Last Updated:
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಈಗಾಗಲೇ ಶುಭ್ಮನ್ ಗಿಲ್ ನಾಯತ್ವದ ತಂಡ ಇಂಗ್ಲೆಂಡ್ಗೆ ತೆರಳಿ ಕಠಿಣ ಅಭ್ಯಾಸ ಆರಂಭಿಸಿದೆ.
ಜೂನ್ 20ರಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಈಗಾಗಲೇ ಶುಭ್ಮನ್ ಗಿಲ್ ನಾಯತ್ವದ ತಂಡ ಇಂಗ್ಲೆಂಡ್ಗೆ ತೆರಳಿ ಕಠಿಣ ಅಭ್ಯಾಸ ಆರಂಭಿಸಿದೆ. ಸದ್ಯ, ಟೀಂ ಇಂಡಿಯಾಗೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಅಭ್ಯಾಸದ ವೇಳೆ ಭಾರತ ತಂಡದ ಉಪನಾಯಕ ರಿಷಭ್ ಪಂತ್ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಂತ್ ಕೈಗೆ ಕಾಯ
ಭಾರತ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅಭ್ಯಾಸದ ಸಮಯದಲ್ಲಿ ಗಾಯಗೊಂಡಿದ್ದಾರೆ. ಸ್ಟಾರ್ ಬ್ಯಾಟ್ಸ್ಮನ್ ಎಡಗೈಗೆ ಚೆಂಡು ತಗುಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್ 20 ರಂದು ನಡೆಯಲಿದೆ. ಅದಕ್ಕೂ ಮೊದಲು, ಪಂತ್ ಅವರ ಗಾಯವು ಭಾರತ ತಂಡದಲ್ಲಿ ಆತಂಕ ಉಂಟುಮಾಡಿದೆ.
ಮೂಲಗಳ ಪ್ರಕಾರ, ಅಭ್ಯಾಸದ ಸಮಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಂತ್ ಅವರ ಎಡ ಮೊಣಕೈ ಕೆಳಗೆ ಚೆಂಡು ತಗುಲಿದೆ. ಅವರು ಗಾಯದಿಂದ ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ತಕ್ಷಣ, ಭಾರತೀಯ ತಂಡದ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಲು ಮುಂದೆ ಬಂದರು. ಅವರ ಕೈಗೆ ಐಸ್ ಪ್ಯಾಕ್ ಹಚ್ಚಲಾಯಿತು ಮತ್ತು ಗಾಯಗೊಂಡ ಪ್ರದೇಶವನ್ನು ಟೇಪ್ ಮಾಡಲಾಗಿದೆ. ಅದರ ನಂತರ ಅವರು ಬ್ಯಾಟಿಂಗ್ ಮಾಡದಿದ್ದರೂ, ದಿನವಿಡೀ ಮೈದಾನದಲ್ಲಿಯೇ ಕಳೆದಿದ್ದಾರೆ.
ಸಣ್ಣ ಪ್ರಮಾಣದ ಗಾಯ ಎಂದು ಸ್ಪಷ್ಟಪಡಿಸಿದ ವೈದ್ಯರು
ಪಂತ್ ಅವರ ಕೈಗೆ ಬ್ಯಾಂಡೇಜ್ ಹಾಕಲಾಗಿತ್ತು ಮತ್ತು ಅವರು ಒಂದು ಗಂಟೆ ವಿಶ್ರಾಂತಿ ಪಡೆಯುತ್ತಿದ್ದರು. ನಂತರ ಪಂತ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ತಂಡದ ವೈದ್ಯರು ಪಂತ್ ಅವರಿಗೆ ಯಾವುದೇ ದೊಡ್ಡ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ. ಗಾಯವನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸಲಾಗಿಲ್ಲವಾದರೂ, ಮೊದಲ ಟೆಸ್ಟ್ಗೂ ಮುನ್ನ ಅವರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಪಂತ್ ಫಿಟ್ ಆಗಿಲ್ಲದಿದ್ದರೆ, ಧ್ರುವ್ ಜುರೆಲ್ಗೆ ಬ್ಯಾಕಪ್ ವಿಕೆಟ್ಕೀಪರ್ ಆಗಿ ಅವಕಾಶ ನೀಡುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧ ಪ್ರಕಟವಾದ ಭಾರತ ಟೆಸ್ಟ್ ತಂಡ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ಶಿಂಗ್ಟನ್ ಜುರೆಲ್ (ವಿಕೆಟ್ಸುಲ್ಕೆ ಜುರೆಲ್), ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.
June 09, 2025 5:21 PM IST