IND vs AUS: ಅಡಿಲೇಡ್​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್​! 2ನೇ ಪಂದ್ಯದಲ್ಲೂ ಸ್ಟಾರ್​ ಬೌಲರ್​ ಹೊರಗಿಟ್ಟ ಟೀಮ್ ಇಂಡಿಯಾ | IND vs AUS 2nd ODI Australia wins the toss and opts to bowl first check India playing XI | ಕ್ರೀಡೆ

IND vs AUS: ಅಡಿಲೇಡ್​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್​! 2ನೇ ಪಂದ್ಯದಲ್ಲೂ ಸ್ಟಾರ್​ ಬೌಲರ್​ ಹೊರಗಿಟ್ಟ ಟೀಮ್ ಇಂಡಿಯಾ | IND vs AUS 2nd ODI Australia wins the toss and opts to bowl first check India playing XI | ಕ್ರೀಡೆ

Last Updated:

ಮೊದಲ ಪಂದ್ಯವನ್ನ ಹೀನಾಯವಾಗಿ ಸೋತ ಭಾರತ ಯಾವುದೇ ಬದಲಾವಣೆ ಇಲ್ಲದೆ 2ನೇ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿದಿದೆ. ಪರ್ತ್‌ನಲ್ಲಿ ಆಡಿದ ಅದೇ ತಂಡದೊಂದಿಗೆ ಮುಂದುವರಿಸಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್​ ಕುಲದೀಪ್ ಯಾದವ್ ಅವರನ್ನು ಮತ್ತೊಮ್ಮೆ ಬೆಂಚ್​ಗೆ ಸೀಮಿತಗೊಳಿಸಿದೆ.

ಭಾರತ vs ಆಸ್ಟ್ರೇಲಿಯಾ
ಭಾರತ vs ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಅಡಿಲೇಡ್‌ನಲ್ಲಿ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ತಂಡದಲ್ಲಿ ಆಸ್ಟ್ರೇಲಿಯಾ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಸ್ಟಾರ್ ಆಟಗಾರರಾದ ಅಲೆಕ್ಸ್ ಕ್ಯಾರಿ ಮತ್ತು ಆಡಮ್ ಜಂಪಾ ಪ್ಲೇಯಿಂಗ್​ ಇಲೆವೆನ್​​ ಸೇರಿಕೊಂಡಿದ್ದಾರೆ. ಅಚ್ಚರಿ ಎಂದರೆ ಮೊದಲ ಪಂದ್ಯವನ್ನ ಹೀನಾಯವಾಗಿ ಸೋತ ಭಾರತ ಯಾವುದೇ ಬದಲಾವಣೆ ಇಲ್ಲದೆ ಮತ್ತೆ ಕಣಕ್ಕಿಳಿದಿದೆ. ಪರ್ತ್‌ನಲ್ಲಿ ಆಡಿದ ಅದೇ ತಂಡದೊಂದಿಗೆ ಮುಂದುವರಿಸಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್​ ಕುಲದೀಪ್ ಯಾದವ್ ಅವರನ್ನು ಮತ್ತೊಮ್ಮೆ ಬೆಂಚ್​ಗೆ ಸೀಮಿತಗೊಳಿಸಿದೆ.

ಪ್ಲೇಯಿಂಗ್​ ಇಲೆವೆನ್​

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ರೆನ್‌ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೆಜಲ್‌ವುಡ್

ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್

ಹೆಡ್​ ಟು ಹೆಡ್ ದಾಖಲೆ

ಭಾರತ ಅಡಿಲೇಡ್ ಓವಲ್‌ನಲ್ಲಿ 15 ODI ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದು 6 ಪಂದ್ಯಗಳನ್ನು ಸೋತಿದೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಈ ಸ್ಥಳದಲ್ಲಿ ಭಾರತದ ಗೆಲುವಿನ ಶೇಕಡಾವಾರು 60.00. ಆಸ್ಟ್ರೆಲಿಯಾ ವಿರುದ್ಧ 6 ಪಂದ್ಯಗಳನ್ನಾಡಿದ್ದು, 4ರಲ್ಲಿ ಸೋಲು ಕಂಡರೆ 2 ರಲ್ಲಿ ಗೆಲುವು ಸಾಧಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಈ ಮೈದಾನದಲ್ಲಿ ಆಸೀಸ್​ ವಿರುದ್ಧ ಭಾರತ ಗೆಲುವು ಸಾಧಿಸಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs AUS: 2ನೇ ಪಂದ್ಯದಲ್ಲೂ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್​! 2ನೇ ಪಂದ್ಯದಲ್ಲೂ ಸ್ಟಾರ್​ ಬೌಲರ್​ ಹೊರಗಿಟ್ಟ ಟೀಮ್ ಇಂಡಿಯಾ