Last Updated:
ಹಾಸ್ಯಪ್ರಧಾನ ಚಿತ್ರವನ್ನು ಮಾಡುವ ಉದ್ದೇಶವನ್ನು ಗೋಲ್ಡನ್ ಬ್ಯಾನರ್ ಇಟ್ಟುಕೊಂಡಿದ್ದು, ತುಳು ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿ ಇರಲಿದೆ. ಚಿತ್ರದ ಛಾಯಾಗ್ರಾಹಕರಾಗಿ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ಸ್ಯಾಮೂವಕ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮೋಹನ್ ಭಟ್ಕಳ ಸೇರಿದಂತೆ ಅನುಭವಿ ತಂಡ ಚಿತ್ರದ ತೆರೆ ಹಿಂದೆ ಕೆಲಸ ಮಾಡಲಿದೆ.
ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ತುಳು ಚಿತ್ರರಂಗದಲ್ಲಿ(Tulu) ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಗೋಲ್ಡನ್ ಮೂವಿಸ್ ಬ್ಯಾನರ್(Golden Movies Banner) ಅಡಿಯಲ್ಲಿ ತುಳು ಚಿತ್ರ ನಿರ್ಮಾಣವಾಗುತ್ತಿದ್ದು, ಕೋಸ್ಟಲ್‌ವುಡ್‌ನ(Coastal wood) ಘಟಾನುಘಟಿ ನಟರ ತಂಡವೇ ಚಿತ್ರದ ತಾರಗಣದಲ್ಲಿದೆ. ತುಳು ಚಿತ್ರ ಮಾಡಬೇಕೆಂಬ ಶಿಲ್ಪಾ ಗಣೇಶ್(Shilpa Ganesh) ಆಸೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಸ್ಯಾಂಡಲ್‌ವುಡ್ ಗೆ ಸರಿಸಮಾನಾಗಿ ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೋಸ್ಟಲ್‌ವುಡ್‌ನ ಚಿತ್ರವೊಂದರಲ್ಲಿ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅಭಿನಯಿಸುತ್ತಿರುವ ಬೆನ್ನಲ್ಲೇ, ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ತುಳು ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗೋಲ್ಡನ್ ಬ್ಯಾನರ್ ನಡಿಯಲ್ಲಿ ಇದೇ ಮೊದಲ ಬಾರಿಗೆ ತುಳು ಚಿತ್ರ ನಿರ್ಮಾಣವಾಗುತ್ತಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿದೆ. ಶಿಲ್ಪಾ ಗಣೇಶ್ ನೇತೃತ್ವದ ಗೋಲ್ಡನ್ ಮೂವೀಸ್ ನಿರ್ಮಾಣದ ಸಂದೀಪ್ ಬೆದ್ರ ನಿರ್ದೇಶನದ ʼಪ್ರೊಡಕ್ಷನ್ ನಂಬರ್ 1ʼ ತುಳು ಚಲನಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ನಿತ್ಯ ಪ್ರಕಾಶ್ ಬಂಟ್ವಾಳ ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Dakshina Kannada: ಇಲ್ಲಿ ನಡೆಯುತ್ತೆ ದೈವ ಮತ್ತು ಭಕ್ತರ ಮಧ್ಯೆ ಬೆಂಕಿಯಾಟ- ನೋಡುಗರಿಗೆ ರೋಮಾಂಚನದ ಅನುಭವ!
ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಮತ್ತು ಉದ್ಯಮಿ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ತುಳು ಚಿತ್ರರಂಗದ ಪ್ರಮುಖರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಉಡುಪಿ ಮೂಲದವರಾಗಿದ್ದು, ಮನೆಯಲ್ಲಿ ತುಳು ಚಿತ್ರ, ಕಾಮಿಡಿ ಸೀನ್‌ಗಳನ್ನೇ ನೋಡುತ್ತಿರುತ್ತಾರೆ. ತುಳು ಚಿತ್ರ ಮಾಡಬೇಕೆಂಬುದು ಶಿಲ್ಪಾ ಅವರ ಬಹುದಿನಗಳ ಕನಸಾಗಿತ್ತು. ಈಗ ಕಾಲ ಕೂಡಿ ಬಂದಿದೆ. ಕೋಸ್ಟಲ್‌ವುಡ್‌ನ ಅನೇಕ ಚಿತ್ರಗಳನ್ನು ನೋಡಿದ್ದೇನೆ. ಖ್ಯಾತ ನಟರ ನಟನೆ, ಆಂಗಿಕ ನಟನೆ ಎಲ್ಲವೂ ಅದ್ಭುತವಾಗಿದೆ. ಚಿತ್ರಕಥೆಯೂ ಉತ್ತಮವಾಗಿದ್ದು, ಉತ್ಸಾಹಿ ನಿರ್ದೇಶಕರ ತಂಡವೂ ಇದೆ. ಈ ಚಿತ್ರ ದಲ್ಲಿ ನನ್ನ ನಟನೆ ಇಲ್ಲ.ಆದರೆ ಚಿತ್ರ ಸಾಂಗ್ ಸೀನ್‌ನಲ್ಲಿ ಭಾಗವಹಿಸುತ್ತೇನೆ ಎಂದು ಗಣೇಶ್ ಹೇಳಿದ್ದಾರೆ.
ಇತ್ತ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಕೂಡಾ ತುಳು ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ನಿರ್ದೇಶನದ ʼಜೈʼ ಚಿತ್ರದಲ್ಲಿ ಸುನೀಲ್ ಶೆಟ್ಟಿ ನಟನೆ ಮಾಡುತ್ತಿದ್ದು, ಚಿತ್ರೀಕರಣ ಆರಂಭಗೊಂಡಿದೆ. ಹಾಸ್ಯಪ್ರಧಾನ ಚಿತ್ರವನ್ನು ಮಾಡುವ ಉದ್ದೇಶವನ್ನು ಗೋಲ್ಡನ್ ಬ್ಯಾನರ್ ಇಟ್ಟುಕೊಂಡಿದ್ದು, ತುಳು ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿ ಇರಲಿದೆ. ಚಿತ್ರದ ಛಾಯಾಗ್ರಾಹಕರಾಗಿ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ಸ್ಯಾಮೂವಕ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮೋಹನ್ ಭಟ್ಕಳ ಸೇರಿದಂತೆ ಅನುಭವಿ ತಂಡ ಚಿತ್ರದ ತೆರೆ ಹಿಂದೆ ಕೆಲಸ ಮಾಡಲಿದೆ.
ಒಟ್ಟಿನಲ್ಲಿ ತುಳು ಚಿತ್ರರಂಗ ಬೆಳೆಯುತ್ತಿರುವ ಹೊತ್ತಿನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕಾಂತಾರ ಚಿತ್ರದ ಬಳಿಕ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಲವು ಚಿತ್ರಗಳು ಬಂದಿದ್ದು, ಸಿನಿರಸಿಕರ ಮನಸ್ಸನ್ನು ಗೆದ್ದಿವೆ. ಇದೀಗ ಗೋಲ್ಡನ್ ಸ್ಟಾರ್ ದಂಪತಿ ಕೂಡಾ ತುಳು ಚಿತ್ರರಂಗದಲ್ಲಿ ಸಾಹಸಕ್ಕೆ ಮುಂದಾಗಿದ್ದು, ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿ ಇಡೀ ತಂಡವಿದೆ.
Dakshina Kannada,Karnataka
January 17, 2025 3:01 PM IST