IPL 2025: ಈ ತಂಡದಲ್ಲಿರುವವರೆಲ್ಲಾ ಮ್ಯಾಚ್​ ವಿನ್ನರ್ಸ್​, ಖಂಡಿತ ಟ್ರೋಫಿ ಗೆಲ್ತಾರೆ! ಹರ್ಭಜನ್ ಭವಿಷ್ಯ | Harbhajan Singh Hails Mumbai indians as top contenders to win in IPL 2025

IPL 2025: ಈ ತಂಡದಲ್ಲಿರುವವರೆಲ್ಲಾ ಮ್ಯಾಚ್​ ವಿನ್ನರ್ಸ್​, ಖಂಡಿತ ಟ್ರೋಫಿ ಗೆಲ್ತಾರೆ! ಹರ್ಭಜನ್ ಭವಿಷ್ಯ | Harbhajan Singh Hails Mumbai indians as top contenders to win in IPL 2025

Last Updated:

2025ರ ಐಪಿಎಲ್‌ನ ಮೊದಲಾರ್ಧದಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟದಾಗಿ ಆಡಿತ್ತು. ಮುಂಬೈ ಆಡಿದ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿತು. ಅದಾದ ನಂತರ, ಅವರು ತಮ್ಮ ಕೊನೆಯ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಹರ್ಭಜನ್ ಸಿಂಗ್ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ಈ ಬಾರಿಯ ಐಪಿಎಲ್ ಟ್ರೋಫಿಯನ್ನು (IPL 2025) ಯಾವ ತಂಡ ಗೆಲ್ಲುತ್ತದೆ ಎಂಬುದರ ಕುರಿತು ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ (Mumbai Indians) ತಂಡ ಅತಿ ಹೆಚ್ಚು ಪಂದ್ಯ ಗೆದ್ದ ತಂಡವಾಗಿದ್ದು, ತಂಡದಲ್ಲಿರುವ ಪ್ರತಿಯೊಬ್ಬರೂ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ. 2025ರ ಐಪಿಎಲ್‌ನ ಮೊದಲಾರ್ಧದಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟದಾಗಿ ಆಡಿತ್ತು. ಮುಂಬೈ ಆಡಿದ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿತು. ಅದಾದ ನಂತರ, ಅವರು ತಮ್ಮ ಕೊನೆಯ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿ 14 ಅಂಕಗಳನ್ನ ಹೊಂದಿದೆ.

ಮುಂಬೈ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿರುವ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲೂ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಅಗ್ರಕ್ರಮಾಂಕದ ಬ್ಯಾಟರ್ಸ್ ಅದ್ಭುತ ಫಾರ್ಮ್​​ನಲ್ಲಿರುವುದರಿಂದ ತಂಡ ಮತ್ತೊಮ್ಮೆ ಚಾಂಪಿಯನ್ಸ್ ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ.

ಮುಂಬೈಗಿಂತ ಅರ್ಹ ತಂಡ ಯಾವುದು ಇಲ್ಲ

ರಾಜಸ್ಥಾನ್ ರಾಯಲ್ಸ್ ವಿರುದ್ಧ 100 ರನ್​ಗಳ ಬೃಹತ್ ಜಯ ಸಾಧಿಸಿದ ನಂತರ ಮಾತನಾಡಿದ ಹರ್ಭಜನ್ ಸಿಂಗ್, ಈ ವರ್ಷ ಮುಂಬೈ ಇಂಡಿಯನ್ಸ್ ಐಪಿಎಲ್ ಗೆಲ್ಲದಿದ್ದರೆ, ಬೇರೆ ಯಾವುದೇ ತಂಡಕ್ಕೂ ಐಪಿಎಲ್ ಗೆಲ್ಲುವ ಹಕ್ಕಿಲ್ಲ ಎಂದು ಹೇಳಿದರು. ಜಸ್ಪ್ರೀತ್ ಬುಮ್ರಾ ತಂಡದಲ್ಲಿದ್ದಾರೆ ಎಂದು ಈ ಮಾತನಾಡುತ್ತಿಲ್ಲ. ಬುಮ್ರಾ ಒಬ್ಬ ಶ್ರೇಷ್ಠ ಬೌಲರ್​, ಗೇಮ್ ಚೇಂಜರ್​, ಆದರೆ ತಂಡವು ಟ್ರೆಂಟ್ ಬೌಲ್ಟ್, ದೀಪಕ್ ಸಾಗರ್, ವಿಲ್ ಜ್ಯಾಕ್ಸ್, ಹಾರ್ದಿಕ್ ಪಾಂಡ್ಯ, ಕರ್ಣ್ ಶರ್ಮಾ ಮತ್ತು ಕಾರ್ಬಿನ್ ಜೋಶ್ ಅವರಂತಹ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಈ ವರ್ಷ ಟ್ರೋಫಿ ಗೆಲ್ಲುವ ತಂಡ ಅವರಲ್ಲಿದೆ, ಯಾವುದೇ ತಂಡ ಅವರನ್ನು ಸರಿಸಮ ನಿಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸತತ 6 ಪಂದ್ಯ ಗೆದ್ದ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ಆರನೇ ಬಾರಿಗೆ ಟ್ರೋಫಿ ಗೆಲ್ಲುವುದು ಖಚಿತ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಮುಂಬೈ ಆಡುವ XI ನಲ್ಲಿ 11 ಮ್ಯಾವ್​ ವಿನ್ನರ್​ಗಳಿದ್ದಾರೆ. ಅವರು ಐದು ಬಾರಿ ಟ್ರೋಫಿ ಗೆದ್ದಿದ್ದಾರೆ, ತಂಡದಲ್ಲಿ ವಿಶ್ವ ದರ್ಜೆಯ ಟಾಪ್ ಪ್ಲೇಯರ್​ಗಳಿದ್ದಾರೆ. ಮೂರು ಸಾಧಾರಣ ಐಪಿಎಲ್ ಋತುಗಳ ನಂತರ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿತ್ತು. 2015ರಲ್ಲಿ ಮೊದಲ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದಿದ್ದ ತಂಡ ಈ ವರ್ಷದಂತೆ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಚಾಂಪಿಯನ್ ಆಗಿತ್ತು. ಹಾಗಾಗಿ ಅಭಿಮಾನಿಗಳು, ಕ್ರಿಕೆಟ್ ತಜ್ಞರು ಕೂಡ ತಂಡ ಚಾಂಪಿಯನ್ ಆಗಲು ಅರ್ಹವಾಗಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.