Last Updated:
ಪುತ್ತೂರು ನಗರದ ಮುಕ್ರಂಪಾಡಿ ಎಂಬಲ್ಲಿ 5 ಎಕರೆ ಪ್ರದೇಶದಲ್ಲಿ, ಸುಮಾರು 2 ಸಾವಿರ ಸ್ವ್ಕೇರ್ ಫೀಟ್ ಜಾಗದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಅಂದಾಜು 20 ಕೋಟಿ ಖರ್ಚು ಆಗಿದೆ.
ದಕ್ಷಿಣ ಕನ್ನಡ: ಕೃಷಿಕರು ಮತ್ತು ಸಾಮಾನ್ಯ ಜನರೇ ತುಂಬಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮೀಣ ಭಾಗವಾದ ಪುತ್ತೂರಿನಲ್ಲಿ(Puttur) ಇತ್ತೀಚೆಗೆ ಒಂದು ಅದ್ಭುತ ಕಾರ್ಯಕ್ರಮ ನಡೆದಿತ್ತು. ಇಡೀ ಊರಿಗೆ ಊರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಈ ಕಾರ್ಯಕ್ರಮದ ಮುಖ್ಯ ದ್ವಾರದಿಂದ ಹಿಡಿದು ಕಾರ್ಯಕ್ರಮ ನಡೆಯುವ ದಾರಿಯುದ್ದಕ್ಕೂ ದೇಶದ ಎಲ್ಲಾ ತರದ ಆಹಾರ ಪದಾರ್ಥಗಳನ್ನು(Food Items) ಬಡಿಸಲಾಗಿತ್ತು. ಹೌದು, ಇದು ಯಾವುದೋ ಸಾರ್ವಜನಿಕ ಕಾರ್ಯಕ್ರಮವಲ್ಲ, ಇದು ಅತ್ಯಂತ ಸಿಂಪಲ್ ಆಗಿ ಗುರುತಿಸಿಕೊಂಡಿರುವ ಕೇಂದ್ರದ ಅಡಿಷನಲ್ ಸಾಲಿಟರ್ ಜನರಲ್ ಕೆ.ಎಮ್.ನಟರಾಜ್ ಅವರ ನೂತನ ಮನೆಯ ಗೃಹಪ್ರವೇಶದ(House Warming Ceremony) ಒಂದು ಝಲಕ್.
ಇಡೀ ಜಿಲ್ಲೆಯಲ್ಲಿ ಇಂತಹ ಮನೆಯಿಲ್ಲ
ಹೌದು, ಇತ್ತೀಚಿನ ದಿನಗಳಲ್ಲಿ ಪುತ್ತೂರು ತಾಲೂಕಿನಾದ್ಯಂತ ಇದೇ ಮನೆಯ ಗೃಹಪ್ರವೇಶದ ಸುದ್ದಿ ಹರಿದಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಹೋಗದ ಪುತ್ತೂರಿನ ಜನರು ಇರೋದು ಅಪರೂಪ. ಈ ಮನೆಯ ಗೃಹಪ್ರವೇಶಕ್ಕೆ ಇಡೀ ಊರಿಗೆ ಊರನ್ನೇ ಆಮಂತ್ರಿಸಲಾಗಿತ್ತು. ಪುತ್ತೂರು ಬಿಡಿ, ಇಡೀ ದಕ್ಷಿಣಕನ್ನಡ ಜಿಲ್ಲೆಯಲ್ಲೇ ಇಂಥ ಮನೆ ಇಲ್ಲ ಎನ್ನುವ ಮೆಚ್ಚುಗೆಯ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಮನೆ ನಿರ್ಮಾಣಕ್ಕೆ ಖರ್ಚಾಗಿದ್ದೆಷ್ಟು?
ಪುತ್ತೂರು ನಗರದ ಮುಕ್ರಂಪಾಡಿ ಎಂಬಲ್ಲಿ 5 ಎಕರೆ ಪ್ರದೇಶದಲ್ಲಿ, ಸುಮಾರು 2 ಸಾವಿರ ಸ್ವ್ಕೇರ್ ಫೀಟ್ ಜಾಗದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಅಂದಾಜು 20 ಕೋಟಿ ಖರ್ಚು ಆಗಿದೆ. ಅತ್ಯಂತ ಬೆಲೆ ಬಾಳುವ ಮರಗಳಿಂದ ಹಿಡಿದು, ಹಲವು ಲೋಹಗಳನ್ನು ಬಳಸಿ ಅತ್ಯಂತ ಅದ್ಭುತ ರೀತಿಯಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಎತ್ತರವಾದ ಗುಡ್ಡವನ್ನು ಕಡಿದು ಈ ಮನೆಯನ್ನು ನಿರ್ಮಿಸಲಾಗಿದ್ದು, ಒಂದೊಂದು ಅಂತಸ್ತಿನ ಮನೆಯಿಂದಲೂ ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸುವ ವಿಶಿಷ್ಟ ವ್ಯವಸ್ಥೆಯನ್ನೂ ಈ ಮನೆ ಹೊಂದಿದೆ.
ಗೃಹ ಪ್ರವೇಶಕ್ಕೆ ಯಾರ್ಯಾರು ಬಂದಿದ್ರು?
ಸುಪ್ರೀಂಕೋರ್ಟ್ ನ್ಯಾಯಾಧೀಶರು, ನ್ಯಾಯವಾದಿಗಳು, ಹೈಕೋರ್ಟ್ ನ್ಯಾಯಾಧೀಶರು, ನ್ಯಾಯವಾದಿಗಳು, ಹಲವು ಪಕ್ಷದ ನಾಯಕರು ಸೇರಿದಂತೆ ಗಣ್ಯರ ದಂಡೇ ಈ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಭಾಗಿಯಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಕೂಡಾ ಸ್ಪೆಷಲ್ ಆಗಿ ಈ ಮನೆಗೆ ಭೇಟಿ ನೀಡಿ ಮನೆಯ ಮಾಲಕರಿಗೆ ಅಭಿನಂದನೆ ಸಲ್ಲಿಸಿ ತೆರಳಿದ್ದರು. ಮನೆ ಗೃಹಪ್ರವೇಶಕ್ಕೆ ಹೋದವರ ಎಲ್ಲರ ಬಾಯಲ್ಲಿ ಬಂದ ಎರಡೇ ಮಾತು ಎಂತಹ ಅದ್ಭುತ ಮನೆ, ಎಂತಹ ಅದ್ಭುತ ಊಟ ಎಂದಾಗಿತ್ತು.
Dakshina Kannada,Karnataka
December 29, 2024 4:53 PM IST