Last Updated:
ಎಲಾನ್ ಮಸ್ಕ್ ತನ್ನ xAI ತಂಡದೊಂದಿಗೆ ಗ್ರೋಕಿಪೀಡಿಯಾ 0.1 ಅನ್ನು ಬಿಡುಗಡೆ ಮಾಡಿದ್ದಾರೆ, ಇದು ವಿಕಿಪೀಡಿಯಾ ತರಹದ ಮಾಹಿತಿ ಜಾಲತಾಣ, ಎಕ್ಸ್ ಪ್ರೀಮಿಯಂ ಬಳಕೆದಾರರಿಗೆ ಲಭ್ಯ.
ಬೆಂಗಳೂರು: ಎಲಾನ್ ಮಸ್ಕ್ ತಂತ್ರಜ್ಞಾನ (̳Technology) ಕ್ಷೇತ್ರದ ಉಪೇಂದ್ರ ಇದ್ದ ಹಾಗೆ! ಆತನಿಗೆ ‘ಟ್ರೆಂಡ್’ ಮಾಡಿಯಷ್ಟೇ ಗೊತ್ತು! ಈಗ ಆತ ಇದ್ದು ಬಿದ್ದಿದ್ದನ್ನೆಲ್ಲಾ ಬಿಟ್ಟು ಮನುಷ್ಯನ (People) ಮೆದುಳಿಗೆ ಕೈ ಹಾಕಿ ಸತ್ಯ ಹುಡುಕುವ ಪ್ರಯತ್ನವನ್ನು ‘ಆಪರೇಶನ್’ ಇಲ್ಲದೇ ಮಾಡಲು ಮುಂದಾಗಿದ್ದಾನೆ! ಹೌದು, ಮಸ್ಕ್ ಮಾಡ್ತಾ ಇರೋದು ‘ಮೆಲನ್’ ಥರಾ ತಂತ್ರಜ್ಞಾನ ಕುಕ್ಷಿಗಳಿಗೆ ರಸಪಾನ ಮಾಡಿಸಿದರೆ ‘ಲೆಮೆನ್’ ಥರಾ ವಿಕಿಪೀಡಿಯಾಗೆ ಹುಳಿ ಹಿಂಡೋ ಕೆಲಸ ಮಾಡುತ್ತಿದ್ದಾನೆ! ಯಾಕೆ ಇದು? ಏನು ಮಸ್ಕ್ ಮಾಡ್ತಿರೋ ಕೆಲಸ (Work) ಅಂತೀರಾ? ಇಲ್ಲಿದೆ ವರದಿ.
ನಾವು ಏನಾದರೂ ಬೇಕಿದ್ದರೆ ಹುಡುಕುವುದು ಏನನ್ನ? ಗೂಗಲ್‌ನ ನಂತರ ಅದರ ಮಾಹಿತಿಗಾಗಿ ಅರಸುವುದು ವಿಕಿಪೀಡಿಯಾನ. ಈ ಲಿಂಕ್ ಅನ್ನು ಮುರಿಯುವುದಕ್ಕಂತಲೇ ತನ್ನ ಗ್ರೋಕ್ ಎಂಬ ತಂತ್ರಾಂಶದ ಮೂಲಕ ಗ್ರೋಕೀಪೀಡಿಯಾ ತಂದಿದ್ದಾನೆ ಎಲಾನ್ ಮಸ್ಕ್! ಎಲಾನ್ ಮಸ್ಕ್ ತಂದಿರುವ ಈ ಗ್ರೋಕೀಪೀಡಿಯಾ ಏನು ಮಾಡುತ್ತೆ ಗೊತ್ತಾ?
ಇದು ಸಾಮಾಜಿಕ ಜಾಲತಾಣವಾದ ಎಕ್ಸ್‌ನ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಮಾಹಿತಿ ಜಾಲತಾಣ. ಒಂದು ಸಿಂಗಲ್ ಸರ್ಚ್ ಬಾರ್‌ನಲ್ಲಿ ನಾವು ಟೈಪಿಸಿದ ವಸ್ತು, ವಿಷಯ, ವಿಚಾರದ ಬಗ್ಗೆ ಸವಿಸ್ತಾರವಾದ ವಿವರವನ್ನು ತೆರೆದಿಡುತ್ತದೆ. ಥೇಟ್ ವಿಕಿಪೀಡಿಯಾದ ಥರ! ಆದರೆ ಇಲ್ಲಿ ವಿಕಿಪೀಡಿಯಾದ ರೀತಿ ಬಳಕೆದಾರರ ಹಸ್ತಕ್ಷೇಪ ಇರುವುದಿಲ್ಲ. ಅವರು ಇಲ್ಲಿರುವ ಮಾಹಿತಿ ತಿದ್ದಲು ಆಗುವುದಿಲ್ಲ, ಹಾಗೆಯೇ ಅವರು ಏನಾದರೂ ಸಲಹೆ ಸೂಚನೆ ಕೊಡಬೇಕೆಂದಿದ್ದರೆ ಅದನ್ನು ಫೀಡ್‌ಬ್ಯಾಕ್ ಮೂಲಕ ಕೊಡಬಹುದಷ್ಟೇ!
ಈ ಇಡೀ ವ್ಯವಸ್ಥೆಯನ್ನು xAI ನ ಸ್ವಯಂ ಸೇವಕ ತಂಡ ನಿಯಂತ್ರಿಸುತ್ತಿದೆ. ಅಲ್ಲಿನ ಲೇಖನಗಳ ಬರಹ, ಸಂಪಾದನೆ ಹಾಗೂ ಸಂಕಲನ ಕೂಡ ಇದೇ ತಂಡದ್ದೇ. ಸದ್ಯದ ಮಟ್ಟಿಗೆ ಅವರು ಯಾರು? ಎಂಬ ಮಾಹಿತಿ ಬಹಿರಂಗವಾಗಿಲ್ಲ, ಇದೊಂದು ಸ್ಟ್ರಾಟರ್ಜಿಯೂ ಆಗಿರಬಹುದು . ಇದೇ 28 ರಂದು ಮಸ್ಕ್ ಈ ತಂತ್ರಾಂಶವನ್ನು ಬಿಡುಗಡೆಗೊಳಿಸಿದ್ದಾನೆ.
ಈ ಗ್ರೋಕೀಪೀಡಿಯಾದಲ್ಲಿ ಆರಂಭದಲ್ಲಿಯೇ 8,85,279 ಲೇಖನಗಳಿವೆ. ಇನ್ನೂ ವಿಕಿಪೀಡಿಯಾದಲ್ಲಿ ಈಗಾಗಲೇ 65 ಮಿಲಿಯನ್ ಲೇಖನಗಳಿವೆ. ಇದರಲ್ಲೂ ಒಂದು ಟ್ವಿಸ್ಟ್ ಇಡಲಾಗಿದೆ. ಈಗ ಬಿಟ್ಟಿರುವ ತಂತ್ರಾಂಶ ಏನಿದೆಯಲ್ಲಾ ಇದು ಬರೀ ಗ್ರೋಕಿಪೀಡಿಯಾ 0.1 ಅಷ್ಟೇ. ಇನ್ನೂ ಗ್ರೋಕಿಪೀಡಿಯಾ 1.0 ಬರಲಿದ್ದು ಅದು ಮಾನವನ ಎಲ್ಲಾ ಸವಾಲುಗಳಿಗೆ ಉತ್ತರಿಸಲಿದೆ. ಉದಾಹರಣೆಗೆ ನೀವು ಗ್ರೋಕಿಯ 1.0 ಪ್ರಶ್ನೆಗೆ ಕೋಳಿ ಮೊದಲಾ? ಮೊಟ್ಟೆ ಮೊದಲಾ?, ದೇವರು ಇದ್ದಾನಾ?, ಬರ್ಮುಡಾ ಟ್ರಯಾಂಗಲ್ ರಹಸ್ಯ ಏನು? ವಾಯ್ನಿಚ್ ಗ್ರಂಥದ ಟ್ರಾನ್ಸಲೇಶನ್ ಇದನ್ನೆಲ್ಲಾ ಮಾಡಬಹುದಾದ ಸಾಧ್ಯತೆ ತಿಳಿಸಿದ್ದಾನೆ ಮಹಾನುಭಾವ ಮಸ್ಕ್!
ಹೇಗೆ ಕಾರ್ಯನಿರ್ವಹಿಸಲಿದೆ ಈ ವ್ಯವಸ್ಥೆ?
ಇನ್ನೂ ಈ ತಂತ್ರಾಂಶವು ಈಗಾಗಲೇ ವೆಬ್, ನ್ಯೂಸ್ ಪೋರ್ಟಲ್, ಪುಸ್ತಕಗಳು, ಸಂಶೋಧನೆಗಳು ಸೇರಿದಂತೆ ಹಲವು ಆಕರದಿಂದ ಡಾಟಾ ರಿಟ್ರೀವಲ್ ಮಾಡಿ ಗ್ರೋಕ್ ರಿಯಲ್ ಟೈಂ ಸ್ಟಾಂಪ್‌ನೊಂದಿಗೆ ಮಾಹಿತಿ ಪ್ರಸ್ತುತ ಪಡಿಸುತ್ತದೆ. ಈ ಸಮಯದಲ್ಲಿ ವದಂತಿ ಹಾಗೂ ಗಾಳಿಸುದ್ದಿಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತದೆ. ಉದಾಹರಣೆಗೆ ವಿಕಿಪೀಡಿಯದಲ್ಲಿ ಮಾನವ ಹಸ್ತಕ್ಷೇಪದ ಸಲುವಾಗಿ ತಡ ಆಗುವ ಕೆಲಸಗಳು ಈಗ ಗ್ರೋಕಿಯಲ್ಲಿ ರಿಯಲ್ ಟೈಂ ಅಲ್ಲಿ ಆಗಿಂದಾಗ್ಗೆ ಅಪ್ಡೇಟ್ ಆಗುತ್ತವೆ. ಆಮೇಲೆ ಇದು ವಿಕಿಪೀಡಿಯಾ ತರಹ ಟ್ರಸ್ಟ್ ಅಲ್ಲ, ಇದು ವ್ಯಾಪಾರಕ್ಕಾಗಿಯೇ ಮಾಡಿದ ಸಂಸ್ಥೆ ಎಂದು ಹೇಳಿದ್ದಾರೆ. ಮಿಗಿಲಾಗಿ ಈ ಪ್ರಯತ್ನಕ್ಕೆ ಅವರ ಜೊತೆ ಮಸ್ಕ್ ಹಾಗೂ ಟ್ರಂಪ್‌ನ ಸ್ನೇಹಿತ ಡೇವಿಡ್ ಸ್ಯಾಕ್ಸ್ ಜೊತೆಯಾಗಿದ್ದಾರೆ. ತಂತ್ರಜ್ಞಾನದಲ್ಲಿ ಇದೊಂದು ಕ್ರಾಂತಿ ಎಂದು ಹೇಳಲಾಗುತ್ತಿದೆ.
Bangalore [Bangalore],Bangalore,Karnataka
October 30, 2025 4:36 PM IST