Last Updated:
ಮುಖ್ಯವಾಗಿ ಈ ಅಂಡೊಳೆಕಾಯಿಯನ್ನು ಚಿನ್ನದ ಅಂಗಡಿಗಳಲ್ಲೇ ಬಳಸಲಾಗುತ್ತದೆ. ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಉಪಯೋಗಿಸಿದರೆ ಅಥವಾ ಉಪಯೋಗಿಸದೇ ಇದ್ದ ಸಮಯದಲ್ಲಿ ಅವುಗಳು ಕಪ್ಪು ಬಣ್ಣಕ್ಕೆ ತಿರುಗುವುದು ಸಾಮಾನ್ಯ.
ಚಿನ್ನ(Gold), ಬೆಳ್ಳಿ(Silver), ತಾಮ್ರ ಸೇರಿದಂತೆ ಪಂಚಲೋಹಗಳನ್ನು ತೊಳೆಯಲು ಹಳ್ಳಿಯ ಜನ ಮತ್ತು ಚಿನ್ನದ ಕೆಲಸ ಮಾಡುವ ಜನ ಅಂಡೊಳೆಕಾಯಿ ( ನೊರೆಕಾಯಿ ) ಎನ್ನುವ ಪ್ರಕೃತಿಯಲ್ಲಿ(Nature) ದೊರೆಯುವ ಕಾಯಿಯೊಂದನ್ನು ಬಳಸುತ್ತಾರೆ. ಈ ಕಾಯಿಯನ್ನು ನೀರಲ್ಲಿ ಕೊಂಚ ಸಮಯ ಅದ್ದಿಟ್ಟ ಬಳಿಕ ಕೈಯಲ್ಲಿ ಚೆನ್ನಾಗಿ ಉಜ್ಜಿದರೆ ಅದರಿಂದ ಸಾಬೂನಿನಂತೆ ನೊರೆ ಬರುತ್ತದೆ. ಇದೇ ನೊರೆಯನ್ನು ಬಳಸಿಕೊಂಡು ಚಿನ್ನ,ಬೆಳ್ಳಿ ಸೇರಿದಂತೆ ಪಂಚಲೋಹಗಳನ್ನು ಪಳಪಳ ಹೊಳೆಯುವಂತೆ ತೊಳೆಯಲಾಗುತ್ತದೆ.
ಮುಖ್ಯವಾಗಿ ಈ ಅಂಡೊಳೆಕಾಯಿಯನ್ನು(ಅಂಟುವಾಳ ಕಾಯಿ) ಚಿನ್ನದ ಅಂಗಡಿಗಳಲ್ಲೇ ಬಳಸಲಾಗುತ್ತದೆ. ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಉಪಯೋಗಿಸಿದರೆ ಅಥವಾ ಉಪಯೋಗಿಸದೇ ಇದ್ದ ಸಮಯದಲ್ಲಿ ಅವುಗಳು ಕಪ್ಪು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಹೀಗೆ ಕಪ್ಪು ಹಿಡಿದ ಆಭರಣಗಳನ್ನು ಇದೇ ನೊರೆಕಾಯಿಯನ್ನು ಬಳಸಿ ತೊಳೆಯಲಾಗುತ್ತದೆ. ಹೀಗೆ ತೊಳೆದ ಆಭರಣಗಳ ಎಲ್ಲಾ ಕೊಳೆಗಳು ಮಾಯವಾಗುತ್ತದೆ.
ಇದನ್ನೂ ಓದಿ: Karnataka Rains: ರಾಜ್ಯದಲ್ಲಿ ಇಂದು ಮಳೆಯಾಗುತ್ತಾ? ಏನಂತಾರೆ ಹವಾಮಾನ ತಜ್ಞರು?
ಆದರೆ ಕಳೆದ ಹತ್ತು ವರ್ಷದಿಂದೀಚೆಗೆ ಈ ನೊರೆಕಾಯಿಯ ಜಾಗವನ್ನು ತೊಳೆಯುವ ಯಂತ್ರಗಳು ಆಕ್ರಮಿಸಿಕೊಂಡಿವೆ. ಆದರೆ ಕೆಲವು ಆಭರಣಗಳನ್ನು ಇದೇ ಕಾಯಿಯನ್ನೇ ಬಳಸಿಕೊಂಡು ತೊಳೆಯುವ ಸಂಪ್ರದಾಯ ಇಂದಿಗೂ ಮುಂದುವರಿದೆ. ಅದರಲ್ಲೂ ದೈವಗಳ ಮುಖವಾಡ, ಆಭರಣಗಳನ್ನು ತೊಳೆಯಲು ಇದೇ ನೊರೆಕಾಯಿಯನ್ನು ಬಳಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಆಭರಣಗಳನ್ನು ತೊಳೆಯಲು ಬಳಸುವ ಯಂತ್ರಗಳಿಂದ ದೈವಕ್ಕೆ ಸಂಬಂಧಪಟ್ಟ ಆಭರಣಗಳನ್ನು ತೊಳೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ, ಈ ಕಾಯಿ ಇಂದಿಗೂ ಬಳಕೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಈ ನೊರೆಕಾಯಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದರೂ, ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಮರಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.
Dakshina Kannada,Karnataka
November 08, 2024 10:38 AM IST