IND vs AUS T20I: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಯುವ ಭಾರತ ಸಜ್ಜು! ಹೆಚ್ಚು ಗೆಲುವು, ರನ್ಸ್, ವಿಕೆಟ್, ಶತಕ ಸೇರಿ A-Z ದಾಖಲೆ ಕುರಿತು ಮಾಹಿತಿ ಇಲ್ಲಿದೆ | India vs Australia: T20I Wins, Runs, Wickets, 100s, Sixes, and Best Score | ಕ್ರೀಡೆ

IND vs AUS T20I: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಯುವ ಭಾರತ ಸಜ್ಜು! ಹೆಚ್ಚು ಗೆಲುವು, ರನ್ಸ್, ವಿಕೆಟ್, ಶತಕ ಸೇರಿ A-Z ದಾಖಲೆ ಕುರಿತು ಮಾಹಿತಿ ಇಲ್ಲಿದೆ | India vs Australia: T20I Wins, Runs, Wickets, 100s, Sixes, and Best Score | ಕ್ರೀಡೆ
ಪಾಂಡ್ಯ ಹೊರೆತುಪಡಿಸಿ ಏಷ್ಯಾಕಪ್ ತಂಡವೇ ಕಣಕ್ಕೆ

ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕರಾಗಿ ಟ್ವೆಂಟಿ-20 ಸರಣಿಯಲ್ಲಿ ಆಡಲಿದ್ದಾರೆ, ಮತ್ತು ಒಡಿಐ ನಾಯಕ ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯಾ ಈಗ ಗಾಯದಿಂದಾಗಿ ಹೊರಗುಳಿದಿದ್ದು, ಏಷ್ಯಾ ಕಪ್ 2025ರಲ್ಲಿ ಆಡಿದ ಎಲ್ಲಾ ಆಟಗಾರರು ಟ್ವೆಂಟಿ-20 ತಂಡದಲ್ಲಿದ್ದಾರೆ. ಹಾರ್ದಿಕ್‌ರ ಬದಲಿಗೆ, ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಏಕದಿನ ಸರಣಿ ವೇಳೆ ಗಾಯಗೊಂಡಿರುವ ರೆಡ್ಡಿ ಮೊದಲ ಪಂದ್ಯವನ್ನು ತಪ್ಪಿಸಬಹುದು.

ಆಸ್ಟ್ರೇಲಿಯಾ ತಂಡದ ಸಂಯೋಜನೆ

ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಮಾರ್ಷ್ ನಾಯಕತ್ವದಲ್ಲೇ ಆಡಲಿದ್ದು, ಅವರ ತಂಡದಲ್ಲಿ ಟ್ರಾವಿಸ್ ಹೆಡ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ, ನೇಥನ್ ಎಲ್ಲಿಸ್ ಮತ್ತು ಕ್ಸಾವಿಯರ್ ಬಾರ್ಟ್‌ಲೆಟ್‌ರಂತಹ ಆಟಗಾರರು ಸೇರಿದ್ದಾರೆ. ಒಡಿಐ ಸರಣಿಯಲ್ಲಿ ಆಸ್ಟ್ರೇಲಿಯಾದ ಅತ್ಯಂತ ಉತ್ತಮ ಬೌಲರ್ ಜೋಶ್ ಹೇಜಲ್‌ವುಡ್ ಮೊದಲ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಆಡಲಿದ್ದಾರೆ, ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕಡೆಯ ಮೂರು ಪಂದ್ಯಗಳಲ್ಲಿ ಆಯ್ಕೆಗೆ ಲಭ್ಯರಿದ್ದಾರೆ.

ಹೆಡ್​ ಟು ಹೆಡ್ ದಾಖಲೆ

ಕಳೆದ 18 ವರ್ಷಗಳಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 20 ಓವರ್‌ಗಳ ಕ್ರಿಕೆಟ್‌ನಲ್ಲಿ 32 ಬಾರಿ ಎದುರಾಗಿದ್ದು, ಭಾರತ 20 ಪಂದ್ಯಗಳನ್ನ ಗೆದ್ದಿದ್ದರೆ, ಆಸ್ಟ್ರೇಲಿಯಾ 11ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾದಲ್ಲೂ, ಭಾರತ 12 ಟ್ವೆಂಟಿ-20 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಟಿ20 ದಾಖಲೆಗಳು ಹೀಗಿವೆ

ಅತಿ ಹೆಚ್ಚು ಗೆಲುವು: ಭಾರತ (32 ಟ್ವೆಂಟಿ-20ರಲ್ಲಿ 20 ಗೆಲುವುಗಳು).

ಅತಿ ಹೆಚ್ಚು ಸ್ಕೋರ್: ತಿರುವನಂತಪುರಂನಲ್ಲಿ ನವೆಂಬರ್ 26, 2023ರಂದು ಭಾರತದ 235/4 (20 ಓವರ್‌ಗಳು).

ಅತಿ ಕಡಿಮೆ ಸ್ಕೋರ್: ಭಾರತ 74/10, ಮೆಲ್ಬರ್ನ್‌ನಲ್ಲಿ ಫೆಬ್ರುವರಿ 1, 2008 (17.3 ಓವರ್‌ಗಳು).

ಅತಿ ದೊಡ್ಡ ಗೆಲುವು (ರನ್‌ಗಳಿಂದ): ಮಾರ್ಚ್ 30, 2014ರಂದು ಮಿರ್ಪುರ್‌ನಲ್ಲಿ ಭಾರತಕ್ಕೆ 73 ರನ್‌ಗಳಿಂದ ಗೆಲುವು.

ಅತಿ ದೊಡ್ಡ ಗೆಲುವು (ವಿಕೆಟ್‌ಗಳಿಂದ): ಸೆಪ್ಟೆಂಬರ್ 28, 2012ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ (141 ರನ್ ಗುರಿ) ಭಾರತವನ್ನು ಮಣಿಸಿತ್ತು.

ಅತಿ ಸಣ್ಣ ಗೆಲುವು (ರನ್‌ಗಳಿಂದ): ನವೆಂಬರ್ 21, 2018ರಂದು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ 4 ರನ್‌ಗಳಿಂದ ಭಾರತವನ್ನು ಮಣಿಸಿತ್ತು.

ಅತಿ ಸಣ್ಣ ಗೆಲುವು (ವಿಕೆಟ್‌ಗಳಿಂದ): ನವೆಂಬರ್ 23, 2023ರಂದು ವಿಶಾಖಪಟ್ಟಣಂನಲ್ಲಿ ಭಾರತ 2 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು.

ಅತಿ ಹೆಚ್ಚು ರನ್‌ಗಳು: ಭಾರತದ ರನ್​ಮಷಿನ್ ವಿರಾಟ್ ಕೊಹ್ಲಿ 23 ಪಂದ್ಯಗಳಲ್ಲಿ 794 ರನ್‌ಗಳಿಸಿ ಟಾಪ್ ಸ್ಕೋರರ್ ಆಗಿದ್ದಾರೆ. ಆದರೆ ಪ್ರಸ್ತುತ ಅವರು ಟಿ20ಯಿಂದ ನಿವೃತ್ತಿಯಾಗಿದ್ದಾರೆ.

ಅತಿ ಹೆಚ್ಚು ಸ್ಕೋರ್: ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಜನವರಿ 31, 2016ರಂದು ಸಿಡ್ನಿಯಲ್ಲಿ 71 ಎಸೆತಕ್ಕೆ 121* ರನ್‌ಗಳಿಸಿರುವುದು ದಾಖಲೆಯಾಗಿದೆ.

ಗರಿಷ್ಠ ಸರಾಸರಿ (ಕನಿಷ್ಠ 5 ಇನ್ನಿಂಗ್ಸ್): ಭಾರತದ ಹಾರ್ದಿಕ್ ಪಾಂಡ್ಯಾ 14 ಟ್ವೆಂಟಿ-20ರಲ್ಲಿ 235 ರನ್‌ಗಳಿಸಿದ್ದು, ಅವರ ಸರಾಸರಿ 58.75.

ಅತಿ ಹೆಚ್ಚು ಸ್ಟ್ರೈಕ್ ರೇಟ್ (ಕನಿಷ್ಠ 100 ಎಸೆತಗಳು): ಭಾರತದ ಸುರ್ಯಕುಮಾರ್ ಯಾದವ್ 9 ಟಿ20 ಪಂದ್ಯಗಳಲ್ಲಿ 290 ರನ್‌ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್ 172.61.

ಅತಿ ಹೆಚ್ಚು ಶತಕಗಳು: ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 22 ಟ್ವೆಂಟಿ-20ಯಲ್ಲಿ 2 ಶತಕ ಸಿಡಿಸಿದ್ದಾರೆ

ಅತಿ ಹೆಚ್ಚು ಅರ್ಧ ಶತಕಗಳು: ಭಾರತದ ವಿರಾಟ್ ಕೊಹ್ಲಿ 23 ಟಿ20ರಲ್ಲಿ 8 ಅರ್ಧ ಶತಕ ಸಿಡಿಸಿದ್ದಾರೆ.

ಅತಿ ಹೆಚ್ಚು ಡಕ್‌ಗಳು: ಆಸ್ಟ್ರೇಲಿಯಾದ ಆರನ್ ಫಿಂಚ್ 18 ಟ್ವೆಂಟಿ-20ರಲ್ಲಿ 3 ಡಕ್‌ ಔಟ್ ಆಗಿದ್ದಾರೆ.

ಅತಿ ಹೆಚ್ಚು ಸಿಕ್ಸರ್‌ಗಳು: ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 22 ಟ್ವೆಂಟಿ-20 ಪಂದ್ಯಗಳಿಂದ 38 ಸಿಕ್ಸರ್‌ ಸಿಡಿಸಿದ್ದಾರೆ.

ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು: ಗ್ಲೆನ್ ಮ್ಯಾಕ್ಸ್‌ವೆಲ್ ಬೆಂಗಳೂರಿನಲ್ಲಿ ಫೆಬ್ರುವರಿ 27, 2019ರಂದು 55 ಎಸೆತಕ್ಕೆ 113 ರನ್‌ಗಳಿಸಿದ್ದರು. ಇದರಲ್ಲಿ 9 ಸಿಕ್ಸರ್‌ಗಳಿದ್ದವು.

ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳು: ಭಾರತ ಪ್ರವಾಸದಲ್ಲಿ 2023ರಲ್ಲಿ ಭಾರತದ ಋತುರಾಜ್ ಗಾಯಕ್ವಾಡ್ 5 ಪಂದ್ಯಗಳಲ್ಲಿ 223 ರನ್‌ಗಳಿಸಿದ್ದರು.

ಅತಿ ಹೆಚ್ಚು ವಿಕೆಟ್‌ಗಳು: ಭಾರತದ ಜಸ್‌ಪ್ರೀತ್ ಬುಮ್ರಾ 14 ಟಿ20 ಪಂದ್ಯಗಳಲ್ಲಿ 17 ವಿಕೆಟ್‌ ಪಡೆದಿದ್ದಾರೆ.

ಅತ್ಯುತ್ತಮ ಬೌಲಿಂಗ್ ರಿಕಾರ್ಡ್: ಭಾರತದ ರವಿಚಂದ್ರನ್ ಅಶ್ವಿನ್ ಮಾರ್ಚ್ 30, 2014ರಂದು ಮಿರ್ಪುರ್‌ನಲ್ಲಿ 3.2 ಓವರ್‌ಗಳಲ್ಲಿ 11/4 ವಿಕೆಟ್ ಪಡೆದಿರುವುದು ಬೆಸ್ಟ್ ಬೌಲಿಂಗ್ ಆಗಿದೆ.

ಅತಿ ಹೆಚ್ಚು 4 ವಿಕೆಟ್ ಹಾಲ್‌ಗಳು: ಭಾರತದ ಆರ್. ಅಶ್ವಿನ್, ಕೃಣಾಲ್ ಪಾಂಡ್ಯಾ ಮತ್ತು ಆಸ್ಟ್ರೇಲಿಯಾದ ಜೇಸನ್ ಬೆರೆಂಡಾರ್ಫ್ ತಲಾ 1 ಬಾರಿ ನಾಲ್ಕು ವಿಕೆಟ್ ಹಾಲ್ ಪಡೆದಿದ್ದಾರೆ.

ಒಂದು ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು: 2023ರಲ್ಲಿ ಭಾರತ ಪ್ರವಾಸದಲ್ಲಿ ಭಾರತದ ರವಿ ಬಿಷ್ಣೋಯ್ 5 ಪಂದ್ಯಗಳಲ್ಲಿ 9 ವಿಕೆಟ್‌ ಪಡೆದು ದಾಖಲೆ ನಿರ್ಮಿಸಿದ್ದರು.

ಅತಿ ಹೆಚ್ಚು ಡಿಸ್ಮಿಸಾಲ್​: ಭಾರತದ ಎಂ.ಎಸ್. ಧೋನಿ 17 ಟ್ವೆಂಟಿ-20ರಲ್ಲಿ 15 (10 ಕ್ಯಾಚ್‌ಗಳು, 5 ಸ್ಟಂಪಿಂಗ್‌ಗಳು) ಬ್ಯಾಟರ್​ಗಳನ್ನ ಪೆವಿಲಿಯನ್​ಗಟ್ಟಿ ಟಾಪ್ ವಿಕೆಟ್ ಕೀಪರ್ ಆಗಿದ್ದಾರೆ.

ಅತಿ ಹೆಚ್ಚು ಕ್ಯಾಚ್‌ಗಳು: ಭಾರತದ ವಿರಾಟ್ ಕೊಹ್ಲಿ 23 ಟ್ವೆಂಟಿ-20ರಲ್ಲಿ 10 ಕ್ಯಾಚ್‌ಗಳನ್ನ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಅತ್ಯುತ್ತಮ ಜೊತೆಯಾಟ: 2023ರ ನವೆಂಬರ್ 28ರಂದು ಗುವಾಹಟಿಯಲ್ಲಿ ಭಾರತದ ತಿಲಕ್ ವರ್ಮಾ ಮತ್ತು ಋತುರಾಜ್ ಗೈಕ್ವಾಡ್ ನಡುವಿನ 4ನೇ ವಿಕೆಟ್‌ಗೆ 141 ರನ್‌ಗಳ ಜೊತೆಯಾಟ.

ಅತಿ ಹೆಚ್ಚು ಪಂದ್ಯಗಳು: ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ 23 ಪಂದ್ಯಗಳನ್ನಾಡಿದ್ದಾರೆ.

ನಾಯಕರಾಗಿ ಅತಿ ಹೆಚ್ಚು ಗೆಲುವು: ಭಾರತದ ಎಂ.ಎಸ್. ಧೋನಿ 13 ಟ್ವೆಂಟಿ-20ರಲ್ಲಿ 9 ಗೆಲುವು ಸಾಧಿಸಿ ಅತ್ಯುತ್ತಮ ನಾಯಕರಾಗಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs AUS T20I: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಯುವ ಭಾರತ ಸಜ್ಜು! ಹೆಚ್ಚು ಗೆಲುವು, ರನ್ಸ್, ವಿಕೆಟ್, ಶತಕ ಸೇರಿ A-Z ದಾಖಲೆ ಕುರಿತು ಮಾಹಿತಿ ಇಲ್ಲಿದೆ