ಕರುಣ್ ನಾಯರ್ ಕಳಪೆ ಬ್ಯಾಟಿಂಗ್ ವಿರುದ್ಧ ಟೀಕೆ
ಇನ್ನೂ ಟೀಂ ಇಂಡಿಯಾ ಪರ ಆಡಬೇಕು ಎಂದು ಕಾತರದಿಂದ ಕಾಯ್ತಾ ಇರುವ ಹಾಗೂ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸಿರುವ ಕನ್ನಡಿಗ ಕರುಣ್ ನಾಯರ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಅಂದ್ರೆ ಅವರು ಬೆಂಚ್‌ಗಷ್ಟೇ ಸೀಮಿತರಾಗಿದ್ದರು. ಆದ್ರೆ, ಅಂತಿಮವಾಗಿ ಅವರನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಅವರಿಗೆ ಡೆಲ್ಲಿ ಫ್ರಾಂಚೈಸಿ ಚಾನ್ಸ್ ನೀಡಿತ್ತು.
ಮೊದಲ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್
ಅವರು ತಾವು ಆಡಿದ ಮೊದಲನೇ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್ ಆಡುವ ಮೂಲಕ ಟೂರ್ನಿಯಲ್ಲಿ ತಾವೊಬ್ಬ ಅದ್ಭುತ ಆಟಗಾರನಾಗಿ ಮೂಡಿ ಬರುವ ಮುನ್ಸೂಚನೆ ನೀಡಿದ್ದರು. ಆದ್ರೆ, ಮೊದಲ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಸ್ಫೋಟಕ 90 ರನ್ ಸಿಡಿಸಿದ್ದ ನಾಯರ್ ಮುಂದಿನ ಯಾವುದೇ ಪಂದ್ಯದಲ್ಲಿ ಮಿಂಚುವಲ್ಲಿ ವಿಫಲರಾಗಿದ್ದಾರೆ.
6 ಇನ್ನಿಂಗ್ಸ್ 154 ರನ್
ಈ ಬಾರಿಯ ಐಪಿಎಲ್‌ನಲ್ಲಿ ಕನ್ಸಿಸ್ಟೆನ್ಸಿ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರ ಈ ಸೀಸನ್‌ನ ಪ್ರದರ್ಶನ ನೋಡುವುದಾದ್ರೆ, 89 ರನ್ (40 ಎಸೆತ), 0 ರನ್ (3 ಎಸೆತ), 31 ರನ್ (18 ಎಸೆತ), 15 ರನ್ (9 ಎಸೆತ), 4 ರನ್ (4 ಎಸೆತ), 15 ರನ್ (13 ಎಸೆತ), ಇಂದಿನ ಪಂದ್ಯದಲ್ಲಿ 0 ರನ್ (1 ಎಸೆತ).
ಸೋಶಿಯಲ್ ಮೀಡಿಯಾದಲ್ಲಿ ಟೀಕೆ
ಹೀಗೆ ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ ಮೊದಲ ಒಂದು ಪಂದ್ಯದ ಅರ್ಧಶತಕ ಹೊರತುಪಡಿಸಿದರೆ ಅವರು ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾದಲ್ಲಿ ಚಾನ್ಸ್ ಬೇಕು ಅಂದ್ರೆ ಕನ್ಸಿಸ್ಟೆನ್ಸಿ ಬೇಕು ಎಂದು ಹೇಳುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್(ವಿಕೀ), ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲದೀಪ್ ಯಾದವ್, ಟಿ ನಟರಾಜನ್.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೀ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಇಶಾನ್ ಮಾಲಿಂಗ.
May 05, 2025 10:55 PM IST
IPL 2025: ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಎದುರು ನೋಡ್ತಿದ್ದಾರೆ ಈ ಕನ್ನಡಿಗ! ಹೀಗೆಲ್ಲಾ ಆಡಿದ್ರೆ ನೋ ಚಾನ್ಸ್ ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್