Helicopter Ride: ಮಂಗಳೂರಲ್ಲಿ ಸಖತ್‌ ಸೌಂಡ್‌ ಮಾಡ್ತಿದೆ ಹೆಲಿಕ್ಯಾಪ್ಟರ್‌ ರೆಕ್ಕೆಗಳು; ದುಬಾರಿ ಆದ್ರೂ ಜನರಿಗೆ ಇಷ್ಟ ಈ ಪಯಣ! | Mangaluru Karavali Utsava helicopter ride attracts tourists | ದಕ್ಷಿಣ ಕನ್ನಡ

Helicopter Ride: ಮಂಗಳೂರಲ್ಲಿ ಸಖತ್‌ ಸೌಂಡ್‌ ಮಾಡ್ತಿದೆ ಹೆಲಿಕ್ಯಾಪ್ಟರ್‌ ರೆಕ್ಕೆಗಳು; ದುಬಾರಿ ಆದ್ರೂ ಜನರಿಗೆ ಇಷ್ಟ ಈ ಪಯಣ! | Mangaluru Karavali Utsava helicopter ride attracts tourists | ದಕ್ಷಿಣ ಕನ್ನಡ

Last Updated:

ಮಂಗಳೂರು ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ರೈಡ್ ಆರಂಭ, ಸುಲ್ತಾನ್ ಬತ್ತೇರಿಯಿಂದ 7 ನಿಮಿಷಗಳ ವೈಮಾನಿಕ ಪ್ರವಾಸ, ಪ್ರತಿ ಸದಸ್ಯರಿಗೆ 3500 ರೂ ದರ, ನಗರ ಮತ್ತು ಕಡಲತೀರದ ನೋಟ ಆಕರ್ಷಣೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಹೊಸ ವರ್ಷಾಚರಣೆಗೆ (New Year) ಮಂಗಳೂರು ಪ್ರವಾಸಿಗರಿಂದ ತುಂಬಿದೆ. ಧಾರ್ಮಿಕ ಕ್ಷೇತ್ರಗಳ ಜೊತೆಗೆ ಪ್ರವಾಸಿ ತಾಣಗಳೂ (Tourist Place) ಜನರಿಂದ ತುಂಬಿ ಹೋಗಿದೆ. ಪ್ರವಾಸಿಗರಿಗೆ ಮಂಗಳೂರನ್ನು ಪಕ್ಷಿನೋಟದಲ್ಲೂ ಕಾಣುವ ಅಪೂರ್ವ ಅವಕಾಶವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದೆ.

ಕರಾವಳಿ ಉತ್ಸವದ  ಭಾಗವಾಗಿ ಆಗಸ ವಿಹಾರ

ಪ್ರಸ್ತುತ ನಡೆಯುತ್ತಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಅನುಭವದ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಸವಾರಿ ಮಂಗಳೂರಿನ ಸುಂದರವಾದ ಭೂದೃಶ್ಯದ ವಿಶಿಷ್ಟ ನೋಟವನ್ನು ಜನರಿಗೆ ಉಣಬಡಿಸಲಿದೆ.

ಏಳು ನಿಮಿಷದವರೆಗೆ ಮಾತ್ರ ಹಾರಾಟ ಸೀಮಿತ

ಹೆಲಿಕಾಪ್ಟರ್ ಹಾರಾಟದ ಅವಧಿಯು ಆರರಿಂದ ಏಳು ನಿಮಿಷಗಳವರೆಗೆ ಇರುತ್ತದೆ. ನಗರದ ದೃಶ್ಯವು ಗಗನಚುಂಬಿ ಕಟ್ಟಡಗಳು, ಹಸಿರು ಹಾಸಿನ ನಡುವೆ ಸಾಗುವ ಸುಂದರವಾದ ರೈಲ್ವೆ ಹಳಿಗಳು ಮತ್ತು ಕರಾವಳಿಯ ವಿಹಂಗಮ ನೋಟವನ್ನು ಕಟ್ಟಿಕೊಡಲಿದೆ. ಹಸಿರು ಪ್ರದೇಶಗಳು, ಕಡಲತೀರದಲ್ಲಿ ಸಾಲುಗಟ್ಟಿ ನಿಂತ ದೋಣಿಗಳ ದೃಶ್ಯ ಅದರ ಆಕರ್ಷಣೆಯನ್ನು ಹೆಚ್ಚಿಸಲಿವೆ.

ಪ್ರತೀ ಸದಸ್ಯರಿಗೆ 3500 ರೂಪಾಯಿ ದರ ನಿಗದಿ

ಪ್ರತಿ ವ್ಯಕ್ತಿಗೆ 3500 ರೂ. ದರ ನಿಗದಿಯಾಗಿದ್ದು, ಪ್ರತೀ ಪ್ರಯಾಣದಲ್ಲಿ 5 ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಹಾರಾಟದ ಅವಧಿ ಸುಮಾರು 7 ನಿಮಿಷಗಳು ಆಗಿದ್ದು, ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆಯವರೆಗೆ ಸವಾರಿಗಳು ಲಭ್ಯವಿರುತ್ತದೆ.

ಸುಲ್ತಾನ್‌ ಬತ್ತೇರಿಯಿಂದ ಪಯಣ ಶುರು