Inspirational Story: ಅಪ್ಪ ಅಂದ್ರೆ ಆಕಾಶ ಅನ್ನೋದು ಸುಳ್ಳಲ್ಲ! ಮಗನಿಗಾಗಿ ತಂದೆಯ ಸಾಹಸಗಾಥೆ ನೋಡಿ…! | Madhav Saripalla runs over 100 marathons at age 68 | ದಕ್ಷಿಣ ಕನ್ನಡ

Inspirational Story: ಅಪ್ಪ ಅಂದ್ರೆ ಆಕಾಶ ಅನ್ನೋದು ಸುಳ್ಳಲ್ಲ! ಮಗನಿಗಾಗಿ ತಂದೆಯ ಸಾಹಸಗಾಥೆ ನೋಡಿ…! | Madhav Saripalla runs over 100 marathons at age 68 | ದಕ್ಷಿಣ ಕನ್ನಡ

Last Updated:

ಮಾಧವ ಸರಿಪಳ್ಳ 68ರ ವಯಸ್ಸಿನಲ್ಲಿ ಮ್ಯಾರಥಾನ್ ಓಟಗಳಲ್ಲಿ 100ಕ್ಕೂ ಹೆಚ್ಚು ಬಾರಿ ಭಾಗವಹಿಸಿ ಪುತ್ರ ಧನರಾಜ್ ಸರಿಪಳ್ಳನ ಹೆಸರಿನಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರು ಮ್ಯಾರಥಾನ್ 2025ಕ್ಕೆ ಸಜ್ಜಾಗಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಮಕ್ಕಳಿಗಾಗಿ ಅಪ್ಪ ಎಷ್ಟೆಲ್ಲಾ ತ್ಯಾಗಗಳನ್ನು (Sacrifice) ಮಾಡುತ್ತಾನೆ! ಅಪ್ಪ ಅಂದ್ರೆ ಆಕಾಶ, ಅಪ್ಪನ ಶ್ರಮವೇ ನಮ್ಮ ಸಾಧನೆಗೆ (Achievement) ಮೂಲ ಎಂದು ಗತಕಾಲದಿಂದ ಭಾರತೀಯ ಸಂಸ್ಕೃತಿ ಹೇಳಿಕೊಂಡು ಬರುತ್ತಿದೆ. ಅದಕ್ಕೆ ತಕ್ಕ ಹಾಗೆ ಕುಡ್ಲದಲ್ಲಿ ಒಂದು ಘಟನೆ ನಡೆದಿದೆ. ಹೀಗೆ ರನ್ನಿಂಗ್ ಮಾಡುತ್ತಿರುವ ಆಟೋ ಚಾಲಕ ತನ್ನ ವಿಶೇಷ ಚೇತನ ಪುತ್ರ ಕ್ರೀಡೆಯಲ್ಲಿ (Sport) ಸಾಧನೆ ಮಾಡಬೇಕೆಂಬ ಹಂಬಲವಿದ್ದವರು. ಅದು ಸಾಧ್ಯವಾಗದಿದ್ದಾಗ ಎದೆಗುಂದದೆ ತಾವೇ ಮ್ಯಾರಥಾನ್ ಓಟದಲ್ಲಿ (Run) ಸಾಧನೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ವಯಸ್ಸಾದರೂ ತಗ್ಗದ ಉತ್ಸಾಹ

ಹೆಸರು ಮಾಧವ ಸರಿಪಳ್ಳ. ವಯಸ್ಸು 68. ಆದರೂ ಸಾಧನೆ ಮಾಡಬೇಕೆಂಬ ಹುಮ್ಮಸ್ಸು. ಅದಕ್ಕಾಗಿ ದಿನವೂ 25 ಕಿ.ಮೀ.ನಷ್ಟು ಓಡಿ ಮ್ಯಾರಥಾನ್‌ ಓಟಕ್ಕೆ ಸಜ್ಜಾಗುತ್ತಿರುತ್ತಾರೆ. ಕಳೆದ 14 ವರ್ಷಗಳಲ್ಲಿ ತನ್ನ ವಿಶೇಷ ಚೇತನ ಪುತ್ರನ ಹೆಸರಿನಲ್ಲಿ ನೂರಕ್ಕೂ ಅಧಿಕ ಮ್ಯಾರಥನ್ ಓಟದಲ್ಲಿ ಭಾಗಿಯಾಗಿದ್ದಾರೆ.

ರಿಕ್ಷಾ ಚಾಲಕ ಮ್ಯಾರಥಾನ್‌ ಓಟಗಾರನಾಗಿದ್ದೇ ಸ್ವಾರಸ್ಯ!

1985ರಲ್ಲಿ ಮಲ್ಲಿಕಟ್ಟೆ ರಿಕ್ಷಾ ಚಾಲನೆ ಆರಂಭಿಸಿದ ಇವರು ಈಗಲೂ ಆಟೋ ಓಡಿಸುತ್ತಾರೆ. ಪುತ್ರ ಧನರಾಜ್ ಸರಿಪಳ್ಳ, ವಿಶೇಷ ಚೇತನರಾಗಿದ್ದರೂ ಆತನನ್ನು ಕ್ರೀಡೆಯಲ್ಲಿ ಪಳಗಿಸಿದ್ದರು. ಮೆಡಲ್ ವಿನ್ನರ್ ಸ್ಕೇಟರ್ ಆಗಿದ್ದ ಧನರಾಜ್ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡು ಕ್ರೀಡೆಯನ್ನು ತೊರೆಯಬೇಕಾಯಿತು. ಸಾಧನೆಗೆ ತುಡಿಯುತ್ತಿದ್ದ ಮಾಧವ ಸರಿಪಳ್ಳ ಅಂದಿನಿಂದ ಆತನ ಹೆಸರಿನಲ್ಲಿ ಮ್ಯಾರಥಾನ್ ಓಡಲು ಆರಂಭಿಸಿದರು.

ಕಳೆದ 14 ವರ್ಷದಲ್ಲಿ ಮ್ಯಾರಥಾನ್‌ ಶತಕ!

ಕಳೆದ 14 ವರ್ಷಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಕೇರಳ, ತಮಿಳುನಾಡುಗಳಲ್ಲಿ ನಡೆದ 100ಕ್ಕೂ ಅಧಿಕ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಅವರ ಮೊದಲ 21 ಕಿ.ಮೀ. ಮ್ಯಾರಥಾನ್ ಓಟ 2011ರಲ್ಲಿ ಮಂಗಳೂರು ಎಡಪದವಿನಲ್ಲಿ ನಡೆಯಿತು. ಈಗ ಅವರು ‘ಮಂಗಳೂರು ಮ್ಯಾರಥಾನ್ 2025’ಕ್ಕೆ ತಯಾರಿ ನಡೆಸುತ್ತಿದ್ದಾರೆ. ನವೆಂಬರ್ 9ರಂದು 32 ಕಿ.ಮೀ. ಓಟಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.

ಮಾಧವರ ಸಾಧನೆ ಮಹಾನ್‌ ಎನ್ನೋದು ಸತ್ಯ

ಇದನ್ನೂ ಓದಿ: Fishermen Rescue: ಸಂಕಷ್ಟದಲ್ಲಿದ್ದ ಮೀನುಗಾರರಿಗೆ ಸಹಾಯ, 31 ಮಂದಿ ರಕ್ಷಣೆ ಮಾಡಿದವರಿಗೆ ಧನ್ಯವಾದ!

ಇವರ ಪುತ್ರಿಯೂ ವಿಶೇಷ ಚೇತನರಾಗಿದ್ದು, ಆಕೆಯ ವಿವಾಹಕ್ಕಾಗಿ ಆಟೋ ಮಾರಾಟ ಮಾಡಬೇಕಾಯಿತು. 2007ರಲ್ಲಿ ಮನೆಯ ಒಂದು ಪಾರ್ಶ್ವ ಕುಸಿಯಿತು. 2017ರಲ್ಲಿ ಕೊಡುಗೈ ದಾನಿಗಳ ಸಹಕಾರದಿಂದ ಮನೆ ಮರುನಿರ್ಮಾಣ ಮಾಡಿದ್ದಾರೆ. ಈಗ ಇಲೆಕ್ಟ್ರಿಕ್ ಆಟೋ ಚಲಾಯಿಸಿ ದಿನಕ್ಕೆ 800 ರೂ. ಸಂಪಾದಿಸುತ್ತಾರೆ. ಇಂತಹ ಕಷ್ಟಗಳ ನಡುವೆಯೂ ಅವರ ಸಾಧನೆ ಮುಸುಕಾಗಲಿಲ್ಲ. ಯೆನೆಪೋಯ ಆಸ್ಪತ್ರೆಯ ಪ್ರೊಫೆಸರ್ ಡಾ. ಅನುಪಮಾ ರಾವ್ ಮತ್ತು ಎಜೆ ಆಸ್ಪತ್ರೆಯ ಪ್ರೊಪೆಸರ್ ಡಾ. ರಾಘವೇಂದ್ರ ರಾವ್ ಇವರ ಮ್ಯಾರಥನ್ ಓಟಕ್ಕೆ ಸಹಕಾರ ನೀಡುತ್ತಾರೆ. ಇವರಿಬ್ಬರಿಂದ ತಾನು ಮ್ಯಾರಥಾನ್‌ನಲ್ಲಿ ಸಾಧನೆ ಸಾಧ್ಯವಾಯಿತು ಎಂದು ಮಾಧವ ಸರಿಪಳ್ಳ ನೆನಪಿಸುತ್ತಾರೆ.