Last Updated:
ಗುಜರಾತ್ ಟೈಟನ್ಸ್ (GT) ತಂಡವು KKR ವಿರುದ್ಧ 39 ರನ್‌ಗಳ ಸುಲಭ ಜಯ ಸಾಧಿಸಿತು. ಶುಭಮಾನ್ ಗಿಲ್ 90, ಸಾಯಿ ಸುದರ್ಶನ್ 53, ಜೋಸ್ ಬಟ್ಲರ್ 41 ರನ್‌ಗಳೊಂದಿಗೆ ಮಿಂಚಿದರು. KKR 159 ರನ್ ಗಳಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್‌ನ 39ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ಟೈಡರ್ಸ್ ತಂಡದ (KKR) ವಿರುದ್ಧ ಗುಜರಾತ್ ಟೈಟನ್ಸ್ (GT) ಸುಲಭ ಜಯ ಸಾಧಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಮಿಂಚಿದ ಶುಭಮಾನ್ ಗಿಲ್ ನಾಯಕತ್ವದ ಗುಜರಾತ್ 39 ರನ್‌ಗಳ ಸುಲಭ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಶುಭ್‌ಮಾನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ಸುಂದರ ಬ್ಯಾಟಿಂಗ್ ನೆರವಿನಿಂದ 198 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 199 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರವಾಗಿ ಆರಂಭಿಕರಾದ ಸಾಯಿ ಸುದರ್ಶನ್ 53 ರನ್ ಹಾಗೂ ಶುಭ್‌ಮಾನ್ ಗಿಲ್ 90 ರನ್ ಸಿಡಿಸುವ ಮೂಲಕ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದರು. ಮಾತ್ರವಲ್ಲ ನಂತರ ಬಂದ ಜೋಸ್ ಬಟ್ಲರ್ (Joss Buttler) ಕೂಡ ವೇಗವಾಗಿ ರನ್ ಕಲೆ ಹಾಕಿದರು, ಅವರು ಅಜೇಯ 41 ರನ್ ಕಲೆಹಾಕಿದರು. ಕೆಕೆಆರ್ ಪರ ವೈಭವ್ ಅರೋರ, ಹರ್ಷಿತ್ ರಾಣಾ, ಅಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಬೃಹತ್ ಮೊತ್ತ ಚೇಸ್ ಆರಂಭಿಸಿದ ಕೆಕೆಆರ್ ಪರ ನಾಯಕ ಅಜಿಂಕ್ಯಾ ರಹಾನೆ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ ಕೂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅಂತಿಮವಾಗಿ 159 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೆಕೆಆರ್ ಪರ ಅಜಿಂಕ್ಯಾ ರಹಾನೆ 50 ರನ್ ಸಿಡಿಸಿ ಮಿಂಚಿದರು. ಅಂಡ್ರೆ ರಸೆಲ್ 21, ರಘುವಂಶಿ 27 ರನ್ ಸಿಡಿಸಿದರು.
ಗುಜರಾತ್ ಟೈಟನ್ಸ್ ಪರ ರಶಿದ್ ಖಾನ್ 2, ಪ್ರಸಿದ್ಧ್ ಕೃಷ್ಣ 2, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
April 21, 2025 11:22 PM IST