಡದ ಕೋಚ್ ದಿನೇಶ್ ಕಾರ್ತಿಕ್, ನಾನು ಮೂಲತಃ ಚೆನೈನವನು. ನನಗೆ ರಜಿನಿ ಕಾಂತ್, ಕಮಲ್ ಹಾಸನ್, ವಿಜಯ್ ಸೇತುಪತಿ, ಅಜೀತ್ ಅಂದ್ರೆ ತುಂಬಾ ಇಷ್ಟ. ಆದ್ರೆ, RCBಗಾಗಿ ಮೂರು ವರ್ಷ ಆಡುವಾಗ ನನಗೆ ಅನ್ಸಿದ್ದು ಇಡೀ ಬೆಂಗಳೂರು ಒಬ್ಬರನ್ನು ಇಷ್ಟಪಡುತ್ತೆ ಅಂತ. ಅದು ಯಾರೆಂದ್ರೆ ನಟ ಪುನೀತ್ ರಾಜ್ ಕುಮಾರ್ ಎಂದಿದ್ದಾರೆ.
ಬೆಂಗಳೂರಿನ ಪ್ರತೀ ಮೂಲೆಯಲ್ಲೂ ಅಪ್ಪು ಇದ್ದಾರೆ
ಪ್ರತೀ ಮೂಲೆಯಲ್ಲೂ ಅಪ್ಪು ಫೋಟೋವನ್ನು ನೋಡಿದ್ದೇನೆ, ಅವರು ಬೆಂಗಳೂರಿನ ಪ್ರತೀ ಮೂಲೆಯಲ್ಲೂ ಇದ್ದಾರೆ ಅನ್ಸುತ್ತೆ. ಆ ಮಟ್ಟಿಗೆ ಅಭಿಮಾನಿಗಳು ಅವರನ್ನ ಇಷ್ಟ ಪಡ್ತಾರೆ. ಅವರ ಹುಟ್ಟುಹಬ್ಬದ ದಿನ ನಾನು ಅವ್ರಿಗೆ ನಮಿಸ್ತೇನೆ, ಮುಂದಿನ ಪೀಳಿಗೆಗೂ ಅವರು ಸ್ಪೂರ್ತಿಯಾಗಿರ್ತಾರೆ. ಅವರ ಸಿನಿಮಾಗಳನ್ನು ನೋಡಲು ಆಗಿಲ್ಲ. ಈಗಿನಿಂದಲೇ ನನಗೆ ಗೈಡ್ ಮಾಡಿ ಯಾವೆಲ್ಲಾ ಸಿನಿಮಾಗಳನ್ನ ನೋಡಲಿ ಅಂತ ವೀಡಿಯೋದಲ್ಲಿ ದಿನೇಶ್ ಕಾರ್ತಿಕ್ ಭಾವನಾತ್ಮಕ ಸಂದೇಶ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: RCB Unbox ಈವೆಂಟ್‌ನಲ್ಲಿ ಅಪ್ಪು ನೆನಪು! ‘ನೀನೇ ರಾಜಕುಮಾರ’ ಹಾಡಿಗೆ ಕೊಹ್ಲಿ ಮಾಡಿದ್ದೇನು ಗೊತ್ತಾ?
ಪುನೀತ್ ರಾಜಕುಮಾರ್ ಜನ್ಮದಿನಾಚರಣೆ
ಆರ್‌ಸಿಬಿ ಅಭಿಮಾನಿಗಳಿಗೆ ತಂಡದ ಹೊಸ ಆಟಗಾರರನ್ನು ಪರಿಚಯಿಸಿಕೊಡುವ ಈ ಸಮಾರಂಭದಲ್ಲಿ ಅಭಿಮಾನಿಗಳಿಗಾಗಿ ಮನರಂಜನೆ ಕಾರ್ಯಕ್ರಮ ಹಾಗೂ ಆಟಗಾರರಿಂದ ವಿಶೇಷ ಚಟುವಟಿಕೆಗಳನ್ನು ಕೂಡ ಮೈದಾನದಲ್ಲಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷವಾಗಿ ನಮನ ಸಲ್ಲಿಸಲಾಯಿತು.
ಮೊಬೈಲ್ ಟಾರ್ಚ್ ಬೆಳಗಿದ ಕೊಹ್ಲಿ
ಪುನಿತ್ ರಾಜ್ಕುಮಾರ್ ನಟನೆಯ ರಾಜಕುಮಾರ ಸಿನಿಮಾದ ಗೀತೆಯನ್ನು ಹಾಡುವ ಮೂಲಕ ಹಾಗೂ ಮೈದಾನದಲ್ಲಿ ಪುನೀತ್ ರಾಜ್ಕುಮಾರ್ ಬೃಹತ್ ಫೋಟೋ ಪ್ರದರ್ಶನ ಹಾಗೂ ಅನೇಕ ಕಲಾವಿದರು ಇದೇ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳು ಮೊಬೈಲ್ ಟಾರ್ಚ್ ಆನ್ ಮಾಡಿ, ನೀನೇ ರಾಜಕುಮಾರ ಹಾಡು ಹಾಡಿ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಮಾತ್ರವಲ್ಲ ಅಭಿಮಾನಿಗಳ ಜೊತೆಗೆ ವಿರಾಟ್ ಕೊಹ್ಲಿ ಕೂಡ ಮೊಬೈಲ್ ಟಾರ್ಚ್ ಹಾಕಿ ಗೌರವ ಸಲ್ಲಿಸಿದರು.
Bangalore,Karnataka
March 17, 2025 10:13 PM IST
Dinesh Karthik: ಇಡೀ ಬೆಂಗಳೂರು ಅಪ್ಪು ಇಷ್ಟಪಡುತ್ತೆ, ಇಲ್ಲಿನ ಮೂಲೆ ಮೂಲೆಯಲ್ಲಿ ಅವರಿದ್ದಾರೆ! ಪುನೀತ್ ಬಗ್ಗೆ ದಿನೇಶ್ ಕಾರ್ತಿಕ್ ಹೃದಯದ ಮಾತು