IND vs ENG: 11 ರನ್ಸ್ ಅಂತರಲ್ಲಿ ಭಾರತದ 4 ವಿಕೆಟ್ ಪತನ! ಮೊದಲ ಇನ್ನಿಂಗ್ಸ್​ ಟೈ; ರೋಚಕ ಘಟ್ಟದಲ್ಲಿ 3ನೇ ಟೆಸ್ಟ್ | IND vs ENG India Finish with a Flourish Scores Level with England at 387-All Out

IND vs ENG: 11 ರನ್ಸ್ ಅಂತರಲ್ಲಿ ಭಾರತದ 4 ವಿಕೆಟ್ ಪತನ! ಮೊದಲ ಇನ್ನಿಂಗ್ಸ್​ ಟೈ; ರೋಚಕ ಘಟ್ಟದಲ್ಲಿ 3ನೇ ಟೆಸ್ಟ್ | IND vs ENG India Finish with a Flourish Scores Level with England at 387-All Out

Last Updated:

ಭಾರತ-ಇಂಗ್ಲೆಂಡ್ 3ನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳು 387 ರನ್‌ಗಳಿಗೆ ಆಲೌಟ್. ಭಾರತದ ಪರ ರಾಹುಲ್ 100, ಪಂತ್ 74, ಜಡೇಜಾ 72 ರನ್‌ಗಳಿಸಿದರು. ಇಂಗ್ಲೆಂಡ್ ಪರ ಜೋ ರೂಟ್ 104 ರನ್‌ಗಳಿಸಿದರು.

ಕೆಎಲ್ ರಾಹುಲ್ಕೆಎಲ್ ರಾಹುಲ್
ಕೆಎಲ್ ರಾಹುಲ್

ಭಾರತ ಹಾಗೂ ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ ಪಂದ್ಯ ರೋಚಕ ಹಂತ ತಲುಪಿದೆ. ಮೊದಲ ಮೂರು ದಿನಗಳಲ್ಲಿ ಎರಡೂ ತಂಡಗಳು ಬ್ಯಾಟಿಂಗ್ ಮಾಡಿದ್ದು, ಯಾವುದೇ ತಂಡಕ್ಕೆ ಮುನ್ನಡೆ ದೊರೆತಿಲ್ಲ. ಅಂದರೆ ಎರಡೂ ತಂಡಗಳು ಒಂದೇ ಸ್ಕೋರ್​ಗೆ ಆಲೌಟ್ ಆಗಿವೆ. 2ನೇ ದಿನ 145/3 ರನ್​ಗಳಿಸಿದ್ದ ಟೀಮ್ ಇಂಡಿಯಾ, 3ನೇ ದಿನ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 387 ರನ್​ಗಳಿಸಿತು. ವಿಶೇಷವೆಂದರೆ ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ಕೂಡ 387ಕ್ಕೆ ಆಲೌಟ್ ಆಗಿತ್ತು. ಭಾರತದ ಪರ ಕನ್ನಡಿಗ ರಾಹುಲ್ 100 ರನ್​ಗಳಿಸಿ ಗರಿಷ್ಠ ಸ್ಕೋರರ್ ಆದರೆ, ರಿಷಭ್ ಪಂತ್ (74) ಹಾಗೂ ರವೀಂದ್ರ ಜಡೇಜಾ(72) ಅರ್ಧಶತಕ ಸಿಡಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ ಜೋ ರೂಟ್ (104) ಶತಕದ ನೆರವಿನಿಂದ 387 ರನ್​ಗಳಿಸಿತ್ತು. ಇದಕ್ಕೆ ಉತ್ತರವಾಗಿ 2ನೇ ದಿನ ಭಾರತ 3 ವಿಕೆಟ್ ಕಳೆದುಕೊಂಡು 145 ರನ್​ಗಳಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ ಅಜೇಯ 53 ರನ್​ಗಳಿಸಿದರೆ, ರಿಷಭ್ ಪಂತ್ ಅಜೇಯ 19 ರನ್​ಗಳಿಸಿ 3 ನೇದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದರು.

3ನೇ ದಿನ ಭಾರತ ತಂಡಕ್ಕೆ ಪಂತ್ ಹಾಗೂ ರಾಹುಲ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ 198 ಎಸೆತಗಳಲ್ಲಿ 141 ರನ್​ ಸೇರಿಸಿ ತಂಡದ ಮೊತ್ತವನ್ನ 250ರ ಸನಿಹ ತಂದು ಬೇರ್ಪಟ್ಟಿತ್ತು. ಇಂಗ್ಲೆಂಡ್ ಬೌಲರ್​ಗಳನ್ನ 33 ಓವರ್​ಗಳ ಕಾಲ ಕಾಡಿದ್ದ ಈ ಜೋಡಿ ಪಂತ್​ ರನ್ಔಟ್ ಮೂಲಕ ಅಂತ್ಯಗೊಂಡಿತು. ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ಇಲ್ಲದ ರನ್​ ಕದಿಯುವ ಯತ್ನದಲ್ಲಿ 112 ಎಸೆತಗಳಲ್ಲಿ 8 ಬೌಂಡರಿಮ 2 ಸಿಕ್ಸರ್​ ಸಹಿತ 74 ರನ್​ಗಳಿಸಿ ಅದ್ಭುತವಾಗಿ ಆಡುತ್ತಿದ್ದ ಪಂತ್ ರನ್​ಔಟ್ ಆಗಿ ಪೆವಲಿಯನ್ ಸೇರಿಕೊಂಡರು.

ಇದಾ 6 ರನ್​ ಅಂತರದಲ್ಲಿ ಶತಕ ಪೂರ್ಣಗೊಳಿಸಿದ ಅದೇ ಓವರ್​ನಲ್ಲಿ ಕೆ ಎಲ್ ರಾಹುಲ್ ಶೋಯಭ್ ಬಶೀರ್​ ಬೌಲಿಂಗ್​​ನಲ್ಲಿ ಹ್ಯಾರಿ ಬ್ರೂಕ್​​ಗೆ ಕ್ಯಾಚ್ ನೀಡಿ ಔಟ್ ಆದರು. ಅವರು 177 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 100 ರನ್​ಗಳಿಸಿದರು.