ಟಾಸ್ ಆದ ನಂತರ ಶುರುವಾದ ಮಳೆ
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಆಟಗಾರರು ಮೈದಾನಕ್ಕೆ ಪ್ರವೇಶ ಪಡೆಯುತ್ತಿದ್ಧಂತೆ ಮಳೆ ಶುರುವಾಗಿದೆ. ಹಾಗಾಗಿ ಎಲ್ಲಾ ಆಟಗಾರರು ಮತ್ತೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮಳೆ ಜೋರಿಲ್ಲವಾದರೂ ನಿರಂತರವಾಗಿ ತುಂತುರು ಮಳೆಯಾಗುತ್ತಿರುವ ಕಾರಣ ಪಂದ್ಯ ಆರಂಭಿಸಲು ಸಾಧ್ಯವಾಗಿಲ್ಲ.
ಎರಡೂ ತಂಡಗಳ ಪ್ಲೇ ಆಫ್ ಪಯಣ
ಪಂಜಾಬ್ ಕಿಂಗ್ಸ್, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ, ಲೀಗ್ ಹಂತದಲ್ಲಿ 14 ಪಂದ್ಯಗಳಿಂದ 9 ಗೆಲುವುಗಳು ಮತ್ತು 1 ಟೈನೊಂದಿಗೆ 19 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ. ಆದರೆ, ಕ್ವಾಲಿಫೈಯರ್ 1ರಲ್ಲಿ RCB ವಿರುದ್ಧ ಸೋತು ಫೈನಲ್‌ಗೆ ನೇರ ಪ್ರವೇಶ ಕಳೆದುಕೊಂಡಿತು. ಇದೀಗ, ಕ್ವಾಲಿಫೈಯರ್ 2 ರಲ್ಲಿ ಗೆದ್ದು ಫೈನಲ್ ತಲುಪುವ ಎರಡನೇ ಅವಕಾಶವನ್ನು PBKS ಪಡೆದಿದೆ. ಮುಂಬೈ ಇಂಡಿಯನ್ಸ್, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, 14 ಪಂದ್ಯಗಳಿಂದ 8 ಗೆಲುವುಗಳೊಂದಿಗೆ 16 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಶುಕ್ರವಾರ (ಮೇ 30, 2025) ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ 20 ರನ್‌ಗಳಿಂದ ಗೆದ್ದು MI ಕ್ವಾಲಿಫೈಯರ್ 2 ತಲುಪಿದೆ.
ಕ್ರೀಡಾಂಗಣ ಮತ್ತು ಹವಾಮಾನ
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಸಹಾಯಕವಾಗಿದೆ. 2025 ರ ಋತುವಿನಲ್ಲಿ, 14 ಪಂದ್ಯಗಳಲ್ಲಿ 9 ಇನ್ನಿಂಗ್ಸ್‌ಗಳು 200+ ರನ್‌ಗಳನ್ನು ಕಂಡಿವೆ, ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 217. ಚೇಸಿಂಗ್ ತಂಡಗಳಿಗೆ ರಾತ್ರಿಯ ತೇವಾಂಶದಿಂದ ಲಾಭವಿದೆ, ಟಾಸ್ ಗೆದ್ದ ತಂಡಗಳು 7ರಲ್ಲಿ ಆರು ಬಾರಿ ಗೆದ್ದಿವೆ.
ಅಹ್ಮದಾಬಾದ್ನಲ್ಲಿ ಮುಂಬೈ ಕೆಟ್ಟ ದಾಖಲೆ
ನರೇಂದ್ರ ಮೋದಿ ಕ್ರೀಡಾಂಗಣ (ಹಿಂದೆ ಮೊಟೆರಾ ಕ್ರೀಡಾಂಗಣ ಎಂದು ಕರೆಯಲಾಗುತ್ತಿತ್ತು) ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಸವಾಲಿನ ಮೈದಾನವಾಗಿದೆ. ಈ ಕ್ರೀಡಾಂಗಣದಲ್ಲಿ MI ಒಟ್ಟು 6 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಗೆಲುವನ್ನು (2014) ಸಾಧಿಸಿದೆ, ಆದರೆ 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಕಳಪೆ ದಾಖಲೆಯು ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಆತಂಕಕಾರಿಯಾಗಿದೆ.
ಮೇ 19, 2014 ರಂದು, ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 25 ರನ್‌ಗಳ ಗೆಲುವು ಸಾಧಿಸಿತು. ಇದು ಈ ಕ್ರೀಡಾಂಗಣದಲ್ಲಿ MI ಯ ಏಕೈಕ ಗೆಲುವಾಗಿದೆ. 2023 ರಿಂದ, ಗುಜರಾತ್ ಟೈಟಾನ್ಸ್ (GT) ಈ ಮೈದಾನದಲ್ಲಿ MI ವಿರುದ್ಧ ಸತತ ನಾಲ್ಕು ಬಾರಿ ಗೆದ್ದಿದೆ. 2023 ರ ಒಂದು ಪಂದ್ಯದಲ್ಲಿ, ಶುಭಮನ್ ಗಿಲ್‌ನ 129 ರನ್‌ಗಳ (60 ಎಸೆತಗಳು) ಭರ್ಜರಿ ಶತಕದಿಂದ GT 233/3 ರನ್ ಗಳಿಸಿ, MI ಯನ್ನು 62 ರನ್‌ಗಳಿಂದ ಸೋಲಿಸಿತು. 2024 ರಲ್ಲಿ, GT 6 ರನ್‌ಗಳಿಂದ MI ಯನ್ನು ಸೋಲಿಸಿತು. 2025 ರ ಲೀಗ್ ಹಂತದಲ್ಲಿ (ಮಾರ್ಚ್ 29, 2025), GT 196/8 ರನ್ ಗಳಿಸಿ MI ಯನ್ನು 36 ರನ್‌ಗಳಿಂದ ಸೋಲಿಸಿತು. ಹಾಗಾಗಿ ಈ ಪಂದ್ಯ ಮುಂಬೈಗೆ ದೊಡ್ಡ ಸವಾಲಾಗಲಿದೆ.
ಹೆಡ್ ಟು ಹೆಡ್ ದಾಖಲೆ
2022 ರ ನಂತರ, ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್‌ಗಿಂತ 2-3 ಅಂತರದಿಂದ ಮುಂದಿದೆ. ಆದರೆ, ಒಟ್ಟಾರೆ ಪಂದ್ಯಗಳ ಬಗ್ಗೆ ಮಾತನಾಡಿದರೆ, ಮುಂಬೈ ತಂಡ 17-16 ಮುನ್ನಡೆಯಲ್ಲಿದೆ.
ಇನ್ನುಮುಂಬೈ ಇಂಡಿಯನ್ಸ್ ತಂಡ 4 ಕ್ವಾಲಿಫೈಯರ್ -2 ಆಡಿದ್ದು 2-2 ರ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಪಂಜಾಬ್ ತಂಡವು ಈ ಹಿಂದೆ ಒಮ್ಮೆ ಮಾತ್ರ ಕ್ವಾಲಿಫೈಯರ್ -2 ತಲುಪಿದೆ. 2014 ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು 24 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್
ಪಿಬಿಕೆಎಸ್ : ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಷ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ವೈಶಾಕ್ ವಿಜಯ್‌ಕುಮಾರ್, ಕೈಲ್ ಜೇಮಿಸನ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್.
ಇಂಪ್ಯಾಕ್ಟ್ ಸಬ್ಸ್: ಪ್ರಭಾಸಿಮ್ರಾನ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್, ಹರ್ಪ್ರೀತ್ ಬ್ರಾರ್, ಸೂರ್ಯಾಂಶ್ ಶೆಡ್ಜ್, ಪ್ರವೀಣ್ ದುಬೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರೀಸ್ ಟೋಪ್ಲಿ.
ಇಂಪ್ಯಾಕ್ಟ್ ಸಬ್ಸ್: ಅಶ್ವನಿ ಕುಮಾರ್, ಕೆಎಲ್ ಶ್ರೀಜಿತ್, ರಘು ಶರ್ಮಾ, ರಾಬಿನ್ ಮಿಂಜ್, ಬೆವನ್ ಜೇಕಬ್ಸ್
June 01, 2025 8:08 PM IST