ಮುಂಬೈ ಇಂಡಿಯನ್ಸ್ ರಯಾನ್ ರಿಕಲ್ಟನ್ ಬದಲಿಗೆ ರೋಹಿತ್ ಶರ್ಮಾ ಅವರೊಂದಿಗೆ ಜಾನಿ ಬೈರ್‌ಸ್ಟೋವ್ ಇಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರಯಾನ್ ರಿಕಲ್ಟನ್ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಈಗ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್ ವಿಷಯದಲ್ಲೂ ಇದೇ ಆಗಿದೆ. ಜಾನಿ ಬೈರ್‌ಸ್ಟೋವ್ ಜೊತೆಗೆ, ಮುಂಬೈ ರಿಚರ್ಡ್ ಗ್ಲೀಸನ್ ಗುಜರಾತ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಗುಜರಾತ್ ಟೈಟನ್ಸ್ ಪರ ಸ್ಟಾರ್ ಬ್ಯಾಟರ್ ಜೋಶ್ ಬಟ್ಲರ್ ಬದಲಿಗೆ ಶ್ರೀಲಂಕಾದ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ತಂಡ ಸೇರಿಕೊಂಡಿದ್ದಾರೆ.
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ
” ನಿನ್ನೆಯ (ಕ್ವಾಲಿಫೈಯರ್-1 ಪಂದ್ಯದ ಪಿಚ್) ಪಿಚ್‌ಗೆ ಹೋಲಿಸಿದರೆ ಈ ವಿಕೆಟ್ ವಿಭಿನ್ನವಾಗಿ ಕಾಣುತ್ತದೆ. ಮೈದಾನದಲ್ಲಿ ಹುಲ್ಲು ಕಡಿಮೆ ಇದೆ. ದೊಡ್ಡ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಿ ರಕ್ಷಣೆ ನೀಡುವುದು ಉತ್ತಮ. ನಾವು ಕಳೆದ 9 ಪಂದ್ಯಗಳನ್ನು ನಾಕೌಟ್ ರೀತಿಯಲ್ಲಿ ಆಡಿದ್ದೇವೆ. ಇದನ್ನೂ ಹಾಗೇ ಆಡುತ್ತೇವೆ. ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಮಾತ್ರ ನಾವು ಗಮನಹರಿಸಬೇಕು. ನಮ್ಮ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದೇವೆ. ಜಾನಿ ಬೈರ್‌ಸ್ಟೋವ್ ಹಾಗೂ ಗ್ಲೀಸನ್ ಚೊಚ್ಚಲ ತಂಡ ಸೇರಿಕೊಂಡಿದ್ದಾರೆ. ರಾಜ್ ಅಂಗದ್ ಬಾವಾ ಕೂಡ ಆಡುತ್ತಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ಹೆಡ್ ಟು ಹೆಡ್ ರೆಕಾರ್ಡ್
ಮುಂಬೈ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಹೆಡ್ ಟು ಹೆಡ್ ಗುಜರಾತ್ ಮುಂಬೈಗಿಂತ ಮೇಲುಗೈ ಸಾಧಿಸಿದೆ. ಎರಡೂ ತಂಡಗಳ ನಡುವೆ ಇದುವರೆಗೆ 7 ಪಂದ್ಯಗಳು ನಡೆದಿದ್ದು, ಜಿಟಿ 5-2 ಮುನ್ನಡೆಯಲ್ಲಿದೆ. ಮುಂಬೈ 2023ರಲ್ಲಿ ಕೊನೆಯ ಬಾರಿ ಜಿಟಿ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ನಡೆದಿರುವ 4 ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಪ್ರಾಬಲ್ಯ ಸಾಧಿಸಿದೆ.
ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಬ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜೆರಾಲ್ಡ್ ಕೊಯೆಟ್ಜೆ, ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (WK), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಜ್ ಅಂಗದ್ ಬಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್
GT vs MI Eliminator: ಎಲಿಮಿನೇಟರ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! ಹಾರ್ದಿಕ್ ಪಡೆಗೆ ವಿಧ್ವಂಸಕ ಬ್ಯಾಟರ್ ಎಂಟ್ರಿ