Inspirational Story: ಬಡತನದ ಹೊರತಾಗಿಯೂ ಗಿಡಗಳಿಗಾಗಿ ಬದುಕುತ್ತಿರುವ ಪರಿಸರ ಪ್ರೇಮಿ, ಅಣ್ಣಾದೊರೈ ಎಂಬ ಅಪರೂಪ! | Mangaluru Annadorai green campaign boosts strength | ದಕ್ಷಿಣ ಕನ್ನಡ

Inspirational Story: ಬಡತನದ ಹೊರತಾಗಿಯೂ ಗಿಡಗಳಿಗಾಗಿ ಬದುಕುತ್ತಿರುವ ಪರಿಸರ ಪ್ರೇಮಿ, ಅಣ್ಣಾದೊರೈ ಎಂಬ ಅಪರೂಪ! | Mangaluru Annadorai green campaign boosts strength | ದಕ್ಷಿಣ ಕನ್ನಡ

Last Updated:

ಅಣ್ಣಾದೊರೈ, ಚಿಕ್ಕಮಗಳೂರಿನವರು, ಮಂಗಳೂರು ಬೆಂದೂರುವೆಲ್ ಜಂಕ್ಷನ್‌ನಲ್ಲಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಸ್ವಂತ ಖರ್ಚಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ನಗರ ಸ್ಮಾರ್ಟ್ (Smart City) ಆಗಬೇಕು, ಜೊತೆಗೆ ಹಸಿರಾಗಬೇಕು ಎಂದು ಹಾರೈಸುವ ಮನಗಳೆಷ್ಟೋ ಇವೆ. ಆದರೆ ಅದಕ್ಕಾಗಿ ಶ್ರಮ (Effort) ಪಡುವವರ ಸಂಖ್ಯೆ ಮಾತ್ರ ಸೀಮಿತ. ಹಾಗಿರುವಾಗ ಮಂಗಳೂರು ನಗರದಲ್ಲಿ ಚಪ್ಪಲಿ ಹೊಲಿಯುವ ಹಿರಿಯರೊಬ್ಬರು ಮಾತ್ರ ತಮ್ಮ ಹತ್ತಿರದ ಪರಿಸರವನ್ನು ಹಸಿರುಮಯವಾಗಿಸಲು ತಮ್ಮ ಅಮೂಲ್ಯ ಸಮಯ (Precious Time) ನೀಡುತ್ತಿದ್ದಾರೆ. ಇವರು ಅಣ್ಣಾದೊರೈ, ಮೂಲತಃ ಚಿಕ್ಕಮಗಳೂರಿನವರು, ಆದರೆ 38 ವರ್ಷಗಳಿಂದ ಮಂಗಳೂರಿನಲ್ಲಿ (Manglore) ವಾಸಿಸಿಕೊಂಡು ಇಲ್ಲಿಯವರೇ ಆಗಿಬಿಟ್ಟಿದ್ದಾರೆ.

ಗಿಡಗಳೆಂದರೆ ಅಣ್ಣಾದೊರೈ ಅವರಿಗೆ ತುಂಬಾ ಪ್ರೀತಿ

ಗಿಡಗಳೆಂದರೆ ಅಣ್ಣಾದೊರೈ ಅವರಿಗೆ ಪ್ರೀತಿ. ಸದ್ಯ ಬೆಂದೂರುವೆಲ್ ಜಂಕ್ಷನ್‌ನ ಫುಟ್‌ಪಾತ್ ಬಳಿ ತಮ್ಮ ಚಪ್ಪಲಿ ಹೊಲಿಯುವ ಪುಟ್ಟ ಅಂಗಡಿ ಹೊಂದಿದ್ದಾರೆ. ಮರ ನೆಡುವ ಅಭಿಯಾನವೊಂದರ ಭಾಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಗಮನಿಸಿ ತಮ್ಮ ಅಕ್ಕಪಕ್ಕದ ಕಾಲುದಾರಿ ಮಧ್ಯೆಯೇ ಗಿಡ ನೆಡುವಂತೆ ಕೇಳಿಕೊಂಡರು.

ಗಿಡ ನೆಡುವ ಕಾರ್ಯಕ್ರಮದಿಂದ ಪ್ರೇರಣೆ

ಗಿಡ ನೆಡುವ ಕಾಯಕಕ್ಕೆ ತಮ್ಮ ಶ್ರಮವನ್ನೂ ನೀಡಿದರು. ಅಷ್ಟೇ ಅಲ್ಲ, ತಾನೇ ಅದಕ್ಕೆ ನೀರು ಹಾಕಿ ಪೋಷಿಸುವ ಭರವಸೆ ನೀಡಿದರು ಅಣ್ಣಾದೊರೈ. ಕಳೆದ ಐದಾರು ತಿಂಗಳ ಹಿಂದೆ ಗಿಡ ನೆಡಲಾಗಿದೆ, ಈಗ ಗಿಡಗಳು ಹಸಿರಾಗಿ ಚಿಗುರುತ್ತಿದೆ.

ಹತ್ತು, ಹಲವು ವಿಧದ ಗಿಡಗಳ ಪೋಷಣೆ

ರೆಂಜೆ, ಇಜಿನ್ ಮುಂತಾದ ವಿವಿಧ ತಳಿಗಳ ಹತ್ತರಷ್ಟು ಗಿಡಗಳನ್ನು ಇವರ ಅಂಗಡಿಯ ಅಕ್ಕಪಕ್ಕದಲ್ಲಿ ನೆಟ್ಟು, ಅದಕ್ಕೆ ಭದ್ರವಾದ ಬೇಲಿಯನ್ನೂ ಹಾಕಲಾಗಿದೆ. ಆದರೂ ಕೆಲವು ಕಿಡಿಗೇಡಿಗಳು ಗಿಡಗಳನ್ನು ಕಿತ್ತೆಸೆದಿದ್ದರಂತೆ, ಅಷ್ಟಾದರೂ ಮತ್ತೆ ಅಲ್ಲೇ ಗಿಡ ನೆಟ್ಟು ಸಾಕುತ್ತಿದ್ದಾರೆ  ಅಣ್ಣಾದೊರೈ.

ಸ್ವಂತ ಖರ್ಚಿನಲ್ಲಿ ಗಿಡಗಳ ಪೋಷಣೆ