ಯುದ್ಧದಲ್ಲೇ ಆಗ್ಲಿ, ಅಭಿವೃದ್ಧಿಯಲ್ಲೇ ಆಗ್ಲಿ, ಅಷ್ಟೇ ಏಕೆ ಕ್ರೀಡೆಯಲ್ಲೇ ಆಗ್ಲಿ, ನಾವು ನಿಮಗಿಂತ ಸಾವಿರ ಕೈ ಮೇಲೆ ಅಂತ ಪಾಕಿಸ್ತಾನಕ್ಕೆ ಭಾರತ ಮತ್ತೊಮ್ಮೆ ತೋರಿಸಿಕೊಟ್ಟಿದೆ. 2025ರ ಏಷ್ಯಾ ಕಪ್ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಭರ್ಜರಿ 6 ವಿಕೆಟ್‌ಗಳ ಗೆಲುವು ಸಾಧಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಮೂಲಕ, ಫೈನಲ್‌ಗೇರುವ ಹಾದಿಯನ್ನು ಸುಗಮ ಮಾಡಿಕೊಂಡಿದೆ.