Last Updated:
ಒಟ್ಟು 12 ಲೀಗ್ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್‌ಗಳು ಉಳಿದಿವೆ. ಮೂಲತಃ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್‌ಗೆ ಆತಿಥ್ಯ ವಹಿಸಬೇಕಿತ್ತು, ಆದರೆ ಕೋಲ್ಕತ್ತಾ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್‌ಗೆ ಸ್ಥಳವಾಗಿತ್ತು.
ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಗಡಿಯಾಚೆಗಿನ ಘರ್ಷಣೆಗಳ ನಂತರ, ಎರಡೂ ದೇಶಗಳು ಮೇ 10, 2025ರ ಸಂಜೆ 5 ಗಂಟೆಯಿಂದ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಮೂರು ಭಾಗಗಳಲ್ಲೂ ಗುಂಡಿನ ದಾಳಿ ಮತ್ತು ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಈ ಶಾಂತಿ ಒಪ್ಪಂದದಿಂದ ಐಪಿಎಲ್ 2025 ಮುಂದಿನ ವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಭಾರತೀಯ ಸೇನೆಯ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನ ಯಶಸ್ವಿಯಾಗಿ ನಡೆಸಿದೆ. ಆ ನಂತರ ಎರಡೂ ದೇಶಗಳ ನಡುವೆ ಯುದ್ಧ ತೀವ್ರವಾಗುವ ಸಾಧ್ಯತೆ ಇತ್ತು. ಈಗಾಗಲೇ ಭಾರತ ಪಾಕಿಸ್ತಾನದ ಪ್ರಮುಖ ನಗರಗಳಾದ ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿಯ ಮೇಲೆ ದಾಳಿ ಮಾಡಿ ಎಲ್ಲದ್ದಕ್ಕೂ ಸಿದ್ಧ ಎಂದು ತೋರಿಸಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ರಾಷ್ಟ್ರಗಳ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿ ತಕ್ಷಣದ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಗಡಿ ಉದ್ವಿಗ್ನತೆಯಿಂದ ಸ್ಥಗಿತವಾಗಿದ್ದ ಐಪಿಎಲ್
ಭಾರತ-ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ, ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಐಪಿಎಲ್ 2025 ಟೂರ್ನಮೆಂಟ್ ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿತ್ತು. ಪಂಜಾಬ್ ಕಿಂಗ್ಸ್ (PBKS) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ 58ನೇ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಕ್ಕೆ ರದ್ದಾಯಿತು. ಪ್ರೇಕ್ಷಕರನ್ನು ಸ್ಥಳವನ್ನು ಖಾಲಿ ಮಾಡಲು ಸೂಚಿಸಲಾಯಿತು, ಮತ್ತು ಎರಡೂ ತಂಡಗಳನ್ನು ಹೋಟೆಲ್‌ಗೆ ಕರೆದೊಯ್ಯಲಾಯಿತು.
ವಿಶೇಷ ವಂದೇ ಭಾರತ್ ರೈಲು ವ್ಯವಸ್ಥೆ
ಗಡಿ ಉದ್ವಿಗ್ನತೆಯಿಂದ ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ, ಬಿಸಿಸಿಐ ಆಟಗಾರರು ಮತ್ತು ಸಿಬ್ಬಂದಿಗಾಗಿ ವಂದೇ ಭಾರತ್ ರೈಲು ವ್ಯವಸ್ಥೆಯನ್ನು ತುರ್ತಾಗಿ ಏರ್ಪಡಿಸಿತ್ತು. ಇದರಿಂದ ಧರ್ಮಶಾಲಾದಿಂದ ನವದೆಹಲಿಗೆ ಸುರಕ್ಷಿತವಾಗಿ ಸ್ಥಳಾಂತರಗೊಳಿಸಲಾಗುತ್ತು. ಬಹುತೇಕ ವಿದೇಶೀ ಆಟಗಾರರು ಶನಿವಾರವೇ ಭಾರತವನ್ನು ತೊರೆದಿದ್ದಾರೆ. ಆದರೆ ಮುಂದಿನ ವಾರ ಐಪಿಎಲ್ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸ್ಫೊರ್ಟ್ ತಕ್ ವರದಿ ಮಾಡಿದೆ.
ಐಪಿಎಲ್‌ಗೆ ಹೊಸ ಯೋಜನೆ
ಬಿಸಿಸಿಐ ಟೂರ್ನಮೆಂಟ್‌ನ ಉಳಿದ ಪಂದ್ಯಗಳಿಗಾಗಿ ಬೆಂಗಳೂರು, ಚೆನ್ನೈ, ಮತ್ತು ಹೈದರಾಬಾದ್ ನಗರಗಳನ್ನು ಆಯ್ಕೆ ಮಾಡಿದೆ. ಒಟ್ಟು 12 ಲೀಗ್ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್‌ಗಳು ಉಳಿದಿವೆ. ಮೂಲತಃ ಹೈದರಾಬಾದ್ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್‌ಗೆ ಆತಿಥ್ಯ ವಹಿಸಬೇಕಿತ್ತು, ಆದರೆ ಕೋಲ್ಕತ್ತಾ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್‌ಗೆ ಸ್ಥಳವಾಗಿತ್ತು. ಆಟಗಾರರು ಮತ್ತು ಅಭಿಮಾನಿಗಳ ಹಿತದೃಷ್ಟಿಯಿಂದ ಈ ಮೂರು ಸ್ಟೇಡಿಯಂಗಳಲ್ಲಿ ಉಳಿದ ಪಂದ್ಯಗಳನ್ನ ನಡೆಸುವ ಸಾಧ್ಯತೆ ಇದೆ.