IND vs AUS: ಕೊನೆಯ ಪಂದ್ಯದಲ್ಲಿ ಕುಲ್ದೀಪ್​ ಜೊತೆ ಕನ್ನಡಿಗನಿಗೂ ಚಾನ್ಸ್? ಸಿಡ್ನಿ ಪಂದ್ಯಕ್ಕೆ ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್ | Kuldeep Yadav Set to Return: India’s Predicted Playing XI for 3rd ODI Against Australia in Sydney | ಕ್ರೀಡೆ

IND vs AUS: ಕೊನೆಯ ಪಂದ್ಯದಲ್ಲಿ ಕುಲ್ದೀಪ್​ ಜೊತೆ ಕನ್ನಡಿಗನಿಗೂ ಚಾನ್ಸ್? ಸಿಡ್ನಿ ಪಂದ್ಯಕ್ಕೆ ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್ | Kuldeep Yadav Set to Return: India’s Predicted Playing XI for 3rd ODI Against Australia in Sydney | ಕ್ರೀಡೆ

Last Updated:



ಭಾರತ ಇಲ್ಲಿಯವರೆಗೆ ಸ್ಪಿನ್ ವಿಭಾಗವನ್ನು ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ವಹಿಸಿದೆ, ಇವರಿಬ್ಬರು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಆದರೆ ಇಬ್ಬರೂ ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ, ಹಾಗಾಗಿ ಕುಲ್ದೀಪ್​ಗೆ ಅವಕಾಶ ಕೊಡಬೇಕೆಂಬ ಕೂಗ ಈಗಾಗಲೇ ಸಾಕಷ್ಟು ಬಾರಿ ಕೇಳಿಬರುತ್ತಿದೆ.

IND vs AUS
IND vs AUS

ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿರುವ ಭಾರತ ತಂಡ (Team India) ಶನಿವಾರ ಕೊನೆಯ ಪಂದ್ಯವನ್ನ ಗೆದ್ದು ತನ್ನ ಗೌರವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಹೀನಾಯ ಸೋಲುಗಳನ್ನು ಅನುಭವಿಸಿರುವ ಭಾರತ ತಂಡವು ತನ್ನ ಬ್ಯಾಟಿಂಗ್ ಅನ್ನು ಬಲಪಡಿಸುವ ಪ್ರಯತ್ನದಲ್ಲಿ ದುರ್ಬಲ ಬೌಲಿಂಗ್ ದಾಳಿಯನ್ನು ಕಣಕ್ಕಿಳಿಸುತ್ತಿದೆ. ಕುಲ್ದೀಪ್ ಯಾದವ್ (Kuldeep Yadav) ಅವರಂತಹ ಮ್ಯಾಚ್ ವಿನ್ನರ್ ಆಟಗಾರನನ್ನು ಸತತವಾಗಿ ನಿರ್ಲಕ್ಷಿಸುವುದು ತಂಡಕ್ಕೆ ದುಬಾರಿಯಾಗಿದೆ. ಗಂಭೀರ್​ರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಕುಲ್ದೀಪ್ ಯಾದವ್‌ಗೆ ಅವಕಾಶ?

ಭಾರತ ಇಲ್ಲಿಯವರೆಗೆ ಸ್ಪಿನ್ ವಿಭಾಗವನ್ನು ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ವಹಿಸಿದೆ, ಇವರಿಬ್ಬರು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಆದರೆ ಇಬ್ಬರೂ ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ, ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಅವರಿಗೆ ರನ್​ಗಳಿಸುವಲ್ಲಿ ಯಾವುದೇ ತೊಂದರೆಯಾಗಿಲ್ಲ. ಎರಡು ಪಂದ್ಯಗಳಿಂದ ಬೆಂಚ್ ಕಾಯುತ್ತಿರುವ ಕುಲ್ದೀಪ್ ಡೆಡ್​ ರಬ್ಬರ್​ನಲ್ಲಾದರೂ ಆಡಲಿ ಎಂಬುದು ಹಲವರ ಅಭಿಪ್ರಾಯವಾಗಿದೆ.

ರೆಡ್ಡಿ ಮತ್ತು ರಾಣಾ ಔಟ್?

ಭಾರತದ ಪ್ರಸ್ತುತ ತಂಡದ ಆಡಳಿತ ಮಂಡಳಿಯು ಆಲ್‌ರೌಂಡರ್‌ಗಳಿಗೆ ಆದ್ಯತೆ ನೀಡುತ್ತದೆ, ಆದರೆ ನಿತೀಶ್ ಕುಮಾರ್ ರೆಡ್ಡಿಯಂತಹ ಬ್ಯಾಟ್ಸ್‌ಮನ್‌ರನ್ನು ಎಂಟನೇ ಕ್ರಮಾಂಕದಲ್ಲಿ ಕಳುಹಿಸುವುದು ಸರಿಯಾದ ತಂತ್ರವಲ್ಲ. ಅವರು ಚೆಂಡಿನಲ್ಲೂ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ಇನ್ನು ಹರ್ಷಿತ್ ರಾಣಾ ಸಂಪೂರ್ಣ ಪಂದ್ಯದಲ್ಲಿ ತಮ್ಮ ಸ್ಥಿರ ಬೌಲಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಅವರು ಎರಡನೇ ಮತ್ತು ಮೂರನೇ ಸ್ಪೆಲ್‌ಗಳಲ್ಲಿ ಅವರ ವೇಗದಲ್ಲಿನ ಗಮನಾರ್ಹ ಕುಸಿತ ಕಾಣುತ್ತಿದೆ. ದಾರಾಳವಾಗಿ ರನ್​ ಬಿಟ್ಟುಕೊಡುತ್ತಿದ್ದಾರೆ. ಅವರ ಪ್ರದರ್ಶನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ಸೂಚಿಸುತ್ತದೆ. ಪ್ರಸಿದ್ಧ್ ಕೃಷ್ಣ ಅವರನ್ನು ಅವರ ಸ್ಥಾನದಲ್ಲಿ ಆಡುವ XI ನಲ್ಲಿ ಸೇರಿಸಿಕೊಂಡರೆ ಕೊನೆಯ ಪಂದ್ಯದಲ್ಲಾದರೂ ಭಾರತದ ಬೌಲಿಂಗ್ ಬಲವಾಗಲಿದೆ.

ಸಿಡ್ನಿಯಲ್ಲಿ ಭಾರತದ ದಾಖಲೆ

ಭಾರತ ತಂಡ ಸಿಡ್ನಿ ಮೈದಾನದಲ್ಲಿ ಆಸ್ಟ್ರೆಲಿಯಾ ವಿರುದ್ಧ ಆಡಿರುವ ಒಟ್ಟು 19 ಪಂದ್ಯಗಳ ಪೈಕಿ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. 16 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಒಟ್ಟಾರೆ ದಾಖಲೆ ನೋಡಿದರೆ 22 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 16ರಲ್ಲಿ ಸೋಲು ಕಂಡಿದೆ. ಕಳೆದ ಪ್ರವಾಸದಲ್ಲಿ ಇಲ್ಲಿ ಆಡಿದ್ದ 2 ಪಂದ್ಯಗಳಲ್ಲೂ ಭಾರತ ಸೋಲು ಕಂಡಿತ್ತು. 2016ರಲ್ಲಿ ಕೊನೆಯ ಭಾರಿ ಟೀಮ್ ಇಂಡಿಯಾ ಇಲ್ಲಿ ಗೆಲುವು ಸಾಧಿಸಿತ್ತು.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಷದೀಪ್ ಸಿಂಗ್

ಆಸ್ಟ್ರೇಲಿಯಾದ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ರೆನ್‌ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕಾನೊಲಿ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ ಮತ್ತು ಮ್ಯಾಟ್ ಕುಹ್ನೆಮನ್